ಎಂಇಎಸ್ ಸಂಘಟನೆ ನಿಷೇಧಿಸಿ

ಕರವೇ, ಕನವೇ ಪದಾಧಿಕಾರಿಗಳಿಂದ ಡಿಸಿ ಕಚೇರಿ ಎದುರು ಮತ ಪ್ರದರ್ಶನ

0

Gummata Nagari : Bijapur News

ಬಿಜಾಪುರ : ರಾಜ್ಯದಲ್ಲಿ ಎಂಇಎಸ್ ಸಂಘಟನೆಯನ್ನು ಶೀಘ್ರವೇ ನಿಷೇಧಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕರ್ನಾಟಕ ನವನಿರ್ಮಾಣ ವೇದಿಕೆ ಪದಾಧಿಕಾರಿಗಳು ಜಂಟಿಯಾಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮತ ಪ್ರದರ್ಶನ ನಡೆಸಿದರು. ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ಕೂಡಲೇ ನಿಷೇಧಿಸಬೇಕು ಎಂದು ಪದಾಧಿಕಾರಿಗಳು ಘೋಷಣೆ ಕೂಗಿದರು.

ಸಂಘಟನೆ ಜಿಲ್ಲಾಧ್ಯಕ್ಷ ಶೇಷರಾವ ಮಾನೆ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಅವಮಾನಗೊಳಿಸಿರುವ ಎಂಇಎಸ್ ಧೋರಣೆಯನ್ನು ಹಾಗೂ ಕನ್ನಡಿಗರ ಮೇಲೆ ಮರಾಠಿಗರು ಗುಂಡಾ ವರ್ತನೆಯನ್ನು ತೋರುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಬೆಳಗಾವಿಯು ಕರ್ನಾಟಕದ ಜಿಲೆಯಾಗಿದ್ದು ಅಪ್ಪಟ ಕನ್ನಡಿಗ ರಾಯಣ್ಣನ ಪ್ರತಿಮೆಯನ್ನು ಪ್ರತಿಷ್ಟಾಪಿಸಿದಕ್ಕಾಗಿ ಎಂ.ಇ.ಎಸ್.ನ ಪುಂಡಾಟಿ ಎಷ್ಟು ಸಮಂಜಸ. ಕನ್ನಡದ ನೆಲ, ಜಲ ಹಾಗೂ ಪರಿಸರದ ವಿರುದ್ಧವಾಗಿ ಅವರ ತೋರುತ್ತಿರುವ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವ ಅವರ ಗುಂಡಾ ವರ್ತನೆ ಖಂಡನಾರ್ಹ ಎಂದರು.

ಕರ್ನಾಟಕ ನವನಿರ್ಮಾಣ ವೇದಿಕೆ ಜಿಲ್ಲಾ ಗೌರವಾಧ್ಯಕ್ಷ ಎಂ.ಎಂ. ಖಲಾಸಿ ಮಾತನಾಡಿ, ಕನ್ನಡ ವಿರೋಧಿ ನೀತಿ ಅನುಸರಿಸುತ್ತಿರುವ, ಕನ್ನಡಿಗರಿಗೆ ಸದಾ ತೊಂದರೆ ನೀಡುತ್ತಿರುವ ಎಂಇಎಸ್ ಸಂಘಟನೆಯನ್ನು ಕೂಡಲೇ ಸರ್ಕಾರ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಕೆ.ಕೆ. ಬನ್ನಟ್ಟಿ, ಸಿದ್ದು ಸಿಂಧೆ, ವಸಂತರಾವ ಕುಲಕರ್ಣಿ, ಥಾವರು ನಾಯಕ, ಭೀಮು ಲಮಾಣಿ, ಕೃಷ್ಣಾಜಿ ಕುಲಕರ್ಣಿ, ಸದಾಶಿವ ಬರಟಗಿ, ಶಿವನಗೌಡ ಪಾಟೀಲ, ಹಣಮಂತ ಲಕ್ಷಾನಟ್ಟಿ, ಮಹಮ್ಮದ ಕಬಾಡೆ, ಯಲ್ಲಪ್ಪ ಮಾದರ, ಸಂತೋಷ ಕವಲಗಿ, ಬಾಸು ರಾಠೋಡ, ಸಂಗಪ್ಪ ಮನವಡ್ಡರ, ಬಾಬು ಲಮಾಣಿ, ಜೆ.ಎಸ್.ಪಾಟೀಲ ಪಾಲ್ಗೊಂಡಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.