ಡಿಕೆಶಿ ಮೇಲೆ ಸಿಬಿಐ ದಾಳಿ ರಾಜಕೀಯ ಪ್ರೇರಿತ: ಎಂ.ಬಿ.ಪಾಟೀಲ

0

Gummata Nagari : Bijapur News

ಬಿಜಾಪುರ : ಚುನಾವಣೆ ಸಂದರ್ಭಗಳಲ್ಲಿ ಮಾತ್ರ ಬಿಜೆಪಿ ಸಿಬಿಐ ಮೊದಲಾದ ಸಂಸ್ಥೆಗಳನ್ನು ದುರಪಯೋಗಪಡಿಸಿಕೊಳ್ಳುತ್ತದೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಮೇಲೆ ನಡೆದ ಸಿಬಿಐ ದಾಳಿ ರಾಜಕೀಯ ಪ್ರೇರಿತ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ ದೂರಿದರು.

ಸುದ್ದಿಗೋಷ್ಠಿಯಲ್ಲಿ ಈ ಪ್ರತಿಕ್ರಿಯೆ ನೀಡಿರುವ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಮೇಲೆ ನಡೆದಿರುವ ಸಿಬಿಐ ದಾಳಿ ರಾಜಕೀಯ ಪ್ರೇರಿತವಾಗಿದೆ, ಉಪಚುನಾವಣೆ ಸಮೀಪಿಸಿದೆ, ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೊಂದರೆ ನೀಡಲು ಈ ಪ್ರಯೋಗ ಮಾಡುತ್ತಿದೆ, ಬಿಜೆಪಿ ಸಿಬಿಐ ಮೊದಲಾದ ಸಂಸ್ಥೆಗಳನ್ನು ಸ್ವಾರ್ಥಕ್ಕಾಗಿ ಹಾಗೂ ಚುನಾವಣೆ ವಿಷಯಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವುದು ದುರಂತ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವುದು ಖಂಡಿತ ಎಂದರು.

ಮಾಸ್ಕ್-ದೈಹಿಕ ಅಂತರ ಕಾಯ್ದುಕೊಳ್ಳುವುದೇ ಮದ್ದು

ಕೊರೊನಾ ರೋಗ ವ್ಯಾಪಕವಾಗಿ ಉಲ್ಬಣಗೊಳ್ಳುತ್ತಿದೆ, ಕೊರೊನಾ ಪ್ರತಿಬಂಧಕ ಲಸಿಕೆ ಸಂಶೋಧನೆಯಾಗಿ ಅದು ದೇಶದ ಪ್ರತಿಯೊಬ್ಬ ಪ್ರಜೆಗೂ ಮುಟ್ಟಲು ಹೆಚ್ಚಿನ ಸಮಯ ಹಿಡಿಯುತ್ತದೆ, ಹೀಗಾಗಿ ಅಲ್ಲಿಯವರೆಗೆ ನಮ್ಮ ಆರೋಗ್ಯ ನಮ್ಮ ಕೈಯಲ್ಲಿಯೇ ಇದೆ. ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದು ಕೊರೊನಾಗೆ ಸದ್ಯದ ಮಟ್ಟಿಗೆ ದೊಡ್ಡ ಮದ್ದು.

ಅನೇಕರು ಮಾಸ್ಕ್ ಧರಿಸುವುದೇ ಇಲ್ಲ, ಇನ್ನೂ ಕೆಲವರು ಮುಖಕ್ಕೆ ಮಾತ್ರ ಸೀಮಿತವಾಗುವಂತೆ ಅಸಮರ್ಪಕವಾಗಿ ಮಾಸ್ಕ್ ಧರಿಸುತ್ತಾರೆ ಇದು ಪ್ರಯೋಜನಕಾರಿಯಾಗಿಲ್ಲ. ಸರಿಯಾಗಿ ಮಾಸ್ಕ್ ಧರಿಸಬೇಕು, ಸಾಬೂನಿನಿಂದ ಪದೇ ಪದೇ ಕೈ ತೊಳೆಯಬೇಕು, ನಮ್ಮ ಆರೋಗ್ಯ ನಮ್ಮ ಕೈಯಲ್ಲಿಯೇ ಇದೆ ಎಂದು ಜನರಿಗೆ ಮನವಿ ಮಾಡಿಕೊಂಡರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.