ವಿಮಾನ ನಿಲ್ದಾಣ ಯೋಜನಾ ಪ್ರದೇಶಕ್ಕೆ ಜಿಲ್ಲಾಧಿಕಾರಿಗಳ ಭೇಟಿ, ಪರಿಶೀಲನೆ

0

Gummata Nagari : Bijapur News

ಬಿಜಾಪುರ : ಜಿಲ್ಲೆಯ ಬುರಾಣಪುರ-ಮಧಬಾವಿ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ವಿಮಾನ ನಿಲ್ದಾಣ ಯೋಜನಾ ಪ್ರದೇಶಕ್ಕೆ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಮಾನ ನಿಲ್ದಾಣ ಸ್ಥಾಪನೆಗಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿರುವ ಟರ್ಮಿನಲ್, ರನ್‍ವೇ, ಪಾರ್ಕಿಂಗ್, ಉದ್ಯಾನವನ ಅಭಿವೃದ್ಧಿ ಸೇರಿದಂತೆ ನಿಲ್ದಾಣಕ್ಕೆ ಸಂಪರ್ಕಿಸಲು ಅವಶ್ಯಕತೆ ಇರುವ ಅಪ್ರೋಚ್ ರೋಡ್, ಜಲಸಂಪನ್ಮೂಲದ ಅವಶ್ಯಕತೆಗಳ ಬಗ್ಗೆ ಜಿಲ್ಲಾಧಿಕಾರಿಗಳು ಲೋಕೋಪಯೊಗಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ವಿಮಾನ ನಿಲ್ದಾಣಕ್ಕಾಗಿ ಅಪ್ರೋಚ್ ರೋಡ್ ಕಲ್ಪಿಸಲು ಅವಶ್ಯಕತೆ ಇರುವ ಹೆಚ್ಚುವರಿ ಜಮೀನಿಗೆ ಸಂಬಂಧಪಟ್ಟಂತೆ ಸೂಕ್ತ  ಗಮನ ನೀಡುವಂತೆ ತಹಶಿಲ್ದಾರ ಅವರಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು ವಿಮಾನ ನಿಲ್ದಾಣಕ್ಕೆ ತ್ವರಿತ ಸಂಪರ್ಕಿಸುವ ಕಾಲುವೆ ಪಕ್ಕದ ಜಾಗವನ್ನು ರಸ್ತೆಗೆ ಬಳಸುವ ಕುರಿತು ಪರಿಶೀಲನೆ ನಡೆಸಿದರು.

ವಿಮಾನ ನಿಲ್ದಾಣಕ್ಕೆ ಅವಶ್ಯಕ ಸಹಾಯ ಸಹಕಾರವನ್ನು ಆದ್ಯತೆ ಮೇಲೆ ಒದಗಿಸುವುದಾಗಿ ಲೋಕೋಪಯೋಗಿ ಅಧಿಕಾರಿಗಳಿಗೆ ತಿಳಿಸಿದ ಜಿಲ್ಲಾಧಿಕಾರಿಗಳು ವಿಮಾನ ನಿಲ್ದಾಣಕ್ಕಾಗಿ ಅತ್ಯುತ್ತಮ ಪ್ರದೇಶ ಇದಾಗಿದ್ದು, ಅತ್ಯಂತ ಸುಂದರವಾಗಿ ಅಭಿವೃದ್ಧಿ ಪಡಿಸುವ ಬಗ್ಗೆ ಯೋಜನೆ ರೂಪಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ವಿ.ಬಿ ಪಾಟೀಲ ಅವರು ವಿಮಾನ ನಿಲ್ದಾಣ 2 ಹಂತದಲ್ಲಿ ಅಭಿವೃದ್ದಿ ಪಡಿಸಲಾಗುತ್ತಿದ್ದು, ಆರಂಭಿಕವಾಗಿ ಮತ್ತು ಪ್ರಥಮ ಹಂತದ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಟೆಂಡರ್ ಪ್ರಕ್ರೀಯೆ ಚಾಲನೆಯಲ್ಲಿದೆ.  ಐಸೋಲೇಷನ್ ಬೆ, ಟರ್ಮಿನಲ್, ರನ್ ವೇ, ಲೇವಲಿಂಗ್, ಪೆರಿಫೇರಲ್ ರಸ್ತೆ ನಿರ್ಮಾಣ, ಅಗತ್ಯ ವಿರುವ ಅಫ್ರೋಚ್ ರಸ್ತೆ ಮತ್ತು ಜಲಸಂಪನ್ಮೂಲದ ಅವಶ್ಯಕತೆ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರವಿ ಪವಾರ, ತಹಶಿಲ್ದಾರ ಶ್ರೀಮತಿ ಮೋಹನ್ ಕುಮಾರಿ ಸೇರಿದಂತೆ ಕಂದಾಯ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.