ನೆರೆ ಹಾನಿ ಪರಿಹಾರ: ಕೇಂದ್ರದಿಂದ ರಾಜ್ಯಕ್ಕೆ ತಾರತಮ್ಯ

0

Gummata Nagari : Bijapur News

ಬಿಜಾಪುರ : ಕಳೆದ ಬಾರಿ ಅತಿವೃಷ್ಠಿಯಿಂದ ಉಂಟಾದ ಹಾನಿಗೆ ಪರಿಹಾರ ರೂಪವಾಗಿ ನಷ್ಟ ಭರಿಸಲು ಕೇಂದ್ರ ಸರ್ಕಾರ ಎನ್.ಡಿ.ಆರ್.ಎಫ್ ಅನುದಾನ ಒದಗಿಸದೇ, ಕರ್ನಾಟಕ ರಾಜ್ಯಕ್ಕೆ ತಾರತಮ್ಯ ಎಸೆಗಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ.

ತಮ್ಮ ಸ್ವಕ್ಷೇತ್ರ ಬಬಲೇಶ್ವರದಲ್ಲಿಂದು ಬೋಳಚಿಕ್ಕಲಕಿ-ಗುಣದಾಳ 3.8ಕಿ.ಮೀ ರಸ್ತೆಯನ್ನು 3.5ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಪ್ರವಾಹದಿಂದ ಉಂಟಾದ ಒಟ್ಟು ನಷ್ಟ 34ಸಾವಿರ ಕೋಟಿ ಆಗಿದ್ದು, ಇದರಲ್ಲಿ ಕೇಂದ್ರ 2ಸಾವಿರ ಕೋಟಿ ಮಾತ್ರ ನೀಡಿದ್ದಾರೆ. ಉಳಿದ 32ಸಾವಿರ ಕೋಟಿ ಕುರಿತು ಯಾರು ಮಾತನಾಡುತ್ತಿಲ್ಲ. ಅಂದು ಬೀದಿಗೆ ಬಿದ್ದಿದ್ದ ಸಂತ್ರಸ್ಥರು ಇನ್ನೂ ಬೀದಿಯಲ್ಲಿದ್ದಾರೆ. ಅವರ ಗೋಳನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ, ಇಲ್ಲಿನ ಮಂತ್ರಿಗಳು ಚಕಾರ ಎತ್ತುತ್ತಿಲ್ಲ. ಈ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

ಕೊರೊನಾ ಸಂಕಷ್ಟದಿಂದ ವಿಶ್ವವೆ ತತ್ತರಿಸಿದೆ. ಎಷ್ಟೇ ನಿಯಮಗಳನ್ನು ಪಾಲಿಸಿದರೂ ಕೊರೊನಾ ತಡೆ ಸಾಧ್ಯವಾಗುತ್ತಿಲ್ಲ. ಇತ್ತಿಚೆಗಷ್ಟೆ ರಾಜ್ಯ ಸಭಾ ಸದಸ್ಯ ಅಶೋಕ ಗಸ್ತಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ರವಿಗೌಡ ಪಾಟೀಲ ಧೂಳಖೇಡರು ಸಹ ಕೊರೊನಾ ಕಾಯಿಲೆಗೆ ಬಲಿಯಾಗಿದ್ದಾರೆ. ಕೊರೊನಾದಿಂದ ಜನರು ಜಾಗೃತರಾಗಬೇಕು. ಈ ಭಾಗದಲ್ಲಿ ಸುಸಜ್ಜಿತ ರಸ್ತೆಯನ್ನು ನಿರ್ಮಿಸಲಾಗುತ್ತಿದ್ದು, ಜನರು ತಂಟೆ-ತಕರಾರು ಮಾಡದೆ ಸಹಕಾರ ನೀಡಬೇಕು ಎಂದರು.

ಗ್ರಾಮದ ಮುಖಂಡ ಗುರುಲಿಂಗಪ್ಪ ಅಂಗಡಿಯವರು ಬೋಳಚಿಕ್ಕಲಕಿಗೆ ಸುಸಜ್ಜಿತ ರಸ್ತೆ ನಿರ್ಮಿಸಲು ಕಾರಣರಾದ ಎಂ.ಬಿ.ಪಾಟೀಲ್‌ರವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಿದರು.

ವೇದಿಕೆಯಲ್ಲಿ ಜಿ.ಪಂ ಸದಸ್ಯೆ ದಾನಮ್ಮ ಅಂಗಡಿ, ಜಿ.ಪಂ ಮಾಜಿ ಸದಸ್ಯ ಬಾಪುಗೌಡ ಪಾಟೀಲ ಶೇಗುಣಶಿ, ಬಬಲೇಶ್ವರ ತಾ.ಪಂ ಅಧ್ಯಕ್ಷ ಸಂಗಪ್ಪ ತಿಮಶೆಟ್ಟಿ, ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಬಿರಾದಾರ, ಗುತ್ತಿಗೆದಾರ ಬಿ.ಆರ್.ನಂದಗೋಳ, ಅಭಿಯಂತರ ಎಂ.ಎ.ಪಾಟೀಲ, ಪಿಡಿಒ ರೇಖಾ ಎಂ.ಪಾಟೀಲ, ಮುಖಂಡರಾದ ಅಪ್ಪುಗೌಡ ಪಾಟೀಲ ಶೇಗುಣಶಿ, ಪ್ರಕಾಶ ಸೊನ್ನದ, ಸಂದೀಪ ಬಗಲಿ, ಅಶೋಕ ಕಾಖಂಡಕಿ, ಬಾಬುಗೌಡ ಪಾಟೀಲ, ಸಂಗಮೇಶ ಸಾಹುಕಾರ ಗುಣದಾಳ, ಸಂತೋಷ ಕುಲಕರ್ಣಿ, ಮುತ್ತಪ್ಪ ವಾಣಿ, ರಾಚಪ್ಪ ಅಂಗಡಿ, ಸಿದ್ದಪ್ಪ ಸಜ್ಜನ, ಡಾ.ಭರತ ಲೋನಾರಿ, ಮಲ್ಲಿಕಾರ್ಜುನ ಅಂಗಡಿ, ಸದಾಶಿವ ಸಜ್ಜನ, ಸೈಯದ ಅತ್ತಾರ, ಶೇಖು ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.