ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್, ಜೆಡಿಎಸ್ ಮಧ್ಯೆ ಪೈಪೋಟಿ
ನಾಲತವಾಡ ಪಪಂ ಅಧ್ಯಕ್ಷೆಯಾಗಿ ಲತಾ ಆಯ್ಕೆ ಖಚಿತ
ನಾಲತವಾಡ ಪಟ್ಟಣ ಪಂಚಾಯತನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅ.23ರಂದು ಚುನಾವಣೆ ದಿನಾಂಕ ನಿಗದಿ ಪಡಿಸಲಾಗಿದೆ ಎಂದು ತಹಶೀಲ್ದಾರ ಜಿ.ಎಸ್.ಮಳಗಿ ಅವರು ಬುದವಾರ ಬೆಳಗ್ಗೆ ಆದೇಶವನ್ನು ಹೊರಡಿಸಿದ್ದಾರೆ. ಚುನಾವಣೆಗೆ ಕೂಡಲೆ ಎಲ್ಲ ರೀತಿಯ ಸಿದ್ಧತೆ ಹಮ್ಮಿಕೊಳ್ಳಲಾಗುವುದು ಎಂದಿದ್ದಾರೆ.
ನಾಲತವಾಡ : ಪಟ್ಟಣ ಪಂಚಾಯತ ಎರಡನೇ ಅವಧಿಯ ಅಧ್ಯಕ್ಷೆಯಾಗಿ ಲತಾ ಕಟ್ಟಿಮನಿ ಅವಿರೋಧ ಆಯ್ಕೆ ನಿಶ್ಚಿತ್ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ಮತ್ತು ಜೆ.ಡಿ.ಎಸ್ ಮಧ್ಯ ಪೈಪೋಟಿ ಸಾಧ್ಯತೆ.
ನಾಲತವಾಡ ಪಟ್ಟಣ ಪಂಚಾಯತಿಯ ಮೊದಲನೇ ಅವಧಿಯ ಅಧ್ಯಕ್ಷ ಸ್ಥಾನ ಅವಧಿ ಮುಗಿದ ನಂತರ ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಗೊಂದಲದ ಹಿನ್ನಲೆಯಲ್ಲಿ ರಾಜಕೀಯ ಚಟುವಟಿಕೆ ಮಂಕಾಗಿತ್ತು ಆದರೆ ಸರಕರಾ ಅ.9 ರಂದು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಹೊಸ ಮೀಸಲಾತಿ ಬಿಡುಗಡೆ ಮಾಡಿದ ನಂತರ ಮತ್ತೆ ಪಟ್ಟಣ ಪಂಚಾಯತನಲ್ಲಿ ಸದಸ್ಯರಲ್ಲಿ ರಾಜಕೀಯ ಲೆಕ್ಕಾಚಾರಗಳೆಲ್ಲ ಚುರುಕಾಗಿ ನಡೆಯುತ್ತಿದೆ.
ಮೊದಲನೇ ಅವಧಿ ನಂತರ ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಪ.ಜಾತಿ ಮಹಿಳೆ ಎಂದು ಅಂದಿನ ಕಾಂಗ್ರೇಸ್ ಹಾಗು ಜೆ.ಡಿ.ಎಸ್ ಸಮ್ಮಿಶ್ರ ಸರಕಾರ ಮೀಸಲಾತಿ ಆದೇಶ ಹೊರಡಿಸಿತ್ತು, ನಾಲತವಾಡ ಪಟ್ಟಣ ಪಂಚಾಯತನಲ್ಲಿ ಕಾಂಗ್ರೇಸ್ ಸದಸ್ಯರ ಬಲ ಇರುವದರಿಂದ ಪ.ಜಾತಿ ಮೀಸಲಾತಿ ಆದೇಶವನ್ನು ಸಾಮಾನ್ಯ ಮೀಸಲಾತಿ ಎಂದು ಬದಲಾವಣೆ ಮಾಡಿತು. ಸರಕಾರ ಆದೇಶ ಬದಲಾವಣೆ ಮಾಡಿದ ನಂತರ ಅಧ್ಯಕ್ಷೆ ಸ್ಥಾನದ ಆಕಾಂಕ್ಷಿಯಾದ ಪ.ಜಾತಿ ಸದಸ್ಯ ಲತಾ ಕಟ್ಟಿಮನಿ ಅವರು ಹೈಕೋರ್ಟ ಮೇಟ್ಟಿಲು ಏರಿದರು, ಹೈಕೋರ್ಟನಲ್ಲಿ ಚರ್ಚೆ ಆದ ನಂತರ ನ್ಯಾಯಾಲಯ ಯಾವ ಕಾರಣಕ್ಕಾಗಿ ಮೀಸಲಾತಿ ಬದಲಾವಣೆ ಮಾಡಲಾಗಿದೆ ಎಂದು ಸರಕಾರಕ್ಕೆ ಪ್ರಶ್ನೆ ಮಾಡಿತು ನಂತರ ಸುದೀರ್ಘ ವಿಚಾರಣೆ ನಂತರ ನಾಲತವಾಡ ಪಟ್ಟಣ ಮೀಸಲಾತಿಯನ್ನು ಪ.ಜಾತಿ ಮಹಿಳೆಗೆ ನೀಡಬೇಕು ಎಂದು ನ್ಯಾಯಾಲಯ ಆದೇಶ ನೀಡಿತು. ಕೂಡಲೆ ನಾಲತವಾಡ ಪಟ್ಟಣ ಪಂಚಾಯತಿಯ ಚುನಾವಣೆಯನ್ನು ನಡೆಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಆದೇಶ ಸಹ ನೀಡಿತ್ತು ಆದರೆ ಕಾರಣಾಂತರಗಳಿಂದ ಚುನಾವಣೆ ನಡೆಯಲಿಲ್ಲ ಆದರೆ ಈಗ ಸರಕಾರವೇ ಹೊಸ ಮೀಸಲಾತಿಯಲ್ಲಿ ಪ.ಜಾತಿ ಮಹಿಳೆಯ ಎಂದು ಆದೇಶ ಬಿಡುಗಡೆ ಮಾಡಿದ ನಂತರ ಏಕೈಕ ಅಧ್ಯಕ್ಷ ಆಕಾಂಕ್ಷಿಯಾದ ಲತಾ ಕಟ್ಟಿಮನಿ ಅವರು ಅಧ್ಯಕ್ಷ ಸ್ಥಾನ ಏರುವುದು ಖಚಿತವಾಗಿದೆ. ಲತಾ ಕಟ್ಟಿಮನಿ ಅವರು ಜೆ.ಡಿ.ಎಸ್ ಪಕ್ಷದ ಟಿಕೆಟ್ ಪಟೆದು ಚುನಾಯಿತರಾಗಿದ್ದಾರೆ ಆದರೆ ಸದ್ಯ ಈಗ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಬೆಂಬಲಿಗರಾಗಿದ್ದು ಬಿಜೆಪಿ ಪಾಳೆಯದಲ್ಲಿ ಕಾಣಿಸಿಕೊಳ್ಳುತಿದ್ದಾರೆ.
ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ ಅ ಮಹಿಳೆಯೆಗೆ ಮೀಸಲಾಗಿದ್ದು ಇದಕ್ಕೆ ಇಬ್ಬರಲ್ಲಿ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ಕಾಂಗ್ರೇಸ್ ಸದಸ್ಯೆಯಾದ ಆಸ್ಮಾಬೇಗಂ ನಾಡದಾಳ ಹಾಗೂ ಜೆ.ಡಿ.ಎಸ್.ಸದಸ್ಯೆ ಭೀಮವ್ವ ಕ್ಷತ್ರಿ ನಡುವೆ ಪೈಪೋಟಿ ನಡೆಯಲಿದೆ. ಸದ್ಯ ಈಗ ಪಟ್ಟಣ ಪಂಚಾಯತ ನಲ್ಲಿ ಕಾಂಗ್ರೇಸ್ನ 6 ಸದಸ್ಯರು ಜೆ.ಡಿ.ಎಸ 6, ಬಿಜೆಪಿ 1 ಹಾಗೂ ಪಕ್ಷೇತರ ಓರ್ವ ಸದಸ್ಯರಿದ್ದಾರೆ. ಇದರಲ್ಲಿ ಕಾಂಗ್ರೇಸ್ ಪಕ್ಷದ ಆಕಾಂಕ್ಷಿಗೆ ಪಕ್ಷೇತರ ಬೆಂಬಲದೊಂದಿಗೆ 7 ಮತಗಳು ಪಡೆಯುವ ಲೆಕ್ಕಾಚಾರವಿದೆ. ಜೆ.ಡಿ.ಎಸ್ ಪಕ್ಷದ ಆಕಾಂಕ್ಷಿಯ ಪರವಾಗಿ ಮೂರು ಮತಗಳು ಇದ್ದು ಇನ್ನು ಮೂರು ಜೆ.ಡಿ.ಎಸ್ ಸದಸ್ಯರು ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದಾರೆ ಆದರೆ ಈಗ ಉಪಾಧ್ಯಕ್ಷ ಸ್ಥಾನವನ್ನು ಕೂಡ ಕಾಂಗ್ರೇಸ್ ಪಾಲು ಮಾಡಬಾರದು ಎಂದು ದೇಶಮುಖ ಮನೆತನದ ಮುಖಂಡರೊಬ್ಬರು ಶಾಸಕರ ಬೆಂಬಲದೊAದಿಗೆ ಜೆ.ಡಿ.ಎಸ್ ಪಕ್ಷದ ಆಕಾಂಕ್ಷಿಗೆ ಉಪಾಧ್ಯಕ್ಷ ಸ್ಥಾನಕ್ಕೆ ಏರಿಸಲು ತೆರೆಮರೆಯಲ್ಲಿ ಪ್ರಯತ್ನ ನಡೆಸುತಿದ್ದಾರೆ. ಶಾಸಕ ಎಸ್.ಪಾಟೀಲ ನಡಹಳ್ಳಿ ಅವರು ಜೆ.ಡಿ.ಎಸ್ ಅಭ್ಯರ್ತಿ ಭೀಮವ್ವ ಕ್ಷತ್ರಿಗೆ ಬೆಂಬಲ ನೀಡಿದರೆ ಜೆ.ಡಿ.ಎಸ್ 6 ಹಾಗೂ ಬಿಜೆಪಿಯ ಓರ್ವ ಹಾಗೂ ಶಾಸಕರ ಒಂದು ಮತ ಪಡೆದು ಉಪಾಧ್ಯಕ್ಷ ಆಗುವ ಸಾಧ್ಯತೆ ದಟ್ಟವಾಗಿದೆ.
ವರದಿ: ಯೂನುಸ್ ಮೂಲಿಮನಿ
Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ Facebook । Twitter । YouTube । Instagram ಅನುಸರಿಸಿ..