5 ವರ್ಷ ಕಳೆದರೂ ಪೂರ್ಣಗೊಳ್ಳದ ಬಸ್ಸನಿಲ್ದಾಣ ಕಾಮಗಾರಿ

*ಕೆಸರು ಗದ್ದೆಯಾದ ಬಸ್ಟಾö್ಯಂಡ್ *ಕುಡಿಯುವ ನೀರಿನ ವ್ಯವಸ್ಥೆ ಇಲ್ಲ *ಉದ್ಘಾಟನೆಗೊಳ್ಳದ ಶೌಚಾಲಯ

0

ಸಂಗಮೇಶ ಸಗರ
ಕಲಕೇರಿ: ಬಿಜಾಪುರ ಜಿಲ್ಲೆಯ ನೂತನ ತಾಳಿಕೋಟಿ ತಾಲೂಕಿನ ಕಲಕೇರಿ ಪಟ್ಟಣದಲ್ಲಿ ಕಳೆದ ೫ ವರ್ಷಗಳಿಂದ ನಡೆಯುತ್ತಿರುವ ಬಸ್ಸ ನಿಲ್ದಾಣ ಕಾಮಾಗಾರಿ ಆಮೆ ಗತಿಯಲ್ಲಿ ಸಾಗುತಿದ್ದು, ಪೂರ್ಣಗೊಳ್ಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ ಎಂದು ನಿತ್ಯ ಬೇಸರದಿಂದ ಜನಸಾಮಾನ್ಯರು ಮಾತನಾಡುವಂತಾಗಿದೆ.
ಕೆಸರು ಗದ್ದೆಯಾದ ಬಸ್ಟಾö್ಯಂಡ್:-
ನಿತ್ಯ ಸುಮಾರು ೨೫-೩೦ ಬಸ್ಸುಗಳು ದಿನಕ್ಕೆ ಎರಡುಬಾರಿಯಂತೆ ಬಂದು ಹೋಗುತ್ತವೆ, ಮಳೆಬಂದರAತು ಕೆಸರುಗದ್ದೆಯಾಗಿ ಜನಸಾಮಾನ್ಯರಿಗೆ ನಡೆದಾಡಲು ಸಾಧ್ಯವಾಗದೇ ಕೆಸರಲ್ಲಿ ಕಾಲು ಜಾರಿ ಬಿದ್ದಂತಹ ಉದಾಹರಣೆಗಳಿವೆ. ಬಸ್ಸುಗಳು ಬ್ರೇಕ್ ಹತ್ತದೇ ಉರುಳುತ್ತಾ ಮುಂದೆ ಹೋಗುವಂತಾದ ಘಟನೆಗಳು ನಡೆದಿವೆ, ಹಿರಿಯ ನಾಗರಿಕರು ಮತ್ತು ಅಂಗವಿಕಲರ ಪರಿಸ್ಥಿತಿಯಂತು ದೇವರೇಬಲ್ಲ. ಅತೀ ಶೀರ್ಘದಲ್ಲಿ ಬಸ್ಸ ನಿಲ್ದಾಣದ ಆವರಣದಲ್ಲಿ ಕಾಂಕ್ರೆಟ್ ಹಾಸಿಗೆ ನಿರ್ಮಾಸಿಬೇಕೆಂದು ಜನರ ಆಶಯ.

ಕಳೆದು ೫ವರ್ಷಗಳಿಂದ ಕಲಕೇರಿ ಬಸ್ಟಾö್ಯಂಡ್ ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿ ಶೀಘ್ರಗತಿಯಲ್ಲಿ ಪೂರ್ಣಗೊಳಿಸಬೇಕು, ಇದರಿಂದಾಗಿ ಅನೇಕ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿವೆ, ಇಲ್ಲದಿದ್ದಲ್ಲಿ ಮುಂದಿನ ಪರಿಸ್ಥಿತಿ ಎದುರಿಸಬೇಕಾಗುತ್ತದೆ.
– ಪ್ರವೀಣ ಜಗಶೆಟ್ಟಿ,  ಕ.ರ.ವೇ ವಲಯ ಅಧ್ಯಕ್ಷರು, ಕಲಕೇರಿ

ಶೌಚಾಲಯ ವ್ಯವಸ್ಥೆ:-
ಸುಮಾರು ೪೦ ಹಳ್ಳಿಗಳ ಕೇಂದ್ರಬಿAದುವಾಗಿರುವ ಕಲಕೇರಿಗೆ ನಿತ್ಯ ವಿಧ್ಯಾಭ್ಯಾಸಕ್ಕೆ, ವ್ಯಾಪಾರ-ವಹಿವಾಟು ಸೇರಿದಂತೆ ತಮ್ಮ ಕೆಲಸಗಳಿಗೆ ಆಗಮಿಸುವ ಸಾವಿರಾರು ಜನಸಾಮಾನ್ಯರಿಗೆ ಬಸ್ಸ ನಿಲ್ದಾಣದಲ್ಲಿ ಶೌಚಾಲಯಕ್ಕೆ ಹೋಗಬೇಕಾದರೆ ಮೂಗು ಮುಚ್ಚಿ ಜೀವ ಬಿಗಿಹಿಡಿದುಕೊಂಡು ಹೋಗುವಂತಾಗಿದೆ. ಮಹಿಳೆಯರಂತು ಮೂತ್ರ ವಿಸರ್ಜನೆಗೆ ಹೋಗಲು ಸಾಧ್ಯವಾಗದೆ ಅವರ ಸಂಭAದಿಕರ ಮನೆಗೆ ಹೋಗಬೇಕು ಇಲ್ಲ ತಮ್ಮ ಊರುಗಳಿಗೆ ಹೋಗುವವರೆಗೆ ತಾಳಬೇಕಾದ ಗಂಭಿರ ಸ್ಥಿತಿ ನಿರ್ಮಾಣವಾಗಿದೆ, ಹೀಗಿರುವಾಗ ಮಹಿಳೆಯರ ಪರಿಸ್ಥಿತಿ ಊಹಿಸಿಕೊಳಲಾರದಂತಾಗಿದೆ. ಎರಡನೇಯ ಹಂತದ ಕಾಮಗಾರಿಯಲ್ಲಿ ಶೌಚಾಲಯ ನಿರ್ಮಾಣವಾದರೂ ಉದ್ಘಾಟನೆಗೊಳ್ಳದೇ ಪರಿತಪ್ಪಿಸುವ ಸ್ಥಿತಿ ನಿರ್ಮಾಣವಾಗಿದೆ.

ಕಲಕೇರಿ ಬಸ್ಸ ನಿಲ್ದಾಣದ ಸಿಮೆಂಟ್ ರಸ್ತೆಗಾಗಿ ಹೆಚ್ಚಿನ ಅನುದಾನಕ್ಕಾಗಿ ಕ್ರೀಯಾಯೋಜನೆ ಮಾಡಲಾಗುತ್ತಿದೆ, ಅನುಮೊದನೆ ದೊರೆತ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು.
ಜಗನಾಥ ಜೋಗಣ್ಣವರ
(ಕೆ.ಎಸ್.ಆರ್.ಟಿ.ಸಿ) ಎ.ಇ.ಇ, ಸಿಂದಗಿ

ಕುಡಿಯುವ ನೀರಿನ ಸಮಸ್ಯೆ:-
ಶುದ್ಧ ಕುಡಿಯುವ ನೀರಿನ ವ್ಯವಸ್ತೆ ಇಲ್ಲದೇ ಪ್ರತಿನಿತ್ಯ ಪ್ರಯಾಣಿಕರು ದುಡ್ಡು ಕೊಟ್ಟು ಬಾಟಲಿ ನೀರನ್ನು ಕುಡಿಯುವಂತಾಗಿದೆ, ಇದಕ್ಕಾಗಿ ಹೊರಗಡೆಯಿರುವ ಹೋಟೆಲುಗಳಿಗೆ ಮೊರೆ ಹೋಗುವಂತಾಗಿದೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.