ಕೈಗೆ ಬಂದ ತುತ್ತು ಬಾಯಿಗೆ ಬರದಂತಾದ ರೈತರ ಬದುಕು

ಮುಳವಾಡ ಯೋಜನೆ ಕಾಮಗಾರಿ ಸಂಪೂರ್ಣ ಕಳಪೆ: ಆರೋಪ

0

ಕರೋನಾ ಬಂದು ಆರು ತಿಂಗಳಿಂದ ಒಂದ ಬಿಡಿಗಾಸು ರೊಕ್ಕ ದುಡಿಲಾಕ ಆಗಿಲ್ಲರೀ, ಅಲ್ಲಿ ಇಲ್ಲಿ ಸಾಲ ಮಾಡಿ ಸಂಸಾರ ನಡಸಾಕ್ಕತ್ತಿನರೀ ಈ ವರ್ಷ ತೋಗರಿ ಚೋಲೊ ಬರತಾವ ಅಂತ ದೈರ್ಯದಿಂದ ಇದ್ದಿನರೀ, ಆದರ್ ಈ ಕ್ಯಾನಲ್ ಒಳಗಿಂದ ನೀರು ದಿನಾ ಬಸಿಲಾಕ್ಕಹತ್ಯಾವರೀ ಅದಕ್ಕ ಬೆಳೆ ಹಳದಿ ಆಗಿ ನೆಟೆ ಹೋಗ್ಯಾವರೀ ಎುನು ಮಾಡುದು ದಿಕ್ಕ ತೋಚಲ್ಲಾಗ್ಯಾದ್ರಿ…
 – ಮಲ್ಲಯ್ಯ ಹಿರೇಮಠ (ರೈತರು)

Gummata Nagari : Bijapur News

ಕಲಕೇರಿ : ಮಳೆಯಾಶ್ರಿತ ಭೂಮಿಗಳಲ್ಲಿ ಮುಂಗಾರು ಬೆಳೆಗಳನ್ನೆ ನಂಬಿ ವರ್ಷಪೂರ್ತಿ ಜೀವನದ ಬಂಡಿ ಸಾಗಿಸಬೇಕಾದ ಅನಿವಾರ್ಯತೆ ಇದೆ, ದಿನನಿತ್ಯ ಜೀವನದಲ್ಲಿ ಹೆಚ್ಚುತ್ತಿರುವ ಖರ್ಚುಗಳನ್ನು ಸರಿದೂಗಿಸಲು ಬೇರೆನು ಆದಾಯದ ಮೂಲವಿಲದೇ ಕೇವಲ ಬೆಳೆಯಿಂದ ಬರುವ ಆದಾಯವನ್ನೆ ನಂಬಿರುವ ರೈತನಿಗೆ ಕರೋನಾ ಮಹಾಮಾರಿ ಒಂದೆಡೆಯಾದರೆ, ಅತೀ ವೃಷ್ಟಿ ಒಂದು ಕಡೆ, ಎದೆ ಎತ್ತರಕ್ಕೆ ಬೆಳೆದ ಬೆಳೆ ಇನ್ನೆನ್ನು ಎಲ್ಲರಿಗೂ ಅನೂಕೂಲವಾಯಿತು ಎನ್ನುವಷ್ಟರಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಈ ಕ್ಯಾನಲ್ ಕೆಳಗಿಂದ ನೀರು ನಮ್ಮ ಹೋಲದಾಗ ಬಂದು ತೋಗರಿ ಹೋಲದಾಗ ನಿಂತು, ಪೂರಾ ನೆಟೆ ಹೋಗ್ಯಾವರಿ, ಇದರಿಂದ ಬಾಳ ಲೂಕ್ಸಾನ ಆಗ್ಯಾದ್ರಿ, ಹೆಂಡರು, ಮಕ್ಕಳನ್ನ ಹ್ಯಾಂಗ ಸಾಕಬೇಕು ತಿಳಿವಲ್ತರಿ, ಸರಕಾರದವರು ದೊಡ್ಡ ಮನಸ್ಸ ಮಾಡಿ ಎರಡು ವರ್ಷದ ಪರಿಹಾರ ಕೊಡಸಬೇಕ್ರಿ, ನಿಮಗ ಪೂಣ್ಯಾ ಬರತ್ತಾದ್ರಿ.                        -ಶಾಂತಯ್ಯ ಚನ್ನಯ್ಯ ಗಣಾಚಾರಿ (ನೊಂದ ರೈತನ ಕಣ್ಣಿರು)

ಕಲಕೇರಿ ಮತ್ತು ಬಿಂಜಲಭಾವಿಯ ಮಧ್ಯದಲ್ಲಿ ನಿರ್ಮಿಸಲಾದ ಮುಳವಾಡ ಏತ ನೀರಾವರಿ ಯೋಜನೆಯ LAQ:SR:58/2016/2017ರ ಕಾಲುವೆ ಅತ್ಯಂತ ಕಳಪೆ ಮಟ್ಟದಿಂದ ನಿರ್ಮಿಸಿರುವುದರಿಂದ ಕಳೆದ ವರ್ಷ(22-09-2019) ಇಲ್ಲಿಯ ರೈತರು ಆಕ್ರೋಶದಿಂದ ಈ ಕಾಲುವೆಯೂ ಸಂಪೂರ್ಣ ಕಳಪೆಯಾಗಿದೆ, ಆದ್ದರಿಂದ ಕಾಲುವೆ ಕೆಲಸ ಪುನರ್ ನಿರ್ಮಿಸಿ ಅನುಕೂಲ ಮಾಡಿಕೊಡಬೇಕು, ಹಾಗೇ ತಪ್ಪೆಸಗಿದವರ ಮೇಲೆ ಯೋಗ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕುಳಿತು ಧರಣಿ, ಪ್ರತಿಭಟನೆ,ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ರೈತ ಮುಖಂಡರ ಆಗ್ರದ ಮೇರೆಗೆ ಸ್ಥಳಕ್ಕೆ ಕೆಬಿಜೆನಲ್ ಮುಖ್ಯ ಅಭಿಯಂತರಾದ ಕುಲಕರ್ಣಿ ಹಾಗೂ ದೇವರ ಹಿಪ್ಪರಗಿ ಶಾಸಕರ ಸಹೋದರರು ಆಗಮಿಸಿ ಮುಗಿಗೆ ತುಪ್ಪ ಸವರುವ ಕೆಲಸ ಮಾಡಿ ಹೋಗಿದ್ದಾರೆ.

ಮೊದಲೆ ಬರಗಾಲ ಜಿಲ್ಲೆಯೆಂದು ಪ್ರಸಿದ್ಧವಾದ ನಮ್ಮ ವಿಜಯಪುರ ಜಿಲ್ಲೆಗೆ ಕಾಲುವೆ ಮುಖಾಂತಾರ ನೀರು ಹಾಯಿಸಿ ಬೆಳೆಗಳನ್ನು ಬೆಳೆಯಲು ಅನುಕೂಲವಾಗಲಿ ಎಂದು ಘನವೆತ್ತ ಸರಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಈ ಕಾಮಗಾರಿಗೆ ಚಾಲನೆ ಕೋಟ್ಟಿದ್ದಾರೆ, ಆದರೆ ಮಧ್ಯವರ್ತಿಗಳ ಅತೀ ಆಸೆಯಿಂದ ಈ ಕಾಮಗಾರಿ ಸರಿಯಾಗಿ ಮಾಡದೇ ಸರಕಾರದ ಕಣ್ಣಿಗೂ ಮಣ್ಣೆರಚಿ ದ್ರೋಹ ಎಸಗಿದ್ದಾರೆ, ಇದನ್ನು ಕಂಡ ಅಧಿಕಾರಗಳು ಕಂಡು ಕಾಣದಂತೆ ಜಾಣ ಕಿವುಡರಂತೆ ವರ್ತಿಸುತ್ತಿದ್ದಾರೆ.

ರೈತ ದೇಶದ ಬೆನ್ನೆಲುಬು, ರೈತನಿಗೆ ಮೋಸವಾದರೆ ಹೇಗೆ, ಅತೀ ಶೀರ್ಘದಲ್ಲಿ ಇದಕ್ಕೆ ಸಂಭದಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ನಷ್ಟಹೊಂದಿದ ರೈತರಿಗೆ ಪರಿಹಾರ ಒದಗಿಸಬೇಕು ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಷ್ಟಕ್ಕಿಡಾಗ ರೈತರೊಂದಿಗೆ ಧರಣಿ ಮಾಡಲಾಗುವುದು, ತಪ್ಪಿತಸ್ಥ ಗುತ್ತಿಗೆದಾರರಿಗೆ ಸರಿಯಾದ ಶಿಕ್ಷೆ ಆಗಬೇಕು.                                            – ಹಣಮಂತ ವಡ್ಡರ,

ಸುಮಾರು 120 ಎಕರೆ ಹೋಲದಲ್ಲಿ ಬೆಳೆದ ತೋಗರಿಯೂ ಅಧಿಕಾರಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರರ ಬೇಜವ್ದಾರಿಯಿಂದ ಕಳಪೆ ಮಟ್ಟದ ಕಾಲುವೆ ನಿಮಿತ್ತ ಲಕ್ಷಾಂತರ ರೂಪಾಯಿ ಬೆಳೆ ನೀರು ಪಾಲಾಗಿದೆ, ಇದಕ್ಕೆ ಯಾರು ಹೋಣೆ? ಅಧಿಕಾರಿಗಳೊ! ಗುತ್ತಿಗೆದಾರರೋ! ಅಥವಾ ದೇಶದ ಬೆನ್ನೆಲುಬಾದ ರೈತರೊ! ರೈತರನ್ನೆ ನಂಬಿದ ಕುಟುಂಬಸ್ಥರೊ!

ಕಳೆದ ವರ್ಷವೂ ಇದೇ ತರನಾಗಿ ನೀರು ಹೋಲದಲ್ಲಿ ನಿಂತು ನಷ್ಟ ಅನುಭವಿಸಿದ್ದಾರೆ, ಈ ವರ್ಷವೂ ಮತ್ತೆ ಅದೇ ರೀತಿ ಆದರೆ ರೈತನ ಗೋಳು ಕೇಳುವವರು ಯಾರು ? ಒಂದು ನಮಗೆ ಪರಿಹಾರ ಒದಗಿಸಿಕೊಡಿ ಇಲ್ಲ ಕಾಲುವೆ ಕಿತ್ತಕೊಂಡು ಹೋಗರಿ ಎನ್ನುವುದು ನೊಂದ ರೈತರ ಭಾವನೆಯಾಗಿದೆ.

-ಸಂಗಮೇಶ ಸಗರ

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.