ತಾಂಬಾ : ಇಂಡಿ ತಾಲೂಕಿನ ತಾಂಬಾ ಗ್ರಾಮದ ಹತ್ತಿರದಲ್ಲಿರುವ ಬ್ರಿಜ್ ಮೇಲೆ ಮಳೆ ನೀರು ನಿಂತು ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಂಬಾ ಗ್ರಾಮದ ಹತ್ತಿರದಲ್ಲಿ ಇದ್ದ ಹಳ್ಳದ ಬ್ರೀಜದಲ್ಲಿ ತಗ್ಗು ಗುಂಡಿಗಳು ಬಿದ್ದ ಕಾರಣ ಮಳೆ ನೀರು ತುಂಬಿಕೊಂಡಿದ್ದರಿಂದ ಸಾರ್ವಜನಿಕರಿಗೆ ತಿರುಗಾಡಲು ತೊಂದರೆಯಾಗುತ್ತಿದೆ.
ಇಂಡಿ, ತಾಂಬಾ, ದೇವರ ಹಿಪ್ಪರಗಿಯ ಮುಖ್ಯ ರಸ್ತೆಯ ಬ್ರಿಜದಲ್ಲಿ ತಗ್ಗು ಗುಂಡಿಗಳು ಬಿದ್ದು ಬ್ರೀಜ್ ಹಾಳಾಗಿದೆ. ಸತತವಾಗಿ 2 ದಿನಗಳಿಂದ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಮಳೆ ಆಗುತ್ತಿದ್ದ ಕಾರಣ ಮಳೆ ನೀರು ತುಂಬಿಕೊಂಡು
ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಸಂಚಾರ ಮಾಡಲು ತೊಂದರೆ ಆಗುತ್ತಿದ್ದು, ಕೂಡಲೇ ಸಂಬಂಧಪಟ್ಟ ಇಂಡಿ ಉಪವಿಭಾಗದ ಪಿಡಬ್ಲ್ಯೂಡಿ ಅಧಿಕಾರಿಗಳು ಬ್ರೀಜ್ ದುರಸ್ಥಿ ಮಾಡಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.