ಮಹಾಪುರುಷರ ಭಾವಚಿತ್ರಗಳಿಗೆ ಅಗೌರವ: ಕ್ರಮಕ್ಕೆ ಆಗ್ರಹ

0

Gummata Nagari : Bijapur News

ಬಿಜಾಪುರ : ಸಾಮಾಜಿಕ ಜಾಲತಾಣಗಳಲ್ಲಿ ಮಹಾಪುರುಷರ ಭಾವಚಿತ್ರಗಳಿಗೆ ಅಗೌರವ ತೋರುವ ಘಟನೆಗಳು ವ್ಯಾಪಕವಾಗಿ ನಡೆಯುತ್ತಿದ್ದು, ಈ ಬಗ್ಗೆ ವಿಶೇಷ ನಿಗಾ ವಹಿಸಿ ಈ ರೀತಿಯ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಲಾವಿದರ ರಕ್ಷಣಾ ವೇದಿಕೆ ಹಾಗೂ ಧಾರ್ಮಿಕ ಹಿತ ಚಿಂತಕರ ವೇದಿಕೆ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ನೇತೃತ್ವ ವಹಿಸಿದ್ದ ಕುರುಬ ಸಮಾಜದ ಯುವಘಟಕದ ರಾಜ್ಯ ಉಪಾಧ್ಯಕ್ಷ ಶ್ರೀಶೈಲ ಕವಲಗಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಾನ್ ವ್ಯಕ್ತಿಗಳಿಗೆ ಅಗೌರವ ತೋರುವ ಘಟನೆಗಳು ನಡೆಯುತ್ತಿರುವುದು ನೋವಿನ ಸಂಗತಿ. ಶ್ರೀ ಮಾಳಿಂಗರಾಯರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ವಾಲ್ಮೀಕಿ ಮಹಾಋಷಿಗಳ ಭಾವಚಿತ್ರಗಳಿಗೆ ಅಸಂಬದ್ಧವಾದ ಫೋಟೋಗಳನ್ನು ಅಳವಡಿಸಿ ಅಪಲೋಡ್ ಮಾಡುವ ಕಿಡಗೇಡಿಗಳ ಸಂಖ್ಯೆ ಹೆಚ್ಚುತ್ತಿದೆ, ಇದರಿಂದಾಗಿ ಆ ಮಹಾನ್ ವ್ಯಕ್ತಿಗಳಿಗೆ ದೊಡ್ಡ ಅಗೌರವ ಉಂಟಾಗುತ್ತಿದೆ, ಈ ರೀತಿಯ ಕೃತ್ಯವೆಸಗುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಅವರಿಗೆ ತಕ್ಕ ಶಿಕ್ಷೆಯನ್ನು ನೀಡಬೇಕು, ಈ ರೀತಿಯ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕುರುಬರ ಸಂಘ ಅಧಕ್ಷರು ರಾಜು ಕಂಬಾಗಿ ಮಾತನಾಡಿದರು. ಸುರೇಶ ವಾಘಮೋರೆ, ಜಕ್ಕಣ್ಣ ಮಾಸ್ತರಮಿಸಿ, ಯಲ್ಲಪ್ಪ ರೊಳ್ಳಿ, ಗುರುಲಿಂಗಪ್ಪ ದಳವಾಯಿ, ಅಜೀತ ಸಿಂಗಾಡಿ, ರೇವಣಸಿದ್ದ ಮಣೂರ, ಜಟ್ಟೆಪ್ಪ ಬಳಗಾರಿ, ರೇವಣಸಿದ್ದಪ್ಪ ಪೂಜಾರಿ, ಸುರೇಶ ಹೂಗಾರ, ರಾಯಪ್ಪ ಪೂಜಾರಿ, ಮಲ್ಲಪ್ಪ ದಳವಾಯಿ, ಕರೆಪ್ಪ ನಡಗಡ್ಡಿ, ಹಣಮಂತ್ರಾಯ ಬಿರಾದಾರ, ಪರಶುರಾಮ ಯರನಾಳ, ಜಟ್ಟೆಪ್ಪ ಅಲ್ಲಾಪೂರ, ಮಾಳಪ್ಪ ಅಲ್ಲಾಪುರ, ಮಾಳಪ್ಪ ಚಿಗರಿ, ಸುರೇಶ ಗುಣಕಿ, ವಿರೇಶ ಕನ್ನಾಳ, ಮಲ್ಲು ಪರಸಣ್ಣವರ, ಸದಾಶಿವ ಪೂಜಾರಿ, ಮುದುಕಣ್ಣ ಮಾಸ್ತರ ಬಾಗೇವಾಡಿ, ಬೀರಣ್ಣ ಮಾಸ್ತರ ಯಂಕAಚಿ, ಶ್ರೀಶೈಲ ಇಂಗಳೇಶ್ವರ, ಅಮೋಘಸಿದ್ಧ ಪೂಜಾರಿ ಪಾಲ್ಗೊಂಡಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.