ಉತ್ತರ ಪ್ರದೇಶ ಬಿಜೆಪಿ ಸರಕಾರ ವಜಾಗೊಳಿಸಿ

ಜಾತ್ಯಾತೀತ ಜನತಾ ದಳದ ಕಾರ್ಯಕರ್ತರಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ

0

Gummata Nagari : Bijapur News

ಬಿಜಾಪುರ : ಉತ್ತರ ಪ್ರದೇಶದ ಹಾತರಸ್ ಜಿಲ್ಲೆಯಲ್ಲಿ ನಡೆದ ಯುವತಿ ಮೇಲೆ ಅತ್ಯಾಚಾರ ಪ್ರಕರಣವನ್ನು ಉನ್ನತ ತನಿಖೆಗೊಳಪಡಿಸಲು ವಿಳಂಬ ನೀತಿ ಖಂಡಿಸಿ ಜಾತ್ಯಾತೀತ ಜನತಾ ದಳದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಕೆಲಕಾಲ ಪ್ರತಿಭಟನೆ ನಡೆಸಿದರು. ಉತ್ತರ ಪ್ರದೇಶ ಬಿಜೆಪಿ ಸರಕಾರವನ್ನು ವಜಾಗೊಳಿಸಿ ಎಂದು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ, ಯುವತಿಯನ್ನು ಅಮಾನುಷವಾಗಿ ದೌರ್ಜನ್ಯವವೆಸಗಿ ಹತ್ಯೆ ಮಾಡಿ ಘೋರ ಅಪರಾಧವೆಸಗಿರುವ ಅಪರಾಧಿಗಳಿಗೆ ತೀವ್ರ ಕಠಿಣ ಶಿಕ್ಷೆಯಾಗಬೇಕು. ಸರಕಾರ ವಿನಾಃ ಕಾರಣ ಈ ಪ್ರಕರಣದಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದು ಹಾಗೂ ಅಪರಾಧಿಗಳ ಪರ ನಿಲುವು ತೆಗೆದುಕೊಳ್ಳುತ್ತಿರುವದು ಅತ್ಯಂತ ಖೇದನಿಯ. ರಾತ್ರೋರಾತ್ರಿ ಶವವನ್ನು ಕುಟುಂಬಸ್ಥರು ಇಲ್ಲದೆ ಸರಕಾರ ಸುಟ್ಟು ಹಾಕಿರುವುದು ನೂರಾರು ಸಂಶಯಕ್ಕೆ ಎಡೆಮಾಡಿದೆ ಎಂದರು.

ಜಿಲ್ಲಾ ಜನತಾದಳ ಕಾರ್ಯಾಧ್ಯಕ್ಷ ದಿಲಾವರ ಖಾಜಿ ಮಾತನಾಡಿ ಉತ್ತರ ಪ್ರದೇಶದಲ್ಲಿ ಸರಕಾರದ ಆಡಳಿತ ಕುಸಿದು ಹೋಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರಕಾರವನ್ನು ಮುನ್ನಡೆಸಲು ವಿಫಲರಾಗಿದ್ದಾರೆ. ಜನಸಾಮಾನ್ಯರ ಮಾನ, ಜೀವಕ್ಕೆ ಬೆಲೆ ಇಲ್ಲದಾಗಿದೆ. ಕಾರಣ ಈ ಪ್ರಕರಣವನ್ನು ಕೂಡಲೇ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು, ನೊಂದ ಯುವತಿಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಹಿರೇಮಠ, ಮಹಮ್ಮದಹುಸೇನ ಬಾಗಾಯತ, ಕೌಸರ ಶೇಖ, ಅರವಿಂದ ಹಂಗರಗಿ ಸುನೀಲ ರಾಠೋಡ, ಯಾಕೂಬ ಕೋಪರ, ಸಿದ್ದು ಕಾಮತ,ರೇಖಾ ಮಾಶ್ಯಾಳ, ಸ್ನೇಹಾ ಶೆಟ್ಟಿ, ಶಿವಮ್ಮ ವಾಲಿ, ಮಹಾದೇವಿ ತಳಕೇರಿ, ಅನ್ನಪೂರ್ಣ ಬಡಿಗೇರ, ಶಾಮನ ಇನಾಂದಾರ, ಸಾಜೀದ ರಿಸಾಲದ್ದಾರ, ಸುರೇಶ ಹೆರಕಲ್, ವಿನೋದ ಕೊಟ್ಯಾಳ, ಈರಣ್ಣ ಮೋಟಗಿ, ಮನೋಜ ಬಿರಾದಾರ, ಜಾಫರ ಕಲಾದಗಿ, ದಿನೇಶ ವಗ್ಯನ್ನವರ, ಸಂದೇಶ ನಾಟೀಕಾರ, ಪಾರ್ವತಿ ಬಿದರಿ, ರುಕ್ಮವ್ವ ಬಿದರಿ, ಎಂ.ಎಂ. ಭಕ್ಷಿ, ಎಂ.ಎಸ್. ಶಿರಗಾರ, ಮುಕದ್ದಸ್ಸ ಇನಾಮದಾರ ಪಾಲ್ಗೊಂಡಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.