ಸುರಕ್ಷಿತ ಕ್ರಮ ಅನುಸರಿಸಿ ಕೊರೊನಾ ವಿರುದ್ಧ ಗೆಲ್ಲಬಹುದು

0

Gummata Nagari : Bijapur News

ಬಿಜಾಪುರ : ಸರ್ಕಾರದ ಮಾರ್ಗಸೂಚಿ, ಮಾಸ್ಕ್ ಧರಿಸುವಿಕೆ ಮೊದಲಾದ ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಕೊರೊನಾ ವಿರುದ್ಧ ಗೆಲ್ಲಬಹುದಾಗಿದೆ ಎಂದು ಶಿಕ್ಷಣ ತಜ್ಞ ಡಾ.ಜಿ.ಡಿ. ಕೋಟ್ನಾಳ ಹೇಳಿದರು.

ಕರ್ನಾಟಕ ನವನಿರ್ಮಾಣ ವೇದಿಕೆ ಹಾಗೂ ಕರ್ನಾಟಕ ಜನಜಾಗೃತಿ ವೇದಿಕೆ ಸಂಯುಕ್ತಾಶ್ರಯದಲ್ಲಿ ಕೊರೊನಾ ರೋಗ ನಿಯಂತ್ರಣ ಜಾಗೃತಿಗಾಗಿ ಏರ್ಪಡಿಸಲಾಗಿದ್ದ ಜಾಗೃತಿ ಕವಿಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನ ಕೋರೊನಾ 19 ಎಂಬ ಮಹಾರೋಗ ಜಾಗತಿಕ ಮಟ್ಟದಲ್ಲಿ ಮನುಕುಲದ ಜನಜೀವನವನ್ನು ಅಸ್ಥಿರಗೊಳಿಸಿದೆ. ಜನಸಾಮಾನ್ಯರು ಕೃಷಿ ಕೂಲಿಕಾರ್ಮಿಕರು, ಬಡವರು ಸುಧಾರಿಸಿಕೊಳ್ಳಲು ಇನ್ನೂ ಹಲವು ದಿನಗಳೆ ಬೇಕಾಗಿದೆ. ಈ ಪ್ರಯುಕ್ತವಾಗಿ ತಲ್ಲಣಗೊಂಡ ಜನರ ಸಾವು ನೋವುಗಳು ಸಂಭವಿಸಿರುವುದು ನೋವಿನ ಸಂಗತಿ ಎಂದು ವಿಷಾದಿಸಿದರು.

ಬಂಡಾಯ ಸಾಹಿತಿ ಶೇಷರಾವ ಮಾನೆ ಮಾತನಾಡಿ, ಕವಿತೆಗೆ ಕಣ್ಣು ಬೇಕು, ಕವಿತೆಗೆ ಕಿವಿಯು ಬೇಕು ಮಾನವೀಯತೆ ಇಲ್ಲದ ಸಾಹಿತ್ಯ ಸಾಹಿತ್ಯವಾಗಲಾರದು. ಪ್ರಾಣಿ ಪಕ್ಷಿಗಳು ಕೂಡಿ ಕಲೆತು ಜೀವನವನ್ನು ಸಮನಾಗಿ ಹಂಚಿಕೊAಡು ಬದುಕುತ್ತವೆ. ಆದರೆ ಮಾನವಗೆ ಬುದ್ಧಿ ಇದ್ದರು ಕೂಡಾ ಏಕೆ ಸಮಾನತೆಯಿಂದ ಬದುಕಲಾರ ಎಂದರು. ಕವನಗಳ ಮೂಲಕ ಕೊರೊನಾ ರೋಗದ ತಲ್ಲಣ, ಕೊರೊನಾ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಸಂಘಟಿಸಿರುವುದು ಸಂತೋಷ ತಂದಿದೆ ಎಂದರು.

ಕರ್ನಾಟಕ ರಾಜ್ಯ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಆನಂದ ಜೋಶಿ ಮಾತನಾಡಿ, ಕವಿಗಳ ಜ್ಞಾನದಿಂದ ವಿಜ್ಞಾನವಾಗಿದೆ. ಕವಿಗಳು ಹರಿಯುವ ನದಿಯಾಗಬೇಕು. ತನ್ನ ಎಡ ಬಲವನ್ನು ಹಸಿರುಗೊಳಿಸುವಂತೆ ಪ್ರತಿಯೊಬ್ಬ ಮಾನವ ಅದರ ಅಣಿಯಾಗಬೇಕು. ಟಿ.ವಿ., ಮೊಬೈಲ್ ಮತ್ತು ಕಂಪ್ಯೂಟರ್‌ಗಳಿಂದ ಓದುವ ಆಸಕ್ತಿ ಕಡಿಮೆಯಾಗಿದೆ ಎಂದರು.

ಉರ್ದು ಸಾಹಿತಿ ಹಯ್ಯಾತ್ ರೋಜಿನದಾರ ಮಾತನಾಡಿದರು. ಸರ್ಕಾರಿ ನೌಕರರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸುರೇಶ ಶೇಡಶ್ಯಾಳ, ಜ್ಯೋತಿ ಕೃಷ್ಣಾ ನಾಯಕ, ಸುರೇಶ ಬಿಜಾಪುರ ಮುಖ್ಯ ಅತಿಥಿಯಾಗಿದ್ದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದ ಎಂ.ಎ. ಭಕ್ಷಿ, ಫಯಾಜ ಕಲಾದಗಿ, ಮನೋಹರ ಕಾಂಬಳೆ, ಎ.ಎಸ್.ಪಟೇಲ, ಶೇಷರಾವ ಮಾನೆ, ಅಶೋಕ ಹೊಸಮನಿ ಅವರನ್ನು ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.

ಸಿದ್ದಪ್ಪ ಹದಿಮೂರು, ಮಯೂರ ಸಜ್ಜನ, ಸೋಮಶೇಖರಯ್ಯ ಹಿರೇಮಠ, ಯಮನೂರಪ್ಪ ಅರಬಿ, ಮಹಾದೇವಿ ಪಾಟೀಲ, ಶಿವಾಜಿ ಮೋರೆ, ಮಹೇಶ ಸಜ್ಜನ, ಹಣಮಂತ ಕುಲಕರ್ಣಿ, ರುಕ್ಮಿಣಿ ಚವ್ಹಾಣ, ಮಲ್ಲಿಕಾರ್ಜುನ ಬುರ್ಲಿ, ವಿಶ್ವನಾಥ ಅರಬಿ, ಅಶೋಕ ಹೊಸಮನಿ, ಬಾಬುರಾವ ಕುಲಕರ್ಣಿ, ಶಾಂತಾ ಜೊಗೆಣ್ಣವರ, ಮಾದರ ಅನಂತರಾವ ಮಂಗಳವಡೆ, ಕಾರ್ಯನಿರ್ವಾಹಕ ಅಭಿಯಂತರರಾದ ಮಾಧವ ಅನಂತರಾವ ಮಂಗಳವಡೆ, ವಸಂತರಾವ ಕೊರತೆ, ನೀಲಕಂಠ ಬನಸೋಡೆ, ಪ್ರಕಾಶ ಇನಾಮದಾರ, ವಿಠ್ಠಲ ಭೈರೊಡಗಿ, ದಾನೇಶ ಅವಟಿ ಕವನ ವಾಚಿಸಿದರು. ಸುರೇಶ ಬಿಜಾಪುರ ಕಾರ್ಯಕ್ರಮ ನಿರೂಪಿಸಿದರು. ಗುರುರಾಜ ಪಂಚಾಳ ಸ್ವಾಗತಿಸಿದರು. ಕೃಷ್ಣಾಜಿ ಕುಲಕರ್ಣಿ ವಂದಿಸಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.