ಮಳೆಗೆ ಹಲವು ಮನೆಗಳು ಜಖಂ : ಅಪಾರ ಹಾನಿ

0

Gummata Nagari : Bijapur News

ದೇವರಹಿಪ್ಪರಗಿ : ಕಳೆದ ಹಲವಾರು ದಿನಗಳಿಂದ ಬಿಟ್ಟು ಬಿಡದೆ ಬರುತ್ತಿರುವ ಮಳೆಯಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮನೆಗಳು ಬಿದ್ದು ಅಪಾರ ಪ್ರಮಾಣದ ಹಾನಿಯಾಗಿರುವುದು ಬೆಳಕಿಗೆ ಬಂದಿದೆ.

ದೇವರಹಿಪ್ಪರಗಿ ಸೇರಿದಂತೆ ಹಲವಾರು ದಿನಗಳಿಂದ ಮಳೆ ಸುರಿಯುತ್ತಿದ್ದು, ಗ್ರಾಮೀಣ ಭಾಗದಲ್ಲಿನ ಹಳೆ ಮನೆಗಳು ಬೀಳುತ್ತಿವೆ. ಚಿಕ್ಕರೂಗಿಯ ಮೈಬೂಬಸುಬಾನ ಬಂದಗಿಸಾಬ ತಾಳಿಕೋಟಿ ಎನ್ನುವವರ ಮನೆ ಸಂಪೂರ್ಣವಾಗಿ ಬಿದ್ದಿದ್ದು, ಮನೆಯಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮನೆಯಲ್ಲಿದ್ದ ದಿನನಿತ್ಯ ಬಳಕೆ ವಸ್ತುಗಳೆಲ್ಲ ಮಣ್ಣು ಪಾಲಾಗಿವೆ. ಇದರಿಂದ ದುಡಿಯುವ ಕೈಗಳಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದಂತಾಗಿದೆ. ಅದರಂತೆ ಮಣೂರ ಗ್ರಾಮದ ಗೋಲವ್ವ ಹಣಮಂತ ತಳಕೇರಿ, ಗುರುನಾಥ ದೇವೇಂದ್ರ ಕೆಂಬಾವಿ, ಕಲ್ಲಪ್ಪ ನಿಂಗಪ್ಪ ಹಾರಿವಾಳ, ಲಗಮಣ್ಣ ಜಾಲವಾದಿ, ಅರವಿಂದ ಈರಪ್ಪ ಮಣೂರ ಎಂಬುವವರಿಗೆ ಸೇರಿದ ಮನೆಗಳು ಮಳೆಯ ಹೊಡೆತಕೆ ಜಖಂಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಂತಾಗಿದೆ. ಮನೆಯಲ್ಲಿರುವ ಎಲ್ಲ ವಸ್ತುಗಳು ಹಾಳಾಗಿದ್ದು, ಬಳಕೆಗೆ ಬಾರದಂತಾಗಿವೆ.

ಮಳೆಯಿಂದ ಬಿದ್ದ ಮನೆಗಳ ಸಮೀಕ್ಷೆ ನಡೆಸಲು ಕಂದಾಯ ಇಲಾಖೆಯ ಸಿಬ್ಬಂಧಿ ಸ್ಥಳಕ್ಕೆ ಬಂದು ಹೋಗಿದ್ದಾರೆ. ಅದಕ್ಕಾಗಿ ಸರಕಾರ ಮಳೆಯ ಅವಾಂತರದಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ಪರಿಹಾರ ನೀಡಿ ಅನುಕೂಲ ಮಾಡಿಕೊಡಬೇಕೆಂದು ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಗುಡಿಮನಿ, ಯುವ ಕಾಂಗ್ರೆಸ್ ಬ್ಲಾಕ ಅಧ್ಯಕ್ಷ ಮೂನಿರ ಬಿಜಾಪುರ ಮತ್ತೀತರರು ಸರಕಾರಕ್ಕೆ ಆಗ್ರಹಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.