ವೈಯಕ್ತಿಕ ತೇಜೋವಧೆಗೆ ಕುತಂತ್ರ: ನಿರಾಣಿ

0

Gummata Nagari : Bijapur News

ಬಿಜಾಪುರ : ಬಿಜಾಪುರದಲ್ಲಿರುವ ಎಸ್‌ಎಂಎನ್ ಸೌಹಾರ್ದ ಸಹಕಾರಿಗೂ ಹಾಗೂ ನನಗೂ ಯಾವುದೇ ರೀತಿಯ ಸಂಬಂಧವೇ ಇಲ್ಲ, ಇದು ರಾಜಕೀಯ ಪ್ರೇರಿತ ಮತ್ತು ದುರುದ್ದೇಶದಿಂದ ಕೂಡಿದ್ದು, ಹಾಗೂ ನನ್ನ ವೈಯಕ್ತಿಕ ತೇಜೋವಧೆ ಮಾಡಲು ಈ ಎಲ್ಲ ಕುತಂತ್ರ ಅನುಸರಿಸಲಾಗುತ್ತಿದೆ, ಸಹಕಾರ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಫೇಡರೇಶನ್‌ ಗೂ ದಾಖಲೆ ಸಮೇತ ಮಾಹಿತಿಗಳನ್ನು ಒದಗಿಸಲಾಗಿದೆ, ಹೀಗಾಗಿ ಎಸ್.ಎಂ.ಎನ್. ಎಂಬ ಹೆಸರಿನ ಸಹಕಾರಿ ಸಂಸ್ಥೆಯನ್ನು `ಶ್ರೀ ಮುರುಗೇಶ ನಿರಾಣಿ’ ಎಂದು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಸ್ಪಷ್ಟಪಡಿಸಿದ್ದಾರೆ.

ಎಂಆರ್‌ಎನ್ ಸಹಕಾರಿ ವತಿಯಿಂದ ಅನ್ಯಾಯವಾಗಿದೆ ಎಂದು ರೈತರು ಬಿಜಾಪುರದಲ್ಲಿ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ದಾಖಲೆಗಳೊಂದಿಗೆ ಸ್ಪಷ್ಟೀಕರಣ ನೀಡಿರುವ ನಿರಾಣಿ ಅವರು, ಈಗಾಗಲೇ ಈ ಸಂಬAಧ ಇಲಾಖೆಗಳಿಗೆ ಪತ್ರ ಬರೆದಿದ್ದೇನೆ, ಅದರನ್ವಯ ಸಹಕಾರಿ ಇಲಾಖೆಯವರು 2012 ರ ಆಗಸ್ಟ್ 4 ರಂದು `ಶ್ರೀ ಮುರುಗೇಶ ನಿರಾಣಿ ಕ್ರೇಡಿಟ್ ಸೌಹಾರ್ದ ಸಹಕಾರಿ ಎಂಬುದನ್ನು ಶ್ರೀ ಮುನೀಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಬಿಜಾಪುರ ಎಂದು ಮರುನಾಮಕರಣ ಮಾಡಿ ಆದೇಶಿಸಿದ್ದಾರೆ. ಏತನ್ಮಧ್ಯೆ ಸಹಕಾರಿ ಇಲಾಖೆಯವರು ಹೆಸರು ಬದಲಾವಣೆ ಆದೇಶ ಮಾಡಿದ್ದರೂ ಸಹಕಾರಿಯ ನಾಮಫಲಕ, ಹಣಕಾಸಿನ ವ್ಯವಹಾರಗಳ ವೋಚರ್‌ಗಳು, ಸಹಕಾರಿ ಅರ್ಜಿ, ದಾಖಲೆಗಳು, ಬಾಂಡ್‌ಗಳ ಮೇಲೆ ಶ್ರೀ ಮುರುಗೇಶ ನಿರಾಣಿ ಕ್ರೇಡಿಟ್ ಸೌಹಾರ್ದ ಸಹಕಾರಿ ಹೆಸರಿನ ದಾಖಲಾತಿಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವುದರಿಂದ ನನಗೆ ತೀವ್ರತರವಾದ ತೊಂದರೆಯಾಗುತ್ತಿದೆ, ನನಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ ಎಂಬುದನ್ನು ಮಗದೊಂದು ಬಾರಿ ರೈತ ಬಾಂಧವರಲ್ಲಿ ಮನವರಿಕೆ ಮಾಡಿಕೊಳ್ಳುವೆ ಎಂದು ನಿರಾಣಿ ತಿಳಿಸಿದ್ದಾರೆ.

ಈಗಾಗಲೇ ಶ್ರೀ ಮುನಿಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿಯ ಅಧ್ಯಕ್ಷರಿಗೂ ಸಹ ಮೌಖಿಕವಾಗಿ ಈ ಬಗ್ಗೆ ತಿಳಿಸಿದರು ಸಹ ತಮ್ಮ ವ್ಯವಹಾರವನ್ನು ನನ್ನ ಹೆಸರಿನಲ್ಲಿ ಮುಂದುವರೆಸಿದ್ದರಿಂದ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು 2013 ರಲ್ಲಿಯೇ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಲಿಖಿತ ದೂರು ಸಹ ಸಲ್ಲಿಸಿದ್ದೇನೆ, ಪ್ರಸ್ತುತ ವಿವಾವದದಲ್ಲಿರುವ ಎಸ್‌ಎಂಎನ್ ಸೌಹಾರ್ದ ಸಹಕಾರಿಯಲ್ಲಿ ವೈಯಕ್ತಿಕವಾಗಿ ನಾನಾಗಲಿ ಅಥವಾ ನನ್ನ ಕುಟುಂಬದ ಸದಸ್ಯರ ಹೆಸರಿನಲ್ಲಾಗಲಿ ಷೇರು ಮೊದಲಾದ ರೀತಿಯ ಯಾವುದೇ ಆರ್ಥಿಕ ವ್ಯವಹಾರಗಳನ್ನೇ ಮಾಡಿಲ್ಲ. ಅಲ್ಲಿ ಒಂದೇ ಒಂದು ನಯಾಪೈಸೆ ವ್ಯವಹಾರ ಮಾಡಿಲ್ಲ ಎಂಬುದನ್ನು ಮತ್ತೊಮ್ಮೆ ತಿಳಿಸಬಯಸುತ್ತೇನೆ ಎಂದು ನಿರಾಣಿ ತಿಳಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.