ಬಾಲಕಿ ಶವ ಪತ್ತೆ

0

Gummata nagari : Vijaypur

ಕೊಲ್ಹಾರ : ಪಟ್ಟಣದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 218ರ ಇಂಡಿಯನ್ ಆಯಿಲ್ ಪಂಪ್ ಹತ್ತಿರದ ಕಲ್ಲು ಕ್ವಾರಿಯಲ್ಲಿನ ನೀರಿನಲ್ಲಿ ಬಾಲಕಿ ಶವ ಪತ್ತೆಯಾಗಿದೆ.

ಶವವನ್ನು ಭಾರತಿ ತಾರಸಿಂಗ್ ಚೌವ್ಹಾಣ (15) ಎಂದು ಗುರುತಿಸಲಾಗಿದ್ದು ವಿಜಯಪುರ ತಾಲ್ಲೂಕಿನ ಹಂಚಿನಾಳ ತಾಂಡಾ ದವಳಾಗಿದ್ದಾಳೆ. ಕಳೆದ ಸುಮಾರು 6 ತಿಂಗಳಿಂದ ಭಾರತಿ ತನ್ನ ತಂದೆ ತಾರಸಿಂಗ್ ನೊಂದಿಗೆ ಪಟ್ಟಣದ ಖಡಿ ಮಷಿನವೊಂದರಲ್ಲಿ ಕೋಲಿ ಕೆಲೆಸ ಮಾಡಿ ಕೊಂಡು ವಾಸವಾಗಿದ್ದಳು. ಕಳೆದ ರಾತ್ರಿ 10ಕ್ಕೆ ಮನೆಯಿಂದ ಹೋದ ಯುವತಿ ಬೆಳಗ್ಗೆ ಕಲ್ಲಿನ ಕ್ವಾರಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.ಕೊಲ್ಹಾರ ಪಿಎಸ್ಐ ಸಿದ್ದಪ್ಪ ಯಡಹಳ್ಳಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನೆಡೆಸಿದ್ದು ಪ್ರಕರಣ ದಾಖಲಾಗಿದೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.