ಕೊರೋನಾದಿಂದ ದೂರವಿರಲು ಕಡ್ಡಾಯ ಮಾಸ್ಕ್ ಬಳಕೆಗೆ ಕರೆ

ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಶಂಕರಗೌಡ ಪಾಟೀಲ್ ಅಭಿಮಾನಿ ಬಳಗದಿಂದ ಜಾಗೃತಿ ಕಾರ್ಯ

0

Gummata Nagari : Bijapur News

ಚಡಚಣ : ದೇಶಾದ್ಯಂತ ಕೊರೋನಾರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕರ್ನಾಟಕದಲ್ಲೂ ಕೊರೋನಾ ರಣಕೇಕೆ ಹಾಕುತ್ತಿದ್ದು, ಇದರ ಕಬಂಧ ಬಾಹುವಿನಿಂದ ತಪ್ಪಿಸಿಕೊಳ್ಳಲು ಪ್ರತಿಯೊಬ್ಬರೂ ಸಾಮಾಜಿಕ ಅಂತರ ಹಾಗೂ ಮುಖಕ್ಕೆ ಮಾಸ್ಕ್, ಸ್ಯಾನಿಟೈಜರ್ ಬಳಕೆ ಮಾಡುವದು ಅತಿ ಅವಶ್ಯ.

ಆದರೆ ಸಾರ್ವಜನಿಕರು ಮಾತ್ರ ಇವನ್ನೆಲ್ಲ ಮರೆತು ಸಾರ್ವಜನಿಕ ಹಾಗೂ ಜನ ದಟ್ಟಣೆ ಪ್ರದೇಶದಲ್ಲಿ ಯಾವುದೇ ಮುನ್ನೆಚ್ಚರಿಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಓಡಾಡುತ್ತಿದ್ದಾರೆ.

ಈ ನಿಟ್ಟಿನಲ್ಲಿ ಚಡಚಣ ಪಟ್ಟಣದಲ್ಲಿ ಬಸವೇಶ್ವರ ವೃತ್ತದಲ್ಲಿಂದು ಪಟ್ಟಣದ ಸಾರ್ವಜನಿಕರಿಗೆ ಹಾಗೂ ಪಟ್ಟಣಕ್ಕೆ ಆಗಮಿಸುವ ಸಾರ್ವಜನಿಕರಿಗೆ 2000 ಉಚಿತ ಮಾಸ್ಕ್ ವಿತರಸುವ ಜತೆಗೆ ಕೊರೋನಾ ಸೊಂಕಿನಿAದ ದೂರವಿರಲು ಮಾಸ್ಕ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಮಹತ್ವದ ಕಾರ್ಯವನ್ನು ಕರ್ನಾಟಕ ಸರ್ಕಾರದ ದೆಹಲಿ ಪ್ರತಿನಿಧಿ ಶಂಕರಗೌಡ ಪಾಟೀಲ್ ಅಭಿಮಾನಿ ಬಳಗದವರು ಮಾಡಿದರು.

ಈ ಸಂದರ್ಭದಲ್ಲಿ ಪ್ರೋ. ಅನೀಲಕುಮಾರ ಕಲ್ಯಾಣಶೆಟ್ಟಿ ಮಾತನಾಡಿ, ಪ್ರತಿಯೊಬ್ಬರು ತಮ್ಮ ಆರೋಗ್ಯದ ಬಗ್ಗೆ ಅತಿವ ಕಾಳಜಿ ವಹಿಸಬೇಕು. ಆರೋಗ್ಯ ಸಂಪತ್ತಿದ್ದರೆ ಎಲ್ಲ ಸಂಪತ್ತು ಇದ್ದಂತೆ. ಸಾರ್ವಜನಿಕರು ಹೊರಗಡೆ ಓಡಾಡುವಾಗ ತಪ್ಪದೇ ಮುಖ ಕವಚ (ಮಾಸ್ಕ್) ಬಳಕೆ ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವದು ಅತೀ ಮುಖ್ಯವೆಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ತಾ.ಪಂ ಸದಸ್ಯ ಚಂದ್ರಶೇಖರ ನಿರಾಳೆ, ಪ.ಪಂ ಸದಸ್ಯ ಮಲ್ಲಿಕಾರ್ಜುನ ಧೋತ್ರೆ, ಪ.ಪಂ ನಾಮ ನಿರ್ದೇಶನ ಸದಸ್ಯ ಮಲ್ಲಿಕಾರ್ಜುನ ವನಂಜಕರ, ಅಂಬಾದಾಸ ಸಿಂದಗಿ, ಶಾಂತೇಶ ಕುಂಬಾರ, ಅನೀಲ ಪಾಟೀಲ್, ಡಾ. ಎಸ್.ಎಸ್ ದೇಸಾಯಿ, ಮದುಕರ ಮೋಕಾಶಿ, ರವಿ ಕೆಂಗಾರ, ಸುನಿಲ ಕ್ಷತ್ರಿ, ರಾಹುಲ ಲಿಗಾಡೆ, ಸುರೇಶ ಸಿಂಧೆ, ಭರತ ಸಿಂಧೆ, ಅಪ್ಪಾರಾವ ಸಿಂಧೆ ಸೇರಿದಂತೆ ಗೆಳೆಯರ ಬಳಗದ ಸರ್ವವರು ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.