ಹಳ್ಳ ಹಿಡಿದ ಸ್ವಚ್ಛ ಭಾರತ ಮಿಷನ್ ಯೋಜನೆ

ನಾಲತವಾಡದಲ್ಲಿ ನಿರ್ಮಲ ನಗರ ಇನ್ನು ಕನಸು

0

Gummata Nagari : Bijapur News

ನಾಲತವಾಡ : 2020ನೇ ಸಾಲೀನಲ್ಲಿ ಕಾಲಿಟ್ಟರು ಕೂಡ ನಾಲತವಾಡ ಪಟ್ಟಣದಲ್ಲಿ ಸ್ವಚ್ಛ ಭಾರತ ಮಿಷನ್ ಪೂರ್ಣಗೊಳ್ಳದಿರುವುದು ಬೇಸರದ ಸಂಗತಿಯಾಗಿದೆ.

2019ನೇ ಸಾಲಿನಲ್ಲಿ ಭಾರತವನ್ನು ಸ್ವಚ್ಛ ಭಾರತವನ್ನಾಗಿಸುವ ಗುರಿದೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2014ರಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೇ ನೀಡಿದ್ದರು. ಆದರೆ ಪಟ್ಟಣದಲ್ಲಿ ಮಾತ್ರ 2020ನೇ ಸಾಲೀನಲ್ಲಿ ಕಾಲಿಟ್ಟರು ಕೂಡ ಸ್ವಚ್ಛ ಭಾರತ ಮಿಷನ್ ಪೂರ್ಣ ಗೊಳ್ಳದಿರುವುದು ಬೇಸರದ ಸಂಗತಿಯಾಗಿದೆ.

ರಾಷ್ಟ್ರಪಿತಾ ಮಹಾತ್ಮಾ ಗಾಂಧಿಯವರು ಯಾವಾಗಲು ಸ್ವಚ್ಛತೆಯ ಬಗ್ಗೆ ಒತ್ತು ನೀಡುತ್ತಿದರು. ಸ್ವಚ್ಛತೆ ಇಂದ ಜೀವನದಲ್ಲಿ ಅರೋಗ್ಯ ಮತ್ತು ಅಭಿವೃಧಿಯನ್ನು ಹೊಂದಬಹುದು ಎಂದು ನುಡಿಯುತ್ತಿದರು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಭಾರತ ಸರ್ಕಾರವು 2014 ರ ಅಕ್ಟೋಬರ್ 2 ರಂದು ಸ್ವಚ್ಛ ಭಾರತ ಅಭಿಯಾನವನ್ನು ಆರಂಭಿಸಲು ನಿರ್ಧರಿಸಿ ನಗರ ಪ್ರದೇಶವನ್ನು ಬಯಲು ಶೌಚ ಮುಕ್ತವನ್ನಾಗಿ ಮಾಡಲು ಸರಕಾರ ಹಲವಾರು ಯೋಜನೆ ಮತ್ತು ಅದರ ನಿರ್ವಹಣೆಗೆ ಅನುದಾನ ಕೂಡ ಮಂಜೂರ ಮಾಡಿತು ಆದರೆ ನಾಲತವಾಡ ಪಟ್ಟಣದಲ್ಲಿ ಮಾತ್ರ ಈ ಯೋಜನೆ ಹಳ್ಳ ಹಿಡಿದಿದೆ 2016-17ನೇ ಸಾಲೀನಲ್ಲಿ ಮಂಜೂರಾದ ಸಾಮೂಹಿಕ ಶೌಚಾಲಯಗಳನ್ನು ಇಲ್ಲಿಯ ವರೆಗೆ ಉದ್ಘಾಟನೆ ಕಾಣದೇ ಮಹಿಳೆಯರು ಅನಿವಾರ್ಯವಾಗಿ ಬಯಲು ಬಹಿರ್ದೆಸೆಯತ್ತ ಮುಖ ಮಾಡುತಿದ್ದಾರೆ.

ಬಯಲು ಬಹಿರ್ದೇಸೆಗೆ ಹೋಗಲು ನಮಗೆ ನಾಚಿಕೆ ಆಗುತ್ತಿದೆ ಅನಿವಾರ್ಯ ಕಾರಣದಿಂದ ನಾವು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲ ಕೂಡ ಪ್ರಾರಂಭ ವಾಗಿರುವ ಕಾರಣ ನಮ್ಮ ಪರಿಸ್ಥಿತಿಯನ್ನು ಹೇಳಲು ಆಗುವುದಿಲ್ಲ ಕೂಡಲೆ ಸಾಮೂಹಿಕ ಶೌಚಾಲಯಗಳನ್ನು ಉದ್ಘಾಟನೆ ಮಾಡಿ ನಮಗೆ ಬಯಲು ಬಹಿರ್ದೇಸೆಯಿಂದ ಮುಕ್ತಿ ನೀಡಬೇಕು.
-ಹೆಸರು ಹೇಳಲಿಚ್ಛಿಸದ ಮಹಿಳೆ.

ಮಂಜೂರಾದ ಶೌಚಾಲಯಗಳು: 2016-17ನೇ ಸಾಲೀನಲ್ಲಿ ಎಸ್.ಎಫ್.ಸಿ ಅನುದಾನದಲ್ಲಿ ವಾರ್ಡ ನಂ 13 ರಲ್ಲಿ 9.50 ಲಕ್ಷ, ವಾರ್ಡ ನಂ 3 ಮತ್ತು 4 ರಲ್ಲಿ 9.50 ಲಕ್ಷ. 2016-17ನೇ ಸಾಲೀನ ಎಸ್.ಸಿ.ಪಿ-ಟಿ.ಎಸ್.ಪಿ ಅನುದಾನದ ಅಡಿಯಲ್ಲಿ ವಾರ್ಡ ನಂ 1 ರಲ್ಲಿ 13 ಲಕ್ಷ, ವಾರ್ಡ ನಂ 5 ರಲ್ಲಿ 13 ಲಕ್ಷ, ವಾರ್ಡ ನಂ 10ರಲ್ಲಿ 13 ಲಕ್ಷ, ಮತ್ತು 14ನೇ ಹಣಕಾಸು ಯೋಜನೆಯಲ್ಲಿ ವಾರ್ಡ ನಂ 3ರಲ್ಲಿ 18 ಲಕ್ಷ, ವಾರ್ಡ ನಂ 14ರಲ್ಲಿ 10.15 ಲಕ್ಷ, ವಾರ್ಡ ನಂ 1ರಲ್ಲಿ 8.85 ಲಕ್ಷ, ವಾರ್ಡ ನಂ 13ರಲ್ಲಿ 9ಲಕ್ಷ, ವಾರ್ಡ ನಂ 9ರಲ್ಲಿ 11.81 ಲಕ್ಷದ ಅಂದಾಜು ವೆಚ್ಚದಲ್ಲಿ ನಿರ್ಮಲ ನಗರ ಶೌಚಾಲಯದ ಅಡಿಯಲ್ಲಿ ಸಾಮೂಹಿಕ ಶೌಚಾಲಯಗಳು ಪಟ್ಟಣಕ್ಕೆ ಮಂಜೂರಾಗಿವೆ. ಮಂಜೂರಾಗಿ ಮೂರು ವರ್ಷ ಗತಿಸಿದರು ಇಲ್ಲಿಯವರೆಗೆ ಒಂದೇ ಒಂದು ಶೌಚಾಲಯ ಕೂಡ ಉದ್ಘಾಟನೆ ಭಾಗ್ಯ ಕಾಣುತ್ತಿಲ್ಲ, ಒಂದಲ್ಲ ಒಂದು ಸಮಸ್ಯಯಿಂದ ಸಾಮೂಹಿಕ ಶೌಚಾಲಯಗಳು ಬಳಲುತ್ತಿವೆ ಕೆಲವು ಕಡೆ ನೀರಿನ ಸಮಸ್ಯ ಆದರೆ ಇನ್ನು ಕೆಲವು ಕಡೆ ಇನ್ನು ನಿರ್ಮಾಣ ಕಾರ್ಯ ಕೂಡ ನಡೆದಿಲ್ಲ ಈ ರೀತಿ ಹತ್ತು ಹಲವಾರು ಸಮಸ್ಯಗಳು ಇದ್ದರು ಇವುಗಳನ್ನು ಉದ್ಘಾಟನೆ ಮಾಡಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಲ್ಲಿ ಇಚ್ಚಾಶಕ್ತಿ ಕಾಣುತ್ತಿಲ್ಲ.

ನಿಲ್ಲುತ್ತಿಲ್ಲ ಇನ್ನು ಬಯಲು ಹಿರ್ದೇಸೆ: ಒಂದು ಕುಟುಂಬ ಉತ್ತಮವಾಗಿ ನಿರ್ವಹಣೆ ಮಾಡುತಿದ್ದರೆ ಅದಕ್ಕೆ ಮುಖ್ಯ ಆಧಾರ ಸ್ಥಂಬ ಅಂದರೆ ಅದು ಒಬ್ಬ ಮಹಿಳೆ ಆಗಿದ್ದಾಳೆ ಅದೇ ಮಹಿಳೆ ಇವತ್ತು ಬಯಲು ಬಹಿರ್ದೇಸೆಯಿಂದ ಬೇಸತ್ತ ಹೋದರು ಸಹ ಅವರ ನೆರವಿಗೆ ಬರಲು ಯಾರು ಕೂಡ ಮುಂದಾಗುತಿಲ್ಲ ಪಟ್ಟಣದಲ್ಲಿ ಒಟ್ಟು 11 ಸಾಮೂಹಿಕ ಶೌಚಾಲಯಗಳು ಮಂಜೂರಾದರು ಸಹ ಒಂದು ಕೂಡ ಉದ್ಘಾಟನೆ ಮಾಡದೇ ಮಹಿಳೆಗೆ ಅಧಿಕಾರಿ ವರ್ಗ ಬಯಲು ಬಹಿರ್ದೇಸೆಗೆ ತಳ್ಳುತಿದ್ದಾರೆ. ಮಳೆಗಾಲ ಕೂಡ ಇರುವದರಿಂದ ಮಹಿಳೆಯರು ಬಿದ್ದು ಎದ್ದು ಬಹಿರ್ದೇಸೆಗೆ ಹೋಗುತಿದ್ದಾರೆ ಮಹಿಳೆ ಇಷ್ಟೆಲ್ಲ ಕಷ್ಟ ಅನುಭವಿಸುತಿದ್ದರು ಅವರ ನೆರವಿಗೆ ಯಾರು ಕೂಡ ಮುಂದಾಗುತಿಲ್ಲ.

ಬಯಲು ಮಲ ವಿಸರ್ಜನೆಯಿಂದ ನಗರ ಕೊಳಕು, ದುರ್ವಾಸನೆ, ಅನೈರ್ಮಲ್ಯ ವಾತಾವರಣದಿಂದ ಕೂಡಿರುತ್ತದೆ. ಇದರಿಂದ ಜನರು ಡೆಂಗಿ, ಚಿಕುನ್ ಗುನ್ಯ, ಮಲೇರಿಯಾ, ಮೆದುಳು ಜ್ವರ, ಕಾಲರಾದಂತಹ ರೋಗಗಳಿಗೆ ತುತ್ತಾಗುತಿದ್ದಾರೆ ಕೂಡಲೆ ಸಂಭಂದಿಸಿದ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಶೌಚಾಲಯಗಳನ್ನು ಉದ್ಘಾಟನೆ ಮಾಡಿ ರೋಗದಿಂದ ಮುಕ್ತಿ ನೀಡಬೇಕು ಎಂದು ಜನರ ಒತ್ತಾಯವಾಗಿದೆ.

ಸಾಮೂಹಿಕ ಶೌಚಾಲಯ ಕೆಲವು ನಿರ್ಮಾಣವಾಗಿದೆ ಇನ್ನು ಕೆಲವು ನಿರ್ಮಾಣ ಹಂತದಲ್ಲಿವೆ. ನಿರ್ಮಾಣ ಆದ ಶೌಚಾಲಯಗಳನ್ನು ಕೆಲವೆ ದಿನಗಳಲ್ಲಿ ಸುತ್ತ ಮುತ್ತ ಪ್ರದೇಶವನ್ನು ಸ್ವಚ್ಛಗೊಳಿಸಿ ಉದ್ಘಾಟನೆ ಮಾಡುತ್ತೇವೆ.                                                              -ಎಂ.ಆರ್.ದಾಯಿ ಮುಖ್ಯಾಧಿಕಾರಿ.
Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.