ಜನರಿಂದ ನೀರಸ ಪ್ರತಿಕ್ರಿಯೆ, ಆಶಾಭಾವನೆಯತ್ತ ಸಾರಿಗೆ ಇಲಾಖೆ..

ಅಂತರ್ ರಾಜ್ಯ ಸಾರಿಗೆಗಳ ಕಾರ್ಯಾಚರಣೆ ಪುನರಾರಂಭ

0

Gummata Nagari : Dharwad News

ಹುಬ್ಬಳ್ಳಿ : ಲಾಕ್‍ಡೌನ್ ಹಿನ್ನೆಲೆಯಲ್ಲಿ ಸ್ಥಗಿತ ಗೊಳಿಸಲಾಗಿದ್ದು, ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಂತರ್ ರಾಜ್ಯ ಸಾರಿಗೆಗಳ ಕಾರ್ಯಾಚರಣೆಯನ್ನು ಕೋವಿಡ್-19 ಲಾಕ್‍ಡೌನ್ ಸಡಿಲ ಗೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ 2020 ರ ಸೆಪ್ಟೆಂಬರ್ 22 ರಿಂದ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪೂರ, ಪೂಣಾ, ಮುಂಬಯಿ, ಸಾಂಗ್ಲಿ, ಸೊಲ್ಲಾಪೂರ, ಶಿರಡಿ, ನಾಸಿಕ್ ಇನ್ನಿತರ ಎಲ್ಲಾ ಮಾರ್ಗಗಳಲ್ಲಿ ಧಾರವಾಡ, ಬೆಳಗಾವಿ, ಬಾಗಲಕೋಟ, ಗದಗ, ಉತ್ತರ ಕನ್ನಡ, ಹಾವೇರಿ ಜಿಲ್ಲಾ ಸ್ಥಳಗಳಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.

ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಮಹಾರಾಷ್ಟ್ರ ರಾಜ್ಯಕ್ಕೆ ಸಂಚರಿಸುವ ಎಲ್ಲಾ ಅನುಸೂಚಿಗಳನ್ನು ಹಂತ, ಹಂತವಾಗಿ ಪುನಾರಾಂಭಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಆದರೆ ಕೊರೊನಾ ಭಯದ ನಡುವೇ ಮಹಾರಾಷ್ಟ್ರ ಭಾಗದಲ್ಲಿ ಸುರಿಯುತ್ತಿರುವ ವಿಪರೀತ ಮಳೆಯಿಂದ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

ಈಗಾಗಲೇ ಸರ್ಕಾರದಿಂದ ನೀಡಿದ ನಿರ್ದೇಶನಗಳನ್ವಯ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್, ಧರಿಸಬೇಕಾಗಿರುತ್ತದೆ. ಮುಂಗಡ ಆಸನಗಳನ್ನು www.ksrtc.in ಸಂಸ್ಥೆಯ ವೆಬ್ ಸೈಟ್ ಮತ್ತು ಫ್ರಾಂಚೈಸಿ ಕೌಂಟರ್‍ಗಳ ಮುಖಾಂತರ ಕಾಯ್ದಿರಿಸಿಕೊಳ್ಳುವಂತೆ ಹುಬ್ಬಳ್ಳಿ ವಾಕರಸಾಸಂಸ್ಥೆ ಸಂಸ್ಥೆ ಮನವಿ ಮಾಡಿದ್ದು, ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಬಸ್ ಸೌಲಭ್ಯ ನೀಡಲು ಚಿಂತನೆ ನಡೆಸಿದೆ.

ಗೋವಾ ರಾಜ್ಯಕ್ಕೆ ಬಸ್ ಸಂಚಾರ ಆರಂಭ..

ಅವಳಿ ನಗರದ ಸಾರ್ವಜನಿಕರು ಬಹುದಿನಗಳಿಂದ ಕಾಯುತ್ತಿದ್ದ ಹುಬ್ಬಳ್ಳಿಯಿಂದ ಗೋವಾ ರಾಜ್ಯಕ್ಕೆ ಸಾರಿಗೆ ಬಸ್ಸುಗಳ ಸಂಚಾರವನ್ನು ಮತ್ತೆ ಆರಂಭಿಸಲಾಗಿದೆ.‌

ಲಾಕ್ ಡೌನ್ ಪೂರ್ವದಲ್ಲಿ ಹುಬ್ಬಳ್ಳಿಯಿಂದ ಪ್ರತಿದಿನ ಪಣಜಿಗೆ 1ರಾಜಹಂಸ ಮತ್ತು 8 ವೇಗಧೂತ ಸೇರಿ 9, ವಾಸ್ಕೋಗೆ 1 ಮತ್ತು ಮಡಗಾಂವಗೆ 1 ಒಟ್ಟು 11 ಬಸ್ಸುಗಳು ಗೋವಾ ರಾಜ್ಯಕ್ಕೆ ಸಂಚರಿಸುತ್ತಿದ್ದವು.

ಮೊದಲ ಹಂತದಲ್ಲಿ ಪಣಜಿಗೆ ನಾಲ್ಕು (1 ರಾಜಹಂಸ, 3 ವೇಗಧೂತ) ಹಾಗೂ ವಾಸ್ಕೋ ಮತ್ತು ಮಡಗಾಂವ ಗೆ ತಲಾ ಒಂದು ಬಸ್ ಸಂಚಾರವನ್ನು ಆರಂಭಿಸಲಾಗಿದ್ದು ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ.

ಆಂಧ್ರ, ತೆಲಗಾಂಣಕ್ಕೂ‌ಬಸ್ ಸಂಪರ್ಕ ಪ್ರಾರಂಭ..

ಕರ್ನಾಟಕದ ಪಕ್ಕದ ರಾಜ್ಯಗಳಾದ ಆಂಧ್ರ ಹಾಗೂ ತೆಲಗಾಂಣ ರಾಜ್ಯಗಳಿಗೂ ಬಸ್ ಸೌಕರ್ಯ ಆರಂಭವಾಗಿದೆ. ಆದ್ರೆ ಮೊದಲ ಹಂತದಲ್ಲಿ ನಾಲ್ಕೈದು ಬಸ್ ಗಳನ್ನು ಮಾತ್ರ ಓಡಿಸಲಾಗುತ್ತಿದೆ ಪ್ರಯಾಣಿಕರ ಬೇಡಿಕೆ ಗಮನಿಸಿ ಮುಂದಿನ ದಿನಗಳಲ್ಲಿ ಬಸ್ಸುಗಳನ್ನು ಹೆಚ್ಚಿಸಲಾಗುತ್ತದೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.

ಲಾಕ್ ಡೌನ್ ನಂತರ ಪ್ರಯಾಣಿಕರನ್ನು ಮತ್ತೆ ಸೆಳೆಯುವದೇ ಸಾರಿಗೆ ಇಲಾಖೆಗೆ ದೊಡ್ಡ ಸವಾಲಾಗಿದೆ. ಹೀಗಾಗಿ ಪ್ರಯಾಣಿಕರಿಗೆ ಹೊರೆಯಾಗುವಂತ ಯಾವುದೇ ಶುಲ್ಕವನ್ನು ಹೆಚ್ಚಿಸುವ ಕೆಲಸಕ್ಕೆ ಕೈ ಹಾಕಿಲ್ಲ. ಪ್ರಯಾಣಿಕರು ಮತ್ತೆ ಬಸ್ ಸೇವೆ ಪಡೆಯುವಂತೆ ಆಕರ್ಷಕ ಆಫರ್ ಗಳನ್ನು ‌ನೀಡುವ ಕೆಲಸಕ್ಕೆ ಸಾರಿಗೆ ಇಲಾಖೆ ಮುಂದಾಗಿದೆ.

ಒಟ್ಟಿನಲ್ಲಿ ಲಾಕ್ ಡೌನ್ ನಂತರ ಸ್ಥಗಿತವಾಗಿದ್ದ ಅಂತ ರಾಜ್ಯ ಬಸ್ ಸಂಚಾರಕ್ಕೆ ನಿರಶ ಪ್ರತಿಕ್ರಿಯೆ ‌ಇದ್ದು ಮುಂದಿನ ದಿನಗಳಲ್ಲಿ ಜನರಿಂದ ಉತ್ತಮ ಸ್ಪಂದನೆ ಸಿಗುವ ಆಶಭಾವನೆಯಲ್ಲಿ ಸಾರಿಗೆ ಇಲಾಖೆ ಇದೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.