ಎಜೆಎಸ್ಕೆಗೆ ನಿರ್ದೇಶಕಿ ಗಂಗೂಬಾಯಿ ಮಾನಕರ ಭೇಟಿ

0

Gummata Nagari
ಕೊಲ್ಹಾರ : ಬೆಂಗಳೂರು ಅಟಲ್ ಜೀ ಜನಸ್ನೇಹಿ ಕೇಂದ್ರದ ನಿರ್ದೇಶಕಿ ಗಂಗೂಬಾಯಿ ಮಾನಕರ ಅವರು ಕೊಲ್ಹಾರ ತಹಶಿಲ್ದಾರ ಕಚೇರಿಗೆ ಭೇಟಿ ನೀಡಿದರು.

ಕೊಲ್ಹಾರ, ಬಸವನ ಬಾಗೇವಾಡಿ ಹಾಗೂ ನಿಡಗುಂದಿ ತಾಲ್ಲೂಕುಗಳ ತಹಶಿಲ್ದಾರರ ಜೊತೆ ಸಭೆ ನಡೆಸಿ ಮೂರು ತಾಲ್ಲೂಕುಗಳ ಅಟಲ್ ಜನಸ್ನೇಹಿ ಕೇಂದ್ರದ ಸೇವೆಗಳು, ಅರ್ಜಿಗಳ ವಿಲೇವಾರಿ ಹಾಗೂ ಸ್ಥಿತಿಗತಿಗಳ ಕುರಿತು ಪ್ರಗತಿ ಪರಿಶೀಲಿಸಿ ಚರ್ಚಿಸಿದರು. “ಕೊಲ್ಹಾರ ಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯ ಸಮಸ್ಯೆ ಇದೆ. ಎಂಟು ವರ್ಷಗಳ ಹಿಂದಿನ ಬ್ಯಾಟರಿ ಇದ್ದು ಅದೂ ಕೆಟ್ಟು ಹೋಗಿದೆ. ಇದರಿಂದ ಜನರಿಗೆ ಸಮರ್ಪಕ ಸೇವೆ ಒದಗಿಸುವಲ್ಲಿ ಅಡಚಣೆಯಾಗುತ್ತಿದ್ದು ಈ ಕುರಿತು ಅಪರ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ” ಎಂದು ಉಪ ತಹಶಿಲ್ದಾರ ಎ.ಎಂ.ಗಿರಿನಿವಾಸ ನಿರ್ದೇಶಕರಿಗೆ ಮನವಿ ಮಾಡಿಕೊಂಡರು.
ಕೊಲ್ಹಾರ ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಯಾವುದೇ ಬಾಕಿಯಿಲ್ಲದಂತೆ ಅರ್ಜಿಗಳ ವಿಲೇವಾರಿಗೆ ನಿರ್ದೇಶಕಿ ಗಂಗೂಬಾಯಿ ಮಾನಕರ ಶ್ಲಾಘನೆ ವ್ಯಕ್ತಪಡಿಸಿದರು. ರಾಜ್ಯದ ಬಹುತೇಕ ಎಜೆಎಸ್ಕೆ ಕೇಂದ್ರಗಳಲ್ಲಿ ಬ್ಯಾಟರಿ ಸಮಸ್ಯೆಗಳಿದ್ದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಟೆಂಡರ್ ಮೂಲಕ ಬ್ಯಾಟರಿ ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು ಎಂದರು.

ಈ ವೇಳೆ ಕೊಲ್ಹಾರ ತಹಶಿಲ್ದಾರ ಎಂಎಎಸ್ ಬಾಗವಾನ, ಜಿಲ್ಲಾ ಕನ್ಸಲ್ಟೆಂಟ್ ಆನಂದ ರಾಠೋಡ, ಬಸವನ ಬಾಗೇವಾಡಿ ಗ್ರೇಡ್-2 ತಹಶಿಲ್ದಾರ ಜಿ.ಟಿ.ಪವಾರ , ನಿಡಗುಂದಿ ಶಿರಸ್ತೆದಾರ ಮಹೇಶ ಮೋಹಿತೆ ಹಾಗೂ ಸಿಬ್ಬಂದಿ ಹಾಜರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.