ಜಿಲ್ಲಾದ್ಯಂತ ಮುಂದುವರಿದ ಮಳೆ ಆರ್ಭಟ

34.58 ಮೀ.ಮೀ. ಮಳೆ: 135 ಮನೆಗಳಿಗೆ ಹಾನಿ

0

Gummata Nagari : Bijapur News

ಬಿಜಾಪುರ : ಜಿಲ್ಲಾದ್ಯಂತ ಶನಿವಾರ ವರುಣನ ಆರ್ಭಟ ಮುಂದುವರೆದಿದೆ. ಶನಿವಾರ ರಾತ್ರಿ ಎಡಬಿಡದೇ ಸುರಿದ ಮಳೆಯಿಂದಾಗಿ ಜಿಲ್ಲೆಯ 135 ಮನೆಗಳು ಭಾಗಶ: ಹಾನಿಯಾಗಿವೆ, ಜಿಲ್ಲೆಯಾದ್ಯಂತ 34.58 ಮೀ.ಮೀ. ಮಳೆ ಸುರಿದಿದೆ.

ಶನಿವಾರ ಇಡೀ ರಾತ್ರಿ ಮಳೆ ಸುರಿದಿದ್ದು, ವಿಜಯಪುರ ನಗರ, ತಾಲೂಕಿನಾದ್ಯಂತ, ಮುದ್ದೇಬಿಹಾಳ, ತಾಳಿಕೋಟೆ, ಸಿಂದಗಿ, ಬಸವನಬಾಗೇವಾಡಿ, ಬಬಲೇಶ್ವರ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ.

ಆಲಮೇಲ ತಾಲೂಕಿನ ತಾರಾಪುರ ಗ್ರಾಮದಲ್ಲಿ 10ಕ್ಕೂ ಅಧಿಕ ಮನೆಗಳು ಕುಸಿದು ಬಿದ್ದಿವೆ. ಪರಿಣಾಮವಾಗಿ ನಿವಾಸಿಗಳು ಇಡೀ ರಾತ್ರಿ ಹೊರಗಡೆ ಮಳೆಯಲ್ಲಿಯೇ ನೆನೆಯುವಂತಾಯಿತು.

ಕಲಬುರ್ಗಿ ಜಿಲ್ಲೆ ಸೊನ್ನ ಬ್ಯಾರೇಜ್ ಹಿನ್ನಿರಿಗೆ ಒಳಪಡುವ ತಾರಾಪುರ ಗ್ರಾಮ ಪ್ರತಿಬಾರಿ ಮುಳಗಡೆ ಭೀತಿ ಎದುರಿಸುತ್ತಲೇ ಇದೆ. ಈ ಹಿಂದೆಯೇ ಸ್ಥಳಾಂತರವಾಗಬೇಕ್ಕಿದ್ದ ತಾರಾಪೂರ ಗ್ರಾಮದಲ್ಲಿ ಈಗ ಮತ್ತೆ ಭಯದ ವಾತಾವರಣ ಸೃಷ್ಟಿಯಾಗಿದೆ. ರಾತ್ರಿ 3 ಗಂಟೆ ಸುಮಾರಿ ಮಳೆ ಅತಿಯಾದ ಪರಿಣಾಮ ತಾರಾಪುರ ಗ್ರಾಮಸ್ಥರು ಮನೆಯಿಂದ ಹೊರಗಡೆ ಬಂದು ರಾತ್ರಿ ಕಳೆದಿದ್ದಾರೆ. ಪ್ರತಿ ವರ್ಷ ಭೀಮಾನದಿಗೆ ಪ್ರವಾಹ ಉಂಟಾದಲ್ಲಿ ತಾರಾಪೂರ ಗ್ರಾಮವನ್ನು ಹಿನ್ನೀರು ಸುತ್ತುವರೆಯುವದು ಸಾಮಾನ್ಯವಾಗಿದೆ. ಕಳೆದ 16 ವರ್ಷಗಳಿಂದ ಸ್ಥಳಾಂತರವಾಗದೇ ಗ್ರಾಮಸ್ಥರು ಪ್ರತಿ ವರ್ಷ ನರಕ ಯಾತನೆ ಅನುಭವಿಸುತ್ತಿದ್ದಾರೆ.

135 ಮನೆಗಳಿಗೆ ಹಾನಿ

ಶನಿವಾರ ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಬಿಜಾಪುರ ಜಿಲ್ಲೆಯ 135 ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿವೆ. ಬಿಜಾಪುರ, ಬಬಲೇಶ್ವರ, ತಿಕೋಟಾ ಹಾಗೂ ಬಸವನ ಬಾಗೇವಾಡಿಯಲ್ಲಿ ತಲಾ ಎರಡು ಮನೆಗಳು, ಕೊಲ್ಹಾರದಲ್ಲಿ 10, ನಿಡಗುಂದಿಯಲ್ಲಿ 21, ಮುದ್ದೇಬಿಹಾಳದಲ್ಲಿ 21, ತಾಳಿಕೋಟೆಯಲ್ಲಿ 15, ಇಂಡಿಯಲ್ಲಿ 11, ಸಿಂದಗಿಯಲ್ಲಿ 33 ಹಾಗೂ ದೇವರಹಿಪ್ಪರಗಿಯಲ್ಲಿ 16 ಮನೆಗಳಿಗೆ ಹಾನಿಯಾಗಿದೆ.

ಶನಿವಾರ 34.58 ಮೀ.ಮೀ. ಮಳೆ

ಬಿಜಾಪುರ ಜಿಲ್ಲೆಯಲ್ಲಿ 34.58 ಮೀ.ಮೀ. ಸುರಿದಿದೆ. ಬಸವನ ಬಾಗೇವಾಡಿ ತಾಲೂಕಿನಲ್ಲಿ ಅತ್ಯಧಿಕ ಅಂದರೆ 54.66 ಮೀ.ಮೀ. ಮಳೆ ಸುರಿದಿದೆ.

ಬಿಜಾಪುರ ತಾಲೂಕಿನಲ್ಲಿ 37.27 ಮೀ.ಮೀ., ಬಬಲೇಶ್ವರದಲ್ಲಿ 27.8 ಮೀ.ಮೀ., ತಿಕೋಟಾದಲ್ಲಿ 16.75 ಮೀ.ಮೀ, ಬಸವನ ಬಾಗೇವಾಡಿಯಲ್ಲಿ 54.66 ಮೀ.ಮೀ., ನಿಡಗುಂದಿಯಲ್ಲಿ 31.06 ಮೀ.ಮೀ, ಕೊಲ್ಹಾರದಲ್ಲಿ 13.1 ಮೀ.ಮೀ, ಮುದ್ದೇಬಿಹಾಳದಲ್ಲಿ 50.7 ಮೀ.ಮೀ, ತಾಳಿಕೋಟೆಯಲ್ಲಿ 56.85 ಮೀ.ಮೀ., ಇಂಡಿಯಲ್ಲಿ 19.26 ಮೀ.ಮೀ, ಚಡಚಣದಲ್ಲಿ 12.0 ಮೀ.ಮೀ, ಸಿಂದಗಿಯಲ್ಲಿ 41.62 ಮೀ.ಮೀ, ದೇವರಹಿಪ್ಪರಗಿಯಲ್ಲಿ 53.4 ಮೀ.ಮೀ. ಮಳೆ ಸುರಿದಿದೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.