ರೈತರಿಗೆ ಸೌಲಭ್ಯ ಕಲ್ಪಿಸಿ ಹಿತ ಕಾಪಾಡಿ

0

Gummata Nagari : Bijapur News

ಬಿಜಾಪುರ : ಕೊರೊನಾ ಸಂದರ್ಭದಲ್ಲಿ ರೈತರ ಬದುಕು ಅತಂತ್ರವಾಗಿದ್ದು, ಸರಕಾರ ಕೂಡಲೇ ರೈತರಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿ ರೈತರ ಹಿತ ಕಾಪಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ಜಿಲ್ಲಾ ಸಂಚಾಲಕ ನಿಂಗರಾಜ ಆಳೂರ ಆಗ್ರಹಿಸಿದರು.

ನಗರದ ಶಿಕಾರಖಾನೆಯಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ವಿಶ್ವ ಲಿಂಗಾಯತ ಪಂಚಮಸಾಲಿ ಸೇವಾ ಸಮಿತಿ ವತಿಯಿಂದ ಏರ್ಪಡಿಸಿದ್ದ `ಕೊರೋನಾ ಮತ್ತು ರೈತರ ಸ್ಥಿತಿ ಗತಿ ಕುರಿತು ವಿಚಾರ ಸಂಕಿರಣದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ದೇಶದ ಬೆನ್ನೆಲುಬಾದ ರೈತನು ಇಂದು ದಯನೀಯ ಸ್ಥಿತಿಯಲ್ಲಿದ್ದು ಯುವ ಜನಾಂಗ ಕೃಷಿ ಕಾರ್ಯಗಳತ್ತ ಮುಖ ಮಾಡದೆ ಇರುವದು ವಿಷಾದನೀಯ. ಆಧುನಿಕ ಕೃಷಿ ಪದ್ದತಿ ಅಳವಡಿಸಿಕೊಂಡು ವಾಣಿಜ್ಯ ಬೆಳೆ ಬೆಳೆದು ರೈತರು ಬದುಕನ್ನು ಹಸನಗೊಳಿಸಿಕೊಳ್ಳಲು ರೈತರಿಗೆ ಸರಕಾರ ಸೂಕ್ತ ನೆರವು ಯೋಜನೆಗಳನ್ನು ಕಲ್ಪಿಸಲಿ ಎಂದರು.

ನ್ಯಾಯವಾದಿ ದಾನೇಶ ಅವಟಿ ಮಾತನಾಡಿ, ಕೃಷಿ ಪ್ರಧಾನ ನಮ್ಮ ದೇಶ ವಿವಿಧ ಬೆಳೆಗೆ ಹೆಸರುವಾಸಿ, ನಮ್ಮ ದೇಶಕ್ಕೆ ಬೇರೆ ರಾಷ್ಟçಗಳಿಂದ ಆಹಾರ ಮತ್ತು ಸಾಂಬಾರು ಪದಾರ್ಥಕ್ಕೆ ವಿದೇಶಿಗರು ಮರುಳಾಗಿ ಬಂದರು ಎಂಬ ಇತಿಹಾಸವಿದೆ. ನಗರೀಕರಣ ತಾಂತ್ರಿಕತೆ ಕಾರ್ಖಾನೆಗಳಿಂದ ಹೊಸ ಶೈಲಿಯಿಂದ ಕೃಷಿ ಭೂಮಿ ಬರಡಾಗುತ್ತಿರುವುದು ನೋವಿನ ಸಂಗತಿ. ನಮ್ಮ ಭೂಮಿ ನಮ್ಮ ಸಂಪ್ರದಾಯಿಕ ಬೇಸಾಯ ಪದ್ದತಿ ಉಳಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಅಧ್ಯಕ್ಷ ಗವಿಸಿದ್ದ ಅವಟಿ ಮಾತನಾಡಿದರು. ಕಲ್ಲಪ್ಪ ಅಡಿಹುಡಿ, ವಿಜಯಕುಮಾರ ಜಾಬಾ, ಬಸವರಾಜ ಕೊನಳ್ಳಿ, ಮಂಜುನಾಥ ನಿಡೋಣಿ, ಬಸಮ್ಮ ಗುಜರಿ, ಜ್ಯೋತಿ ಪಾಗಾದ, ಅಂಜನಾ ಪಾಟೀಲ, ನಿಂಗಪ್ಪ ಸಂಗಾಪೂರ, ಜಗದೀಶ ಬಳೂತಿ ಉಪಸ್ಥಿತರಿದ್ದರು.

ಇಂಡಿ ಮಾಜಿ ಶಾಸಕ ರವಿಕಾಂತ ಪಾಟೀಲ ಅವರ ತಾಯಿ ಶ್ರೀಮತಿ ಪಾರ್ವತಿಬಾಯಿ ಶಂಕ್ರೆಪ್ಪ ಪಾಟೀಲ ಅವರ ನಿಧನಕ್ಕೆ ಸಭೆಯಲ್ಲಿ ಶೋಕ ವ್ಯಕ್ತಪಡಿಸಿ ಮೌನ ಆಚರಿಸಿ ಶ್ರದ್ಧಾಂಜಲಿ ಸಮರ್ಪಿಸಲಾಯಿತು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.