ಮಹಾರಾಷ್ಟ್ರದ ಸಂಪರ್ಕ ಬಂದ್

ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಭೀಮೆ: ಭೀಮಾತೀರದ ಸೇತುವೆಗಳು ಮುಳುಗಡೆ

0

Gummata Nagari : Bijapur News

ಚಡಚಣ : ಮಹಾರಾಷ್ಟ್ರದಲ್ಲಿ ಎಡಬಿಡದೆ ಸುರಿಯುತ್ತಿರುವ ಮಹಾಮಳೆಯಿಂದ ಉಜನಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಹೆಚ್ಚುವರಿ ನೀರು ಭೀಮಾ ನದಿಗೆ ನೀರು ಹರಿಬಿಡಲಾಗುತ್ತಿದ್ದು, ಭೀಮಾ ತೀರದ ಸೇತುವೆಗಳು ತುಂಬಿ ಸಂಪೂರ್ಣ ಮುಳುಗಡೆಯಾಗಿವೆ.

ಚಡಚಣ ತಾಲ್ಲೂಕಿನ ಉಮರಜ ಹಾಗೂ ಉಮರಾಣಿ ಸೇತುವೆಗಳು ಸಂಪೂರ್ಣವಾಗಿ ಮುಳುಗಡೆಗೊಂಡು ಮಹಾರಾಷ್ಟ್ರದ ಸಾದೇಪುರ ಹಾಗೂ ಭಂಡರಕವಟೆ ಸೇರಿದಂತೆ ಹಲವು ಗ್ರಾಮಗಳ ಜನ ಸಂಪರ್ಕ ಕಡಿತಗೊಂಡಿದೆ.

ದಿನದಿಂದ ದಿನವೂ ಭೀಮಾ ನದಿಗೆ ನೀರಿನ ಪ್ರಮಾಣ ಹೆಚ್ಚುತ್ತಿದ್ದು, ಭೀಮಾತೀರದ ಜನರಲ್ಲಿ ಹಿಂದಿನ ವರ್ಷ ಸೃಷ್ಠಿಸಿದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಮನೆಮಾಡಿದೆ.

ಸದ್ಯ ಮಹಾರಾಷ್ಟ್ರದ ಉಜನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರನ್ನು ಭೀಮೆಗೆ ಹರಿಬಿಡಲಾಗಿದೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.