ಕೇಂದ್ರ, ರಾಜ್ಯ ಸರ್ಕಾರ ಜನರಿಗೆ ಮಾರಕ: ಮುಶ್ರೀಫ್

ಜನ ವಿರೋಧಿ, ರೈತ ವಿರೋಧಿ ಮಸೂದೆ ವಾಪಸ್ ಪಡೆಯಲು ಆಗ್ರಹ

0

Gummata Nagari : Bijapur News

ಬಿಜಾಪುರ : ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ರೈತ ವಿರೋಧಿ ಕೃಷಿ ಮತ್ತು ಎಪಿಎಮ್‌ಸಿ ಹಾಗೂ ಭೂಸುಧಾರಣಾ ಕಾಯ್ದೆಗಳಿಗೆ ತಿದ್ದುಪಡಿ ಮಸೂದೆಗಳನ್ನು ಖಂಡಿಸಿ ಕರ್ನಾಟಕ ಬಂದಗೆ ಕರೇ ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ನಿರ್ದೇಶನದ ಮೆರೆಗೆ ವಿವಿಧ ಸಂಘಟಣೆಗಳು ಕರೆದಿರುವ ಬಂದ್‌ಗೆ ಸೋಮವಾರ ವಿಜಾಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಬೆಂಬಲ ಸೂಚಿಸಿ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆಯಲ್ಲಿ ನಡೆಸಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಜನ ವಿರೋಧಿ ಹಾಗೂ ರೈತ ವಿರೋಧಿ ಮಸೂದೆಗಳನ್ನು ವಾಪಸ್ಸು ಪಡೆಯಲು ಆಗ್ರಹಿಸಿ ಖಂಡಿಸಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ಸರ್ಕಾರಗಳಾಗಿದ್ದು ಜನರಿಗೆ ಮಾರಕವಾಗಿದೆ. ದೇವರಾಜ ಅರಸುರವರು ಬಡ ರೈತರಿಗಾಗಿ ಉಳುವವನೇ ಭೂ ಒಡೆಯ ಎಂದು ಘೋಷಿಸಿ ಬಡ ಅನ್ನದಾತನಿಗೆ ಆಸರೆ ಮಾಡಿ ಕೊಟ್ಟಿದ್ದರು ಆದರೆ ಬಿಜೆಪಿ ಸರಕಾರ ಬಡ ರೈತರ ಹೊಟ್ಟೆ ಮೇಲೆ ಕಾಲಿಡಲು ಹೊರಟಿರುವುದು ದುರಾದೃಷ್ಟಕರವಾಗಿದೆ. ಇಂದು ಬಿಜೆಪಿ ಸರ್ಕಾರ ಉಳ್ಳವನೇ ಭೂ ಒಡೆಯ ಮಾಡಲು ಹೊರಟಿದೆ ಹಾಗೂ ಖಾಸಗೀಕರಣಕ್ಕೆ ಒತ್ತು ಕೊಡುತ್ತಿದೆ. ಪ್ರತಿ ಕ್ಷೇತ್ರದಲ್ಲೂ ಖಾಸಗೀಕರಣ ಮಾಡಲು ಹೊರಟಿರುವ ಬಿಜೆಪಿ ಸರಕಾರ ಬಡವರ ವಿರೋಧಿಯಾಗಿದ್ದು ದೊಡ್ಡ ಉದ್ಯಮಿಗಳ ಕೈಗೊಂಬೆಯಾಗಿ ವರ್ತಿಸುತ್ತಿದೆ. ಇದನ್ನು ಕಾಂಗ್ರೆಸ್ ಪಕ್ಷ ಬಲವಾಗಿ ಖಂಡಿಸುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಇನ್ನೊಬ್ಬ ಕಾಂಗ್ರೆಸ್ ಮುಖಂಡ ಬಿ.ಎಸ್.ಪಾಟೀಲ(ಯಾಳಗಿ) ಮಾತನಾಡಿ, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ರೈತ ವಿರೋಧಿ ಕೃಷಿ ವಿಧೇಯಕಗಳನ್ನು ತಂದು ರೈತರ ಕತ್ತು ಹಿಸುಕುವ ಕೆಲಸ ಮಾಡುತ್ತಿದ್ದು ರೈತರು ಇದನ್ನು ಸಹಿಸಲು ಸಾಧ್ಯವಿಲ್ಲ ಬಿಜೆಪಿ ಸರ್ಕಾರ ಎಲ್ಲವನ್ನೂ ಮೀರಿ ರೈತರನ್ನು ನಾಶಮಾಡಲು ಹೊರಟಿರುವುದು ರೈತರು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಿ ಮನೆಗೆ ಕಳಿಸುವುದು ಅಧಿಕಾರಕ್ಕೆ ಬಂದ ಬಿ.ಎಸ್.ಯಡಿಯೂರಪ್ಪ ಸರಕಾರ ಹಿಂಬಾಗಿಲಿನಿಂದ ಕರೋನಾ ರೋಗದ ನೆಪದಲ್ಲಿ ಸುಗ್ರೀವಾಜ್ಞೆ ಮೂಲಕ ರೈತ ವಿರೋಧಿ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ರೈತರನ್ನು ಮೋಸ ಮಾಡಲು ಹೊರಟಿರುತ್ತದೆ. ಆದರೆ ಕಾಂಗ್ರೆಸ್ ಪಕ್ಷ ಜನ ವಿರೋಧಿ ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತರಲು ಬಿಡುವುದಿಲ್ಲ ತಕ್ಷಣ ಸರ್ಕಾರ ಎಚ್ಚೆತ್ತುಕೊಂಡು ವಾಪಸ್ಸು ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿ ಬಲವಾಗಿ ಖಂಡಿಸಿದರು.

ಇದೆ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲಖಾದರ ಖಾದೀಂ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ರಾಜ್ಯ ಕಿಸಾನ್ ಘಟಕದ ಉಪಾಧ್ಯಕ್ಷ ಡಿ.ಎಚ್.ಕಲಾಲ ಮಾತನಾಡಿದರು.

ಈ ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಜಿಲ್ಲಾ ಐಟಿ-ಬಿಟಿ ಅಧ್ಯಕ ಮಹಮ್ಮದರಫೀಕ ಟಪಾಲ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷರುಗಳಾದ ಸಿದ್ದನಗೌಡ ಪಾಟೀಲ, ಜಮೀರ ಅಹ್ಮದ ಬಕ್ಷೀ, ಆರತಿ ಶಹಾಪೂರ, ಕೆಪಿಸಿಸಿ ಸಂಚಾಲಕ ಶಾಹಜಾನ ದುಂಡಸಿ, ರೈತ ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರ ದೇವರಡ್ಡಿ ಜಿಲ್ಲಾ ಖಜಾಂಚಿ ವಿಜಯಕುಮಾರ ಘಾಟಗೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಬ್ಬೀರ ಜಾಗೀರದಾರ, ವಸಂತ ಹೊನಮೊಡೆ, ಹಾಜಿಲಾಲ ದಳವಾಯಿ, ಇಲಿಯಾಸ ಸಿದ್ದಕಿ, ಮಂಜುಳಾ ಜಾಧವ, ಅಶಿಮಾ ಕಾಲೇಬಾಗ, ಸಮೀರ ಅಕ್ಕಲಕೋಟ, ಧನರಾಜ.ಎ, ರವೀಂದ್ರ ಜಾಧವ, ಪರಶುರಾಮ ಹೊಸಮನಿ, ಬಿ.ಎಸ್.ಗಸ್ತಿ, ಮಹೇಶ ಶಹಾಪೂರ, ರಹೀಮ ಮುಶ್ರೀಫ್, ತಾಜುದ್ದೀನ ಖಲೀಪಾ, ಸಂಗಪ್ಪ ಸಂಗಾಪುರ, ಬಾಬು ಯಾಳವಾರ, ಎ.ಬಿ.ಮುಲ್ಲಾ, ಅರ್ಜುನ ಕಾಳೆ, ಜಾವೀದ ಶೇಖ, ಆಸೀಪಅಲಿ ಪುಂಗಿವಾಲೆ, ರಫೀಕ ಹೆಬ್ಬಾಳ ಮುಂತಾದವರು ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.