ಉತ್ತರ ಪ್ರದೇಶದಲ್ಲಿ ಆಡಳಿತ ಕುಸಿತ

ಕೇಂದ್ರ, ಉತ್ತರ ಪ್ರದೇಶ ಬಿಜೆಪಿ ಸರಕಾರದ ದೌರ್ಜನ್ಯ, ದಬ್ಬಾಳಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ

0

Gummata Nagari : Bijapur News

ಬಿಜಾಪುರ : ಜಿಲ್ಲಾ ಕಾಂಗ್ರೆಸ್ ಸಮಿತಿ, ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಜಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕೇಂದ್ರ ಬಿಜೆಪಿ ಸರಕಾರ ಹಾಗೂ ಉತ್ತರ ಪ್ರದೇಶ ಬಿಜೆಪಿ ಸರಕಾರದ ದೌರ್ಜನ್ಯ, ದಬ್ಬಾಳಿಕೆ, ದಮನ ನೀತಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮೇಲೆ ಸಿಬಿಐ ದಾಳಿ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಿ ಜಿಲ್ಲಾಧಿಕಾರಿ ಮುಖಾಂತರ ರಾಷ್ಟçಪತಿ ಅವರಿಗೆ ಮನವಿ ಸಲ್ಲಿಸಲಾಯಿತು.

ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಪ್ ಮಾತನಾಡಿ, ಭಾರತ ದೇಶದ ಅತ್ಯಂತ ಪ್ರತಿಷ್ಟಿತ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಇಂದು ದೌರ್ಜನ್ಯ, ದಬ್ಬಾಳಿಕೆ ಸಾಮೂಹಿಕವಾಗಿದೆ ಹಾಗೂ ಅಲ್ಲಿನ ಆಡಳಿತ ಸುವ್ಯವಸ್ಥೆ ಕುಸಿದು ಹೋಗಿದೆ. ಮೊನ್ನೆ ಹಾಥರಸ್ ಜಿಲ್ಲೆಯಲ್ಲಿ ದಲಿತ ಕುಟುಂಬದ ಯುವತಿ ಮೇಲೆ ಅಲ್ಲಿನ ಪುಢಾರಿಗಳು ಸಾಮೂಹಿಕ ಅತ್ಯಾಚಾರ ನಡೆಸಿ ಅವಳ ಮೇಲೆ ಹಲ್ಲೆ ನಡೆಸಿ ಆ ಯುವತಿ ಮರಣ ಹೊಂದಲು ಕಾರಣೀಭೂತರಾಗಿದ್ದು ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಗುರಿಪಡಿಸುವಂತಹ ತನಿಖೆ ನಡೆಸಿ ಅವರ ಕುಟುಂಬ ವರ್ಗಕ್ಕೆ ಹಾಗೂ ದೇಶಕ್ಕೆ ನ್ಯಾಯ ಒದಗಿಸಿ ಕೊಡಲು ಕಾಂಗ್ರೆಸ್ ಪಕ್ಷ ಆಗ್ರಹಿಸುತ್ತದೆ ಎಂದರು.

ಉತ್ತರ ಪ್ರದೇಶದ ಬಿಜೆಪಿ ಸರಕಾರ ಈ ಕಾಮುಕರ ರಕ್ಷಣೆಗೆ ನಿಂತಿದ್ದು ಜಗ್ಗಜಾಹೀರಾಗಿದೆ, ಉತ್ತರ ಪ್ರದೇಶ ಪೋಲಿಸರು ಸಂತ್ರಸ್ತ ಕುಟುಂಬದ ಗಮನಕ್ಕೆ ತರದೇ ರಾತ್ರೋರಾತ್ರಿ ಸಂತ್ರಸ್ತ ದಲಿತ ಯುವತಿಯ ಶವ ಸಂಸ್ಕಾರವನ್ನು ಮಾಡಿದ್ದು ಏತಕ್ಕೆ? ಇದನ್ನು ಸಿಬಿಐಗೆ ಅಥವಾ ಸುಪ್ರೀಂಕೋರ್ಟಿನ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಮೇಲೆ ಸಿಬಿಐ ದಾಳಿ ನಡೆಸಿದ್ದು ಪಕ್ಷ ಬಲವಾಗಿ ಖಂಡಿಸುತ್ತದೆ, ಈ ದೇಶದಲ್ಲಿ ಚುನಾವಣೆಗಳು ಬಂದಾಗ ಮಾತ್ರ ವಿರೋಧ ಪಕ್ಷದ ನಾಯಕರ ಮೇಲೆ ಇಂತಹ ದಾಳಿಗಳು ನಡೆಯುತ್ತಿದ್ದು ಇದು ರಾಜಕೀಯ ಪ್ರೇರಿತವಾಗಿದೆ. ಕೇಂದ್ರದ ಬಿಜೆಪಿ ಸರಕಾರ ಈ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ವಿಪಕ್ಷ ನಾಯಕರ ಮೇಲೆ ಸವಾರಿ ಮಾಡಲು ಹೊರಟಿರುತ್ತಾರೆ. ಈ ದೇಶದ ಜನ ಇಂತಹ ದಾಳಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಮುಂದಿನ ದಿನಗಳಲ್ಲಿ ಜನ ಇದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ. ಕರ್ನಾಟಕದ ಉಚ್ಚ ನ್ಯಾಯಾಲಯವು ಬಲವಂತದ ತನಿಖೆಗೆ ತಡೆಯಾಜ್ಞೆ ನೀಡಿದ್ದು ಅದನ್ನು ಉಲ್ಲಂಘಿಸಿ ಸಿಬಿಐ ಸಂಸ್ಥೆಯವರು ಬಿಜೆಪಿ ಯವರ ಒತ್ತಡಗಳಿಗೆ ಮಣಿದು ಬಲವಂತವಾಗಿ ಡಿ.ಕೆ.ಶಿವಕುಮಾರ ರವರ ಮೇಲೆ ದಾಳಿ ನಡೆಸಿದ್ದು ಖಂಡನೀಯವಾಗಿದೆ. ಕೇಂದ್ರದ ಬಿಜೆಪಿ ಸರಕಾರ ಹಾಗೂ ರಾಜ್ಯ ಬಿಜೆಪಿ ಸರಕಾರ ಹತಾಶ ಭಾವನೆಯಿಂದ ನಡೆದುಕೊಳ್ಳುತ್ತಿದ್ದು ಜನವಿರೋಧಿಯಾಗಿದೆ, ಈ ನಿಟ್ಟಿನಲ್ಲಿ ಮಾನ್ಯ ರಾಷ್ಟçಪತಿಗಳು ಕೇಂದ್ರ ಸರಕಾರಕ್ಕೆ, ಉತ್ತರ ಪ್ರದೇಶ ಸರಕಾರಕ್ಕೆ ಹಾಗೂ ರಾಜ್ಯ ಸರಕಾರಗಳ ಮೇಲೆ ಸೂಕ್ತ ಕ್ರಮ ಜರುಗಿಸಲು ಆಗ್ರಹಿಸಿದರು.

ನಾಗಠಾಣ ಮತಕ್ಷೇತ್ರದ ಮಾಜಿ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ಕೇಂದ್ರ ಬಿಜೆಪಿ ಸರಕಾರ, ಉತ್ತರ ಪ್ರದೇಶದ ಬಿಜೆಪಿ ಸರಕಾರ, ರಾಜ್ಯ ಬಿಜೆಪಿ ಸರಕಾರದ ದಮನ ನೀತಿಗಳನ್ನು ಖಂಡಿಸಿ ಮಾತನಾಡುತ್ತಾ ಈ ಸರಕಾರಗಳು ಹಿಟ್ಲರ್ ಸರಕಾರಗಳಾಗಿದ್ದು ಜನವಿರೋಧಿಯಾಗಿವೆ. ಭಾರತ ದೇಶದಲ್ಲಿ ಇಂದು ಬಡವರಿಗೆ, ದೀನದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲದಂತಾಗಿದೆ. ಜನರಲ್ಲಿ ಸುಳ್ಳು ಕನಸುಗಳನ್ನು ಬಿತ್ತಿ ಅಧಿಕಾರಕ್ಕೆ ಬಂದಿರುವ ಕೇಂದ್ರ ಸರಕಾರ ಹಿಟ್ಲರ್ ಹೆಸರಿನಲ್ಲಿರುವ ದಾಖಲೆ ಮುರಿದಿದ್ದಾರೆ ಈ ದೇಶದಲ್ಲಿ ಅನೇಕ ಸಮಸ್ಯೆಗಳಿದ್ದು ಅದನ್ನು ಬಗೆಹರಿಸದೇ ರಾಜಕೀಯ ಮಾಡುತ್ತಿರುವ ಬಿಜೆಪಿ ಸರಕಾರ ಈ ದೇಶ ಹಾಳಮಾಡುವುದರಲ್ಲಿ ನಿರತವಾಗಿದೆ. ರಾಜಕೀಯವಾಗಿ ವಿರೋಧ ಪಕ್ಷದ ನಾಯಕರಿಗೆ ಹಿಟ್ಲರ್‌ನಂತೆ ವರ್ತಿಸಿ ಸರಕಾರಿ ಸಂಸ್ಥೆಗಳಾದ ಐಟಿ, ಇಡಿ, ಸಿಬಿಐ ಸಂಸ್ಥೆಗಳನ್ನು ದುರ್ಬಳಕೆ ಮಾಡಿ ಅಂಜಿಸುವ ಕೆಲಸ ನಡೆಯುತಿದ್ದು ಇದಕ್ಕೆ ಕಾಂಗ್ರೆಸ್ ಪಕ್ಷ ಎಂದೂ ಹೆದರುವುದಿಲ್ಲ ಅನ್ನುವುದು ಅವರು ಮನದಟ್ಟು ಮಾಡಿಕೊಳ್ಳಬೇಕು. ಉತ್ತರ ಪ್ರದೇಶದ ಹಾಥರಸ್ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ, ಕೊಲೆ ಇದು ಮಾನವೀಯತೆಗೆ ಕೊಟ್ಟ ಕೊಡಲಿ ಪೆಟ್ಟಾಗಿದೆ ಈ ನಿಟ್ಟಿನಲ್ಲಿ ವಿರೋಧ ಪಕ್ಷದ ಮುಖಂಡರು ಹಾಗೂ ಸಂಘಟನೆಗಳು ಧ್ವನಿ ಎತ್ತಿದಾಗ ಉತ್ತರ ಪ್ರದೇಶದ ಬಿಜೆಪಿ ಸರಕಾರ ರಾಷ್ಟ್ರ ದ್ರೋಹದಂತಹ ಸುಮಾರು 12 ಕೇಸ್‌ಳನ್ನು ಹಾಕಿ ಬಾಯಿ ಮುಚ್ಚಿಸಲು ಹೊರಟಿರುವುದು ಕಾಂಗ್ರೆಸ್ ಪಕ್ಷ ಇದನ್ನು ಬಲವಾಗಿ ಖಂಡಿಸುತ್ತದೆ. ಮಾನ್ಯ ರಾಷ್ಟ್ರಪತಿಗಳು ಉತ್ತರ ಪ್ರದೇಶದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಿ ಉತ್ತರ ಪ್ರದೇಶ ಸರಕಾರವನ್ನು ಅಮಾನತ್ತಿನಲ್ಲಿಡಬೇಕೆಂದು ಅಗ್ರಹಿಸುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಡಿಎ ಮಾಜಿ ಅಧ್ಯಕ್ಷ ಆಜಾದ್ ಪಟೇಲ್, ರಾಜ್ಯ ಎಸ್ಸಿ ಘಟಕದ ಕಾರ್ಯದರ್ಶಿ ಸುನೀಲ ಉಕ್ಕಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ಘೋಣಸಗಿ, ಪಕ್ಷದ ಮುಖಂಡರಾದ ಸೋಮನಾಥ ಕಳ್ಳಿಮನಿ, ಜ್ಯೋತಿರಾಮ ಪವಾರ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಬ್ದುಲ್ ಖಾದರ್ ಖಾದೀಮ್, ಪಾಲಿಕೆ ಮಾಜಿ ಸದಸ್ಯರಾದ ಅಬ್ದುಲ್ ರಜಾಕ್ ಹೋರ್ತಿ, ಇಲಿಯಾಸ ಸಿದ್ದಿಕಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಬ್ಬೀರ ಜಾಗೀರದಾರ ಮುಂತಾದವರು ಮಾತನಾಡಿದರು.

ಈ ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ನಗರ ಬ್ಲಾಕ್ ಅಧ್ಯಕ್ಷ ಜಮೀರ್ ಅಹ್ಮದ್ ಬಕ್ಷಿ, ಕೆಪಿಸಿಸಿ ಸಂಚಾಲಕರಾದ ಶಹಾಜಾನ್ ದುಂಡಸಿ, ಜಿಲ್ಲಾ ಹಿಂದುಳಿದ ಘಟಕದ ಅಧ್ಯಕ್ಷ ಸಾಹೇಬಗೌಡ ಬಿರಾದಾರ, ಹೂ.ಹಿಪ್ಪರಗಿ ಬ್ಲಾಕ್ ಅಧ್ಯಕ್ಷ ಬಾಳನಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೊಡೆ, ಬಿಜಾಪುರ ನಗರ ಸೇವಾದಳದ ಅಧ್ಯಕ್ಷೆ ಅನ್ನಪೂರ್ಣ ಬೀಳಗೀಕರ, ಪಾಲಿಕೆ ಮಾಜಿ ಸದಸ್ಯರಾದ ಜಮೀರ್ ಅಹ್ಮದ್ ಬಾಂಗಿ, ಸೈಯ್ಯದ್ ಇದ್ರೀಸಪಾಶಾ ಬಕ್ಷಿ, ಕಾಂಗ್ರೆಸ್ ಮುಖಂಡರಾದ ಪ್ರಕಾಶ ಕಟ್ಟಿಮನಿ, ಹಾಜಿಲಾಲ ದಳವಾಯಿ, ಚನ್ನಬಸಪ್ಪ ನಂದರಗಿ, ದಾವಲಸಾಬ ಬಾಗವಾನ, ತಾಜುದ್ದೀನ ಖಲೀಪ, ಧನರಾಜ.ಎ, ಮುನೀರ ಕಾಲೇಬಾಗ, ಮಂಜುನಾಥ ನಿಡೋಣಿ, ರವೀಂದ್ರ ಜಾಧವ, ನಾಸೀರ ನಾಗರಬಾವಡಿ, ಅರ್ಜುನ ಕಾಳೆ, ಆಸಿಮಾ ಕಾಲೆಬಾಗ, ಮಂಜುಳಾ ಜಾಧವ, ಹಮೀದಾ ಪಟೇಲ, ಸುಂದರಪಾಲ ರಾಠೋಡ, ಸಮೀರ್ ಲೋಣಿ, ಪೈರೋಜ್ ಬಳಬಟ್ಟಿ, ಆಸೀಪ್ ಪುಂಗಿವಾಲೆ, ಶೌಕತ್ ಯಲಗಾರ, ಜಾವೀದ್ ಶೇಖ, ಅಲ್ತಾಪ್ ಅಸ್ಕಿ, ಇಸಾಕ್ ಗುಲಬರ್ಗಾ, ಅಜಯ ರಜಪೂತ, ಎಂ.ಎ.ಬಕ್ಷೀ, ಅಶ್ಪಾಕ್ ಮನಗುಳಿ ಮುಂತಾದವರು ಇದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.