ಧಾರವಾಡ : ಆಕಳು ಮೈ ತೊಳೆಯಲು ಹೋಗಿ ಬಾಲಕರಿಬ್ಬರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದಲ್ಲಿ ನಿನ್ನೆ ನಡೆದಿದ್ದು, ಇಂದು ತಡವಾಗಿ ಬೆಳಕಿಗೆ ಬಂದಿದೆ.
ಮೃತ್ಯುಂಜಯ ಕಾಮಧೇನು ಹಾಗೂ ರೋಹಿತ ಪೂಜಾರಿ ಎಂಬ ಬಾಲಕರೇ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸಾವಿಗೀಡಾದ ಈ ಮಕ್ಕಳು 13 ಹಾಗೂ 14 ವರ್ಷದ ಮಕ್ಕಳು ಎಂಬುದು ಗೊತ್ತಾಗಿದೆ.
ಕೆರೆಯಲ್ಲಿ ಆಕಳು ಮೈ ತೊಳೆಯಲು ಹೋದಾಗ ಕೆರೆಯಲ್ಲಿ ಈ ಬಾಲಕರು ಮುಳುಗಿದ್ದಾರೆ. ಮರಳಿ ಆಕಳು ಅಷ್ಟೆ ಮನೆಗೆ ಬಂದಾಗ ಮಕ್ಕಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದು ಗೊತ್ತಾಗಿದೆ. ಈ ಸಂಬಂಧ ಧಾರವಾಡ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.
Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ Facebook । Twitter । YouTube । Instagram ಅನುಸರಿಸಿ..