ಸಕಾಲಕ್ಕೆ ಔಷಧ, ಬಿತ್ತನೆ ಬೀಜ ವಿತರಿಸಿ

0

Gummata Nagari : Bijapur News

ತಾಂಬಾ : ಮುಂಗಾರು ಮೆಳೆ ಸರಿಯಾಗಿ ಆಗಿರುವುದರಿಂದ ಮುಂಗಾರು ಬೆಳೆಗಳಾದ ಕಡಲ್ಲೆ, ಬಿಳಿ ಜೋಳ ಬೀತ್ತನೆ ಪ್ರಾರಂಭವಾಗಿದ್ದು. ಕೃಷಿ ಇಲಾಖೆ ಅಧಿಕಾರಿಗಳು ಬಿತ್ತನೆ ಬೀಜ ಹಾಗೂ ಕೀಟನಾಶಕಗಳು ಮತ್ತು ಲಘುಪೋಷಕಾಂಶಗಳು ಸಮಯಕ್ಕೆ ಸರಿಯಾಗಿ ವಿತರಿಸಬೇಕೆಂದು ಕರವೇ ಗ್ರಾಘ ಅಧ್ಯಕ್ಷ ಶಿವರಾಜ. ಕೆಂಗನಾಳ ಹಾಗೂ ಗ್ರಾಮಸ್ಥರು ಕುಡಿಕೊಂಡು ಇಂಡಿ ಕೃಷಿ ಇಲಾಖೆ ಅಧಿಕಾರಿ ಪವಾರ ಅವರಿಗೆ ಮನವಿ ಪತ್ರವನ್ನು ನೀಡಿ ಆಗ್ರಹಿಸಿದ್ದಾರೆ.

ಈ ವರ್ಷ ಮಳೆ ಸರಿಯಾದ ಸಮಯಕ್ಕೆ ಆಗಿದ್ದು ತೋಗರಿ ಬೆಳೆಗಳು ಉತ್ತಮವಾಗಿ ಬೆಳದಿದ್ದು ನಮ್ಮಗೆ ಸಂತಸ ತಂದಿದೆ. ಹಾಗೂ ಇನ್ನುವರೆಗೂ ನಮ್ಮ ಗ್ರಾಮದ ರೈತ ಸಂಪರ್ಕದಲ್ಲಿ ಕೀಟನಾಶಕಗಳು ಮತ್ತ ಲಘೂಪೋಷಕಾಂಶಗಳು ಬೀತ್ತನೆ ಬೀಜಗಳು ರೈತ ಸಂಪರ್ಕದಲಿ ರೈತರಿಗೆ ಸಿಗುತ್ತಿಲ್ಲ. ಅಧಿಕಾರಿಗಳು ತಮ್ಮ ಕರ್ತ್ಯವೆವನ್ನು ಸರಿಯಾಗಿ ಮಾಡುತ್ತಿಲ್ಲ ಗ್ರಾಮದ ರೈತರಿಗೆ ಸರಿಯಾಗಿ ಮಾಹಿತಿಯನ್ನು ನೀಡುತ್ತಿಲ್ಲ ಹೀಗಾದರೆ ರೈತರು ಹೇಗೆ ಉತ್ತಮವಾಗಿ ಬೆಳೆಗಳು ಬೆಳೆಯುವುದಕ್ಕೆ ಸಾಧ್ಯ ಎಂದು ಕರವೇ ಗ್ರಾಘ ಅಧ್ಯಕ್ಷ ಶಿವರಾಜ. ಕೆಂಗನಾಳ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಚನ್ನಮಲ್ಲಪ್ಪ ದೇಗಿನಾಳ, ಅಮರೇಶ ಚಟ್ಟರಕಿ, ಪರಸು ಬಿಸನಾಳ, ರಾಮ ನಾಟೀಕಾರ ಅನೇಕರು ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.