ನದಿ ಪಾತ್ರದ ಜನರ ಸ್ಥಳಾಂತರ

ಭೀಮೆಗೆ ಮತ್ತೆ ಉಜನಿ ಜಲಾಶಯದಿಂದ 5 ಲಕ್ಷ ಕ್ಯೂಸೆಕ್ ನೀರು

0

Gummata Nagari : Bijapur News

ಚಡಚಣ : ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಎಡಬಿಡದೆ ಸುರಿಯುತ್ತಿರುವ ಮಹಾಮಳೆಯಿಂದ ಮಹಾರಾಷ್ಟ್ರದ ಉಜನಿ ಜಲಾಶಯದಲ್ಲಿ ನೀರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಭೀಮಾ ನದಿಗೆ 5 ಲಕ್ಷ ಕ್ಯೂಸೇಕ್ ನೀರು ಹರಿಬಿಡಲಾಗಿದ್ದು, ಭೀಮಾ ತೀರದ ಸೇತುವೆಗಳು ತುಂಬಿ ಸಂಪೂರ್ಣ ಮುಳುಗಡೆಯಾಗುವುದಲ್ಲದೆ ಭೀಮಾ ತೀರದ ಹೊಲಗಳಿಗೆ ನೀರು ನುಗ್ಗಿ ಪ್ರವಾಹದ ಆತಂಕ ಸೃಷ್ಟಿಸುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಿ, ಚಡಚಣ ತಾಲ್ಲೂಕಾಡಳಿತದ ಅಧಿಕಾರಿಗಳಿಂದ ರೈತರಿಗೆ ಸ್ಥಳಾಂತರಿಸುವ ಕಾರ್ಯ ಮಾಡಲಾಗುತ್ತಿದೆ.

ಚಡಚಣ ತಾಲೂಕಿನ ದುಳಖೇಡ, ಶಿರನಾಳ, ಮರಗೂರ, ಚಣೇಗಾಂವ ಗ್ರಾಮಗಳ ಭೀಮಾ ನದಿ ಪಾತ್ರದಲ್ಲಿರುವ ಹೊಲಗಳ ರೈತರಿಗೆ ಹಾಗೂ ದನ-ಕರುಗಳಿಗೆ ಚಡಚಣ ತಾಲ್ಲೂಕಾ ತಹಶೀಲ್ದಾರ್ ಸುರೇಶ ಚವಲರ ಹಾಗೂ ನೂಡಲ್ ಅಧಿಕಾರಿ ಅಜೀತ ಗಾಳಿ ಅವರ ನೇತೃತ್ವದಲ್ಲಿ ಸುರಕ್ಷಿತ ಸ್ಥಳವಾದ ಗ್ರಾಮಗಳ ಮನೆಗಳಿಗೆ ಹಾಗೂ ಮನೆಗಳಿಲ್ಲದವರಿಗೆ ಸರ್ಕಾರಿ ಶಾಲೆಗಳು, ಹಾಸ್ಟೆಲ್ ಗಳಿಗೆ ಸ್ಥಳಾಂತರಿಸಿ, ಗಂಜಿ ಕೇಂದ್ರ ತೆರೆಯಲಾಗುತ್ತಿದೆ.

ಸದ್ಯ ದಿನದಿಂದ ದಿನವೂ ಭೀಮಾ ನದಿಗೆ ನೀರಿನ ಪ್ರಮಾಣ ಹೆಚ್ಚುತ್ತಾ, ಕಬ್ಬಿನ ಗದ್ದೆಗೆ ನೀರು ನುಗ್ಗಿದ್ದು, ಭೀಮಾತೀರದ ರೈತರಲ್ಲಿ ಹಿಂದಿನ ವರ್ಷ ಸೃಷ್ಠಿಸಿದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಮನೆಮಾಡಿದೆ.

ಈ ಕಾರ್ಯಚರಣೆಯಲ್ಲಿ ಚಡಚಣ ಕಂದಾಯ ನಿರೀಕ್ಷಕ ಪಿ.ಜೆ ಕೊಡಹೊನ್ನ, ಗ್ರಾಮ ಲೇಕ್ಕಾಧಿಕಾರಿ ವಿಠ್ಠಲ್ ಕೋಳಿ, ದುಳಖೇಡ ಗ್ರಾ.ಪಂ ಸಿಬ್ಬಂದಿಗಳು ಹಾಗೂ ಪೋಲಿಸ್ ಸಿಬ್ಬಂದಿ ಇದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.