ಬಿಜಾಪುರ ಜಿಲ್ಲೆಯಲ್ಲಿ ಹೊಸ ಕೈಗಾರಿಕೋದ್ಯಮ ಸ್ಥಾಪಿಸಿ

ಕೇಂದ್ರ, ರಾಜ್ಯ ಸರಕಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಜನಸೇನೆ ಒತ್ತಾಯ

0

Gummata Nagari : Bijapur News

ಬಿಜಾಪುರ : ಬಿಜಾಪುರದಲ್ಲಿ ಜಿಲ್ಲೆ ಹಾಗೂ ನಗರದಲ್ಲಿ ಹೊಸ ಹೊಸ ಕೈಗಾರಿಕೋದ್ಯಮ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ಥಾಪನೆ ಮಾಡುವ ಮೂಲಕ ಉದ್ಯೋಗ ಸೃಷ್ಟಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜನಸೇನೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು.

ನ್ಯಾಯವಾದಿ ದಾನೇಶ ಅವಟಿ ಮಾತನಾಡಿ, ಡಾ. ನಂಜುಡಪ್ಪ ವರದಿ ಪ್ರಕಾರ ಉತ್ತರ ಕರ್ನಾಟಕದ ಬಿಜಾಪುರ ಜಿಲ್ಲೆ ಕೃಷಿ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣದೆ ಅತ್ಯಂತ ಹಿಂದುಳಿದಿದ್ದು ಅತ್ಯಂತ ನೋವಿನ ಸಂಗತಿ ಈ ಕುರಿತು ಸಂಸದರು ಶಾಸಕರು ವಿಧಾನ ಪರಿಷತ್ ಸದಸ್ಯರು ಮುಂಬರುವ ಅದಿವೇಶನದಲ್ಲಿ ಧ್ವನಿ ಎತ್ತಬೇಕು, ಜಿಲ್ಲೆಯಲ್ಲಿ ಕೈಗಾರಿಕಾ ಸ್ಥಾಪನೆಯ ವಿಷಯವಾಗಿ ಪ್ರಬಲವಾದ ಧ್ವನಿ ಎತ್ತಬೇಕು ಎಂದರು.

ಸಂಘಟನೆ ಜಿಲ್ಲಾಧ್ಯಕ್ಷ ಇಜಾಜಅಹ್ಮದ್ ಮುಕ್ಬಿಲ್ ಮಾತನಾಡಿ, ಬಿಜಾಪುರ ನಗರ ಹಾಗೂ ಜಿಲ್ಲೆಯಲ್ಲಿ ಕೈಗಾರಿಕೆ ಅಭಿವೃದ್ಧಿಗಾಗಿ ಜನತೆ ಒಲವು ತೋರಿದ್ದು ಬಿಜಾಪುರ ನಗರದಲ್ಲಿ ಕೆ.ಆಯ್.ಡಿ.ಬಿ.ಯಲ್ಲಿ ಸಾಕಷ್ಟು ಜಮೀನು ಕೈಗಾರಿಕೆಗೊಸ್ಕರ ಮೀಸಲಿಟ್ಟಿದ್ದು ಹಾಗೂ ಮುಳವಾಡದಲ್ಲಿ 312 ಎಕರೆ ಜಮೀನು ಕೈಗಾರಿಕೆಗೊಸ್ಕರ ಇದ್ದು. ಬಿಜಾಪುರ ನಗರ ಹಾಗೂ ಜಿಲ್ಲೆಯಲ್ಲಿ ಸಾಕಷ್ಟು ಯುವಕರು ವಿದ್ಯಾವಂತರಾಗಿ ಆಯ್.ಟಿ.ಆಯ್., ಡಿಪ್ಲೊಮಾ, ಇಂಜಿನಿಯರಿಂಗ್ ಕಲಿತು ನಿರುದ್ಯೋಗಿಯಾಗಿ ಕೆಲಸ ಇಲ್ಲದೆ ಬೆಂಗಳೂರು ಹಾಗೂ ಬೇರೆ ರಾಜ್ಯಕ್ಕೆ ಉದ್ಯೋಗ ಸಲುವಾಗಿ ಒಲಸೆ ಹೋಗುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲಾ ಕಾರ್ಯಾಧ್ಯಕ್ಷ ಸಾಜೀದಹುಸೇನ ರಿಸಾಲದಾರ ಮಾತನಾಡಿ, ಬಿಜಾಪುರ ನಗರ ಹಾಗೂ ಜಿಲ್ಲೆಯಲ್ಲಿ ಹೊಸ ಹೊಸ ಕೈಗಾರಿಕೊಧ್ಯಮ ಸ್ಥಾಪನೆಯಾಗಬೇಕಾದ ಅವಶ್ಯಕತೆ ಇದೆ, ಜಿಲ್ಲೆಯಲ್ಲಿ ಅಭಿವೃದ್ಧಿ ಕೈಗಾರೀಕರಣ ಅತ್ಯವಶ್ಯಕವಾಗಿದ್ದು ಕೆಲಸವಿಲ್ಲದೆ ಜನತೆ ವಲಸೆ ಹೋಗುತ್ತಿದ್ದಾರೆ. ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಕೆಲಸ ಇಲ್ಲದೆ ಪರದಾಡುತ್ತಿದ್ದಾರೆ. ಇದನ್ನು ತಪ್ಪಿಸಲು ಸರ್ಕಾರ ಕೂಡಲೇ ಹೊಸ ಹೊಸ ಉದ್ಯಮ ಕೈಗಾರಿಕಾ ಸ್ಥಾಪಿಸಲು ಮುಂದಾಗಬೇಕೆAದು ಆಗ್ರಹಿಸಿದರು.

ಶಮಶೇರಅಲಿ ಮುಲ್ಲಾ ಮಾತನಾಡಿದರು. ಅಬ್ದುಲ್‌ರಜಾಕ ಇನಾಮದಾರ, ಅಕೀಬ ಜಹಾಗೀರದಾರ, ಸಂತೋಷ ಪರೀಟ, ಪಿ.ಎಮ್. ಜಹಾಗೀರದಾರ ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.