ಗ್ರಾಮೀಣ ಭಾಗದಲ್ಲಿ ದಂಡ ವಸೂಲಿ ಕೈಬಿಡಲು ಆಗ್ರಹ

ಮಾಸ್ಕ್ ಧರಿಸದವರಿಗೆ ದಂಡ ವಸೂಲಿಗೆ ಆದೇಶ

0

Gummata Nagari : Bijapur News

ಮುದ್ದೇಬಿಹಾಳ : ಕೋವಿಡ್-19 ನಿಯಂತ್ರಿಸುವ ಭರದಲ್ಲಿ ರಾಜ್ಯ ಸರ್ಕಾರ ಮಾಸ್ಕ್ ಧರಿಸದವರಿಗೆ ನಗರ ಪ್ರದೇಶದಲ್ಲಿ ರೂ.1000, ಗ್ರಾಮೀಣ ಪ್ರದೇಶದಲ್ಲಿ ರೂ.500 ದಂಡ ವಸೂಲಿ ಮಾಡುವ ಆದೇಶ ಹೊರಡಿಸಿದ್ದು ಅದರಲ್ಲಿ ಗ್ರಾಮೀಣ ಭಾಗದವರಿಗೆ ದಂಡ ವಿಧಿಸುವುದನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಸದಸ್ಯರು ಅಧ್ಯಕ್ಷ ಅಬ್ದುಲ್‌ಮಜೀದ ಮಕಾನದಾರ ನೇತೃತ್ವದಲ್ಲಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಸರ್ಕಾರದ ಆದೇಶ ಗ್ರಾಮೀಣ ಭಾಗದ ಜನತೆಗೆ ತುಂಬಾ ತೊಂದರೆ ಉಂಟು ಮಾಡುತ್ತದೆ. ಮಾಸ್ಕ್ ಕಡ್ಡಾಯದ ಕ್ರಮ ಒಳ್ಳೇಯದು. ಇದನ್ನು ಸ್ವಾಗತಿಸುತ್ತೇವೆ. ಆದರೆ ದೈನಂದಿನ ಚಟುವಟಿಕೆಗಳಿಗೆ ಹಳ್ಳಿಯಿಂದ ತಾಲೂಕು ಕೇಂದ್ರಕ್ಕೆ, ನಗರ, ಪಟ್ಟಣ ಪ್ರದೇಶಗಳಿಗೆ ಹೆಚ್ಚಿನ ಜನ ಕೂಲಿ ಕೆಲಸಕ್ಕೆ ಬರುತ್ತಾರೆ. ಕೂಲಿ ಮಾಡಿ ಮರಳಿ ಹೋಗುವಾಗ ಪೊಲೀಸರು ದಂಡ ಹಾಕುತ್ತಾರೆ. ದಂಡ ಕಟ್ಟಲಾಗದೆ ಅನೇಕರು ತಮ್ಮ ವಾಹನವನ್ನು ಸ್ಥಳದಲ್ಲೇ ಬಿಟ್ಟು ಕಾಲ್ನಡಿಗೆಯಲ್ಲಿ ತಮ್ಮೂರುಗಳಿಗೆ ಹೋಗುವ ಅವಕಾಶ ತಲೆದೋರಿದೆ. ಗ್ರಾಮೀಣ ಕೂಲಿ ಕಾರ್ಮಿಕರು ಒಂದು ದಿನ ದುಡಿದರೆ 400 ರೂ ಪಗಾರ ಸಿಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ದಂಡ ತುಂಬುವುದು ಎಲ್ಲಿಂದ ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ಇದನ್ನೆಲ್ಲ ಮನಗಂಡು ಗ್ರಾಮೀಣ ಜನರಿಗೆ ದಂಡ ಹಾಕುವ ಬದಲು ಎನ್‌ಜಿಓಗಳಿಂದ ತಿಳಿವಳಿಕೆ ಮೂಡಿಸುವ ಕಾರ್ಯ ಮಾಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಬಸವರಾಜ ಶಹಾಪುರ, ಪರವೇಜ ರತನ್, ಬಿಲಾಲ ಖತೀಬ, ಶೋಯೇಬ ಅತ್ತಾರ, ಮುಜಾಮಿಲ್ ಮಕಾನದಾರ, ಇಲಿಯಾಸ್ ಸಗರ್, ಇರ್ಫಾನ್ ಮುಲ್ಲಾ, ಸಮೀರ್ ನದಾಫ, ಎಫ್.ಎ.ಅತ್ತಾರ, ಅಬ್ದುಲ್‌ಸಲಾಮ ಮುಲ್ಲಾ ಮತ್ತಿತರರು ಇದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.