ಖಾಸಗಿ ಸುದ್ದಿ ವಾಹಿನಿ ಲೈವ್ ಸ್ಥಗಿತಕ್ಕೆ ಖಂಡನೆ

ಜೈ ಭೀಮಸೇನಾ ರಾಜ್ಯ ಸಂಘರ್ಷ ಸಮಿತಿಯಿಂದ ಡಿಸಿಗೆ ಮನವಿ

0

Gummata Nagari : Bijapur News

ಬಿಜಾಪುರ : ಖಾಸಗಿ ಪವರ್ ಸುದ್ದಿ ವಾಹಿನಿ ಲೈವ್ ಬಂದ್ ತೆರವುಗೊಳಿಸುವುದನ್ನು ಖಂಡಿಸಿ ಜೈ ಭೀಮಸೇನಾ ರಾಜ್ಯ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರ ಮೂಲಕ ರಾಷ್ಟ್ರಪತಿಗಳಿಗೆ, ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜೈಭೀಮ ಸೇನಾ ಸಂಘಟನೆ ರಾಜ್ಯ ಸಂಚಾಲಕ ಸಂತೋಷ ಭಾಸ್ಕರ ಮಾತನಾಡಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಧಮನಕಾರಿ ನೀತಿಯನ್ನು ಖಂಡಿಸುತ್ತೇವೆ. ಖಾಸಗಿ ಕನ್ನಡ ಸುದ್ದಿ ವಾಹಿನಿ ಲೈವ್ ಬಂದ್ ಮಾಡಿರುವುದು ಸರಿಯಾದ ಕ್ರಮ ಅಲ್ಲ. ಇದೇ ಟಿವಿ ವಾಹಿನಿ ಮಾಲೀಕರ ಮೇಲೆ ಆರೋಪ ಮಾಡಿರುವುದು ಬೇರೆ ವಿಚಾರ. ಆ ಕುರಿತು ತನಿಖೆ ನಡೆಸುವುದಕ್ಕೆ ಅಭ್ಯಂತರವಿಲ್ಲ. ಆದರೆ ಒಂದು ಟಿವಿ ವಾಹಿನಿ ಲೈವ್ ಬಂದ್ ಮಾಡುವುದರಿಂದ ಅದನ್ನೇ ಅವಲಂಬಿಸಿ ವೃತ್ತಿ ಮಾಡುತ್ತಿರುವ ನೂರಾರು ಪತ್ರಕರ್ತರ ಕುಟುಂಬಗಳು ಬೀದಿಗೆ ಬರುತ್ತವೆ. ಕೂಡಲೇ ಈ ಕುರಿತು ತನಿಖೆ ನಡೆಸಿ ಸಂಬಂಧಿಸಿದವರ ಮೇಲೆ ಸೂಕ್ತ ಕ್ರಮ ಕೈಗೊಂಡು ಬೀದಿಗೆ ಬಿದ್ದ ಕಾರ್ಮಿಕ ಹಾನಿ ಭರಿಸುವಲ್ಲಿ ಸರ್ಕಾರ ಮುಂದಾಗಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಬಸವರಾಜ ಲಗಳಿ ಮಾತನಾಡಿ, ಈ ಕೂಡಲೇ ಗೃಹ ಸಚಿವರಿಗೆ ನಿರ್ದೇಶನ ನೀಡಿ ಪವರ್ ಟಿವಿ ವಾಹಿನಿ ಲೈವ್ ಬಂದ್ ತೆರವು ಮಾಡಿಸಿ ನ್ಯಾಯ ದೊರಕಿಸಿಕೊಡಬೇಕು ಒತ್ತಾಯಿಸಿದರು.

ದಲಿತ ಮುಖಂಡರಾದ ಸುನೀಲ ಹೊಸಹಳ್ಳಿ ಮಾತನಾಡುತ್ತಾ, ರಾಜ್ಯ ಬಿಜೆಪಿ ಸರ್ಕಾರ ಮಾಧ್ಯಮದ ಮೇಲೆ ಹಿಡಿತ ಸಾಧಿಸುತ್ತಿರುವುದು ಸರಿಯಲ್ಲ. ಮಾಧ್ಯಮ ಎನ್ನುವುದು ಸಂವಿಧಾನದ ನಾಲ್ಕನೇ ಅಂಗವಾಗಿದ್ದು ಇದನ್ನು ಹಿಡಿತ ಸಾಧಿಸುವುದು ಯಾವ ಕಾನೂನಿನಲ್ಲಿಯೂ ಇಲ್ಲ. ಕೂಡಲೆ ಪಾರದರ್ಶಕವಾಗಿ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ನಜೀರ ಅಹ್ಮದ ಗುಲ್ಬರ್ಗಾ, ಪ್ರಭು ಧನ್ಯಾಳ, ಫಯಾಜ ಜಮಾದಾರ, ಭೂಪೇಶ ಲಿಂಬೂಡಕರ, ಬಸವರಾಜ ನಾಯ್ಕೋಡಿ, ಭೀಮರಾವ ಅಹಿರಸಂಘ, ಅನೀಲ ನಾಯ್ಕೋಡಿ, ಅಭಿಮನ್ಯು ಕಾಲೇಬಾಗ, ಮೀನಾಕ್ಷಿ ಕಾಲೇಬಾಗ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.