ಸಮರ್ಪಕವಾಗಿ ಪಿಂಚಣಿ ಒದಗಿಸಲು ಆಗ್ರಹ

ಹಿರಿಯ ನಾಗರಿಕರಿಂದ ಜಿಲ್ಲಾ ಉಸ್ತುವಾರಿ ಸಚಿವೆ ಕಾರ್ಯಾಲಯದ ಎದುರು ಧರಣಿ ಸತ್ಯಾಗ್ರಹ

0

Gummata Nagari : Bijapur News

ಬಿಜಾಪುರ : ಹಿರಿಯ ನಾಗರಿಕರಿಗೆ ಸಮರ್ಪಕವಾಗಿ ಪಿಂಚಣಿ ಒದಗಿಸುವುದು ಹಾಗೂ ಹಿರಿಯ ನಾಗರಿಕರಿಗೆ ಆರು ಸಾವಿರ ರೂ. ಮಾಶಾಸನ ಘೋಷಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಿರಿಯ ನಾಗರಿಕರು ಜಿಲ್ಲಾ ಉಸ್ತುವಾರಿ ಸಚಿವೆ ಅವರ ಕಾರ್ಯಾಲಯದ ಎದುರು ಧರಣಿ ಸತ್ಯಾಗ್ರಹ ನಡೆಸಿದರು. ತಮ್ಮ ಬೇಡಿಕೆಗಳ ಫಲಕಗಳನ್ನು ಪ್ರದರ್ಶಿಸಿದರು.

ನೇತೃತ್ವ ವಹಿಸಿದ್ದ ಕಾರ್ಮಿಕ ಮುಖಂಡ ಪ್ರಭುಗೌಡ ಪಾಟೀಲ, ಹಿರಿಯ ನಾಗರಿಕರು ಅನೇಕ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ, ದುಡಿಯುವ ಶಕ್ತಿ ಇಲ್ಲದ ಬಡ ಹಿರಿಯ ನಾಗರಿಕರ ಹಿತರಕ್ಷಣೆಯ ಬಗ್ಗೆ ಸರ್ಕಾರ ಮುತವರ್ಜಿ ವಹಿಸಬೇಕು ಎಂದರು. ಸಮಾಜದ ಮತ್ತು ಕುಂಟಂಬದ ನಿರ್ವಹಣೆಯನ್ನು ಹೊತ್ತು 40 ವರ್ಷದಿಂದ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ಈ ಶ್ರಮ ಜೀವಿಗಳಿಗೆ 60 ವರ್ಷದ ನಂತರವು ದುಡಿದು ತಿನ್ನುವಂತಹ ಪರಸ್ಥಿತಿಯು ಇನ್ನೂ ದೂರವಾಗಿಲ್ಲ, ಬಡ ಹಿರಿಯ ನಾಗರಿಕರು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಮುಪ್ಪಾವಸ್ಥೆಯಲ್ಲಿಯೂ ದುಡಿಯಬೇಕಾದ ಅನಿವಾರ್ಯತೆ ಇದೆ, ಸರ್ಕಾರ ಪ್ರಸ್ತುತ ನೀಡುತ್ತಿರುವ ಮಾಶಾಸನದಿಂದ ಯಾವ ಪ್ರಯೋಜನವೂ ಇಲ್ಲ, ಹೀಗಾಗಿ ಸರ್ಕಾರ ಕೂಡಲೇ ಹಿರಿಯ ನಾಗರಿಕರಿಗೆ ವೈಜ್ಞಾನಿಕವಾಗಿ 6 ಸಾವಿರ ರೂ. ಗಳ ಮಾಶಾಸನವನ್ನು ಬಿಡುಗಡೆ ಮಾಡಬೇಕು ಎಂದು ಕರೆ ನೀಡಿದರು.

ನಿವೃತ್ತ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಸುಶೀಲಾಬಾಯಿ ಪವಾರ ಮಾತನಾಡಿ, ಲಾಕ್ ಡೌನ್ ಅವದಿಯಲ್ಲಿ ವಯೋವೃದ್ಧರಿಗೆ 1 ಸಾವಿರ ರೂ. ಮಾಶಾಸನ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು, ಇಲ್ಲಿಯವರೆಗೂ ವೃದ್ಧರಿಗೆ ಮಾಶಾಸನ ತಲುಪಿಲ್ಲ, ಆಧಾರ್ ಲಿಂಕ್ ಆಗಿಲ್ಲ ಮೊದಲಾದ ಕುಂಟುನೆಪ ಹೇಳಿ ವೃದ್ಧರನ್ನು ಸತಾಯಿಸಲಾಗುತ್ತಿದೆ, ಶೇ.60 ರಷ್ಟು ವಯೋವೃದ್ಧರ ಪಿಂಚಣಿ ಸಹ ನಿಂತು ಹೊಗಿದೆ, ಪಿಂಚಣಿ ಅವಲಂಬಿತವಾಗಿರುವ ವೃದ್ಧರಿಗೆ ತೀವ್ರ ತೊಂದರೆ ಎದುರಾಗಿದೆ ಎಂದರು.

ಹಿರಿಯ ನಾಗರಿಕರಾದ ಜಹಾಂಗೀರ ಮಿರ್ಜಿ, ಮಹಿಬ್ಬೂಬಿ ಪಾಂಡುಗೋಳ, ಲಾಲಸಾಬ್ ಕೊರಬಉ, ಲಕ್ಷ್ಮೀಬಾಯಿ ಬಡಿಗೇರ, ವರ್ಷಾ ಇಲಕಲ್, ಸಂಗೀತಾ ಪೂಜಾರಿ, ವಿಠ್ಠಲ ಬೀಳಗಿಕರ, ರಫೀಕ್ ಬಾಗಾಯತ್ ಪಾಲ್ಗೊಂಡಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.