ಐದು ಲಕ್ಷ ಕ್ಯೂಸೆಕ್ಸ್ ದಾಟಿದ ನೀರು ನದಿ ನೀರು

ಏರುತ್ತಿದೆ ಭೀಮೆಯ ಒಡಲು ಆತಂಕದಲ್ಲಿ ತೀರದ ಜನರು

0

Gummata Nagari : Bijapur News

ಆಲಮೇಲ : ಕ್ಷಣ ಕ್ಷಣಕ್ಕೂ ಭೀಮಾ ನದಿ ನೀರು ಏರುತ್ತಿಲೇ ಸಾಗಿರುವದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ.

ಮಹಾರಾಷ್ಟ್ರದ ಉಜನಿ ಮತ್ತು ವೀರ ಜಲಾಶಯದ ಜಲಾನಯನ ಪ್ರದೇಶ ಹಾಗೂ ಕರ್ನಾಟಕದ ಭೀಮಾನದಿ ಪಾತ್ರದಲ್ಲಿ ವಿಪರೀತ ಮಳೆಯಗುತ್ತಿರುವದರಿಂದ ಭೀಮನದಿಗೆ ನೀರು ಹೆಚ್ಚು ಹರಿದು ಬರುತ್ತಿದೆ ಹೀಗಾಗಿ ಸಿಂದಗಿ ತಾಲೂಕಿನ ಅನೇಕ ಗ್ರಾಮಗಳಿಗೆ ನದಿ ನೀರು ನುಗ್ಗಿವೆ ಅದರ ಪರಿಣಾಮ ಅನೇಕ ಜನರ ಮನೆಗಳು ನೀರಿನಲ್ಲಿ ನಿಂತಿವೆ, ಸಾವಿರಾರು ಎಕರೆ ಬೆಳೆದು ನಿಂತಿದ್ದ ಬೆಳೆ ನೀರಲ್ಲಿ ಹೊಮ ಮಾಡಿದಂತಗಿದೆ.

ದೇವಣಗಾಂವ ಸಮೀಪದ ಸೊನ್ನ ಬ್ಯಾರೆಜ್‌ನ 29 ಗೇಟ್‌ಗಳ ಪೈಕಿ 28 ಗೇಟ್‌ಗಳ ಮೂಲಕ 5 ಲಕ್ಷ 11 ಸಾವಿರ ಕೂಸೆಕ್ಸ್ ನೀರು ಹೊರಬಿಡಲಾಗುತ್ತಿದೆ. ಬುಧವಾರ ಸಂಜೆ 6ಕ್ಕೆ 7.4ಮೀ. ಇದ್ದ ನೀರು, ಗುರುವಾರ ಬೆಳಿಗ್ಗೆ 8ಮೀ.ಗೇ ಏರಿ ನೀರು ಮದ್ಯಾನ್ಹ 4ಕ್ಕೆ 11.80 ಮೀ. ಹರಿಯುತ್ತಿದೆ. ರಾತ್ರಿ ಇನ್ನೂ ಹೆಚ್ಚಾಗುವ ಸದ್ಯತೆ ಇದೆ ಆದ್ದರಿಂದ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೆಕು ಎಂದು ಅಫಜಲಪುರ ಭೀಮಾ ಏತ ನೀರಾವರಿ ಇಲಾಖೆ ಎಇಇ ಅಶೋಕ ಕಲಾಲ ತಿಳಿಸಿದ್ದಾರೆ.

ದೇವಣಗಾಂವ-ಶಿವಪೂರ ಬ್ಯಾರೇಜ್ ಸಂಪೂರ್ಣ ಮುಳುಗಡೆ ಯಾಗಿದೆ, ಗತ್ತರಗಿ-ಬಗಲೂರ ರಾಜ್ಯ ಹೆದ್ದಾರಿಯ ಬ್ರಿಜ್‌ಕಂ ಬ್ಯಾರೇಜ್ ಮುಳುಗಡೆಯಾಗಿದ್ದು ಕಲಬುರಗಿ, ವಿಜಯಪುರ ಜಿಲ್ಲೆಗಳ ಸಂಪರ್ಕ ಕಡಿತಗೊಂಡಿದೆ. ಚಿಕ್ಕಹವಳಗಿ ಶಿರಸಗಿ ಮಧ್ಯೆದ ಹಳ್ಳಕ್ಕೂ ನೀರು ಹೊಕ್ಕ ಪರಿಣಾಮ ರಾಜ್ಯ ಹೆದ್ದಾರಿ ಸಂಪಕ್ ಬಂದಾಗಿದೆ. ದೇವಣಗಾಂವ ಸೇತುವೆಯ ಕಲ್ಲಿನ ಕಂಬಗಳು ಮುಳುಗಿ ನೀರು ಹರಿಯುತ್ತಿದ್ದು ಕಮಾನುಗಳು ಮಾತ್ರ ಕಾಣುತ್ತಿವೆ.

ತಾರಾಪೂರ ಗುರುವಾರ ಬೆಳಿಗ್ಗೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತಗೊಂಡು ಹೊರಜಗತ್ತಿನ ಸಂಪರ್ಕ ಕಳೆದುಕೊಂಡಿತು, ತಾವರಖೇಡ, ಬ್ಯಾಡಗಿಹಾಳ, ದೇವಣಗಾಂವ, ಶಂಬೇವಾಡ ಗ್ರಾಮಗಳಲ್ಲಿ ನೀರು ನುಗ್ಗಿದೆ ಇನ್ನೂ ಕಡಣಿ, ಕುರುಬತಹಳ್ಳಿ, ಕಡ್ಲೇವಾಡ, ಚಿಕ್ಕಹವಳಗಿ, ಕಕ್ಕಳಮೇಲಿ, ಶಿರಸಗಿ, ಬಗಲೂರ, ಕುಳೆಕುಮಟಗಿ ಗ್ರಾಮಗಳ ಸಾವಿರಾರು ಎಕರೆ ಬೆಳೆದು ನಿಂತ ಬೆಳೆಗಳು ನೀರಿನಲ್ಲಿ ನಿಂತಿವೆ.

ಭೀಮಾ ನದಿಗೆ ಸೆರುವ ಅನೇಕ ಹಳ್ಳಗಳು ಒತ್ತುಗಳು ನೀರು ತುಂಬಿ ಎಲ್ಲೆಂದರಲ್ಲಿ ನೀರು ಸೇರುತ್ತಿದೆ ಹೀಗಾಗಿ ಹೆಚ್ಚು ಬೆಳೆಗಳು ಆಹುತಿಯಾಗಿವೆ. ಶಂಬೇವಾಡ ಹಳೆಊರು ಸಮೀಪ ನೀರು ಬಂದಿವೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ನೀರು ಬಂದಿರುವದರಿAದ ಜನರು ಗ್ರಾಮದಿಂದ ಹೊರಬರಲು ಪರದಾಡುವಂತಾಗಿದೆ.

ಕುಮಸಗಿ ಗ್ರಾಮದ ಸಮೀಪ ಇರುವ ಕುಂಬಾಒತ್ತಿ ಹಾಗೂ ಲಂಡಕೆನ ಹಳ್ಳದ ಸೇತುವೆಯ ಮೇಲೆ ನೀರು ಬಂದು ದೇವಣಗಾಂವ, ಕಡ್ಲೇವಾಡ, ಶಂಬೇವಾಡ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಕುಮಸಗಿ ಗ್ರಾಮದತ್ತ ನೀರು ನುಗ್ಗಿದೆ, ಹೊಲಗಳಲ್ಲಿ ವಸವಿದ್ದ ಜನರು ಗ್ರಾಮಗಳತ್ತ ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿದ್ದಾರೆ.

ದೇವಣಗಾಂವದ ಹನುಮಾನ ದೇವಸ್ಥಾನ, ಅಂಬಿಗರ ಚೌಡಯ್ಯ ದೇವಸ್ಥಾನ, ಶಾಂತೇಶ್ವರ ದೇವಸ್ಥಾನ, ಮುಸ್ಲಿ ಸಮಾಜದ ಸ್ಮಶಾನ ನೀರು ಆವರಿಸಿದೆ ಅನೇಕ ಮನೆಗಳಿಗೆ ನೀರು ಹೊಕ್ಕಿವೆ ಜನ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.