ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ರದ್ದುಗೊಳಿಸಿ

ಕರ್ನಾಟಕ ರೈತ ಸಂಘ, ಹಸಿರು ಸೇನೆ ಜಿಲ್ಲಾ ಘಟಕದಿಂದ ಪ್ರತಿಭಟನೆ

0

Gummata Nagari : Bijapur News

ಬಿಜಾಪುರ : ಭೂ ಸುಧಾರಣೆ ಹಾಗೂ ಎ.ಪಿ.ಎಂ.ಸಿ. ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಸಿಂದಗಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧ್ಯಕ್ಷ ಶಕ್ತಿಕುಮಾರ ಉಕುಮನಾಳ ಮಾತನಾಡಿ, ಕೇಂದ್ರ ಸರಕಾರದ ಅಣತಿಯಂತೆ ರಾಜ್ಯ ಸರಕಾರವು ರೈತ ವಿರೋಧಿ ನೀತಿಯನ್ನು ಜಾರಿಗೊಳಿಸಿದ್ದು, ಇದರಿಂದ ರೈತರು ತಮ್ಮ ಜಮೀನು ಕಳೆದುಕೊಂಡು ಬಂಡವಾಳ ಶಾಹಿಗಳ ಕೈಗೊಂಬೆಯಾಗಿ ಜೀವನ ನಡೆಸುವ ಪ್ರಸಂಗ ಉದ್ಭವಗೊಂಡಿದೆ. ಇದರಿಂದ ರೈತರು ತಮ್ಮ ಜಮೀನವನ್ನು ಕಳೆದುಕೊಂಡು ಬೀದಿಪಾಲಾಗುವ ಇಂತಹ ಕಾಯ್ದೆಯನ್ನು ಸರಕಾರವು ರದ್ದುಗೊಳಿಸಬೇಕೆಂದು ತಿಳಿಸಿದರು.

ರೈತ ಮುಖಂಡ ಚಂದ್ರಗೌಡ ಪಾಟೀಲ ಮಾತನಾಡಿ, ರಾಜ್ಯ ಸರಕಾರವು ಎ.ಪಿ.ಎಂ.ಸಿ. ಕಾಯ್ದೆಯನ್ನು ಜಾರಿಗೆ ತರುವಲ್ಲಿ ಏಕಮುಖಿಯಾಗಿ ಆದೇಶ ಮಾಡಿದ್ದು, ಇದರಿಂದ ದೇಶದ ಬೆನ್ನಲುಬಾದ ರೈತನ ಕೈಗಳಿಗೆ ಕೋಳ ಹಾಕಿದಂತೆ ಆಗುತ್ತಿದೆ. ಹಾಗೂ ಎಪಿಎಂಸಿಯ ಮೂಲಕ ಮಾರುಕಟ್ಟೆಗೆ ಬರುವ ಬೆಳೆಗಳ ವಿಲೇವಾರಿ ಹಾಗೂ ಇನ್ನಿತರ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಕೂಲಿ ಕಾರ್ಮಿಕರಿಗೆ ಸರಕಾರವು ಮೋಸ ಮಾಡುತ್ತಿದೆ. ಆದ್ದರಿಂದ ಈ ಕಾಯ್ದೆಯನ್ನು ರದ್ದುಗೊಳಿಸಿ ಮೊದಲಿದ್ದ ಕಾಯ್ದೆ ಜಾರಿಗೆ ತರುವಂತೆ ಆಗ್ರಹಪಡಿಸಿದರು.

ಯುವ ಮುಖಂಡ ರಾಹುಲ ಕುಬಕಡ್ಡಿ ಮಾತನಾಡಿ, ಕೇಂದ್ರ ಸರಕಾರವು ಕೇವಲ ಬಂಡವಾಳ ಶಾಹಿಗಳಿಗೆ, ಖಾಸಗಿ ಕಂಪನಿಗೆ ಮಣೆ ಹಾಕುತ್ತಿದ್ದು,ಇದರಿಂದ ಕೆಳಮಟ್ಟದಲ್ಲಿ ದುಡಿಯುವ ಕಾರ್ಮಿಕರನ್ನು ಉಪವಾಸ ಕೆಡುವ ಕೆಲಸಕ್ಕೆ ಕೈ ಹಾಕಿದೆ. ಹಾಗೂ ಕೇವಲ ಬಂಡವಾಳ ಶಾಹಿಗಳಿಗೆ ಮೊಣೆ ಹಾಕುತ್ತಿರುವ ರೈತರ ಪಾಡನ್ನು ಪಾಲಿಸುತ್ತಿಲ್ಲ. ರೈತರು ಬೀಳು ಬಿದ್ದ ಜಮೀನುಗಳನ್ನು ಬಂಡವಾಳ ಶಾಹಿಗಳಿಗೆ ಕೊಡುವುದರಿಂದ ಸುತ್ತಮುತ್ತಲಿನ ರೈತರ ಜಮೀನುಗಳ ಫಲವತತ್ತೆ ಹಾಳು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಾಳಾಸಾಹೇಬ ಇಂಡಿ, ಫಯಾಜ ಕಲಾದಗಿ, ಮಂಜುಳಾ ಹಿಪ್ಪರಗಿ, ಆಶಾ ಬಾಗವಾನ, ಮಹಾದೇವಿ ತಳಕೇರಿ, ಓಂಕಾರಿ ದೇವಿಉಪಾಸಕರು, ವಿಶ್ವನಾಥ ತಡಲಗಿ, ಪರಶುರಾಮ ವಿಜಾಪುರ, ರಮೇಶ ವಾಲಿಕಾರ, ಸದಾನಂದ ಮೋದಿ, ರೇಣುಕಾ ಕಟ್ಟಿಮನಿ, ಸವಿತಾ ಭಜಂತ್ರಿ, ಪ್ರೇಮ ಚಲವಾದಿ ಪಾಲ್ಗೊಂಡಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.