ಸದಾಶಿವ ಆಯೋಗ ವರದಿ ಜಾರಿಗೆ ಮನವಿ

0

Gummata Nagari ; Bijapur News

ಬಸವನಬಾಗೇವಾಡಿ: ನ್ಯಾಯಮೂರ್ತಿ ಎ ಜೆ ಸದಾಶಿವ ಅಯೋಗದ ವರದಿ ಜಾರಿಗೂಳಿಸಬೇಕು ಎಂದು ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ಮಾದಿಗ ಸಮಾಜದವರು ಹೂವಿನಹಿಪ್ಪರಗಿ ಉಪತಹಶೀಲ್ದಾರ ಜಿ ಟಿ ನಾಯಕ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಸುಮಾರು 20 ವರ್ಷಗಳಿಂದ ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೂಳಿಸುವ ಸಂಭಂಧವಾಗಿ ಅನೇಕ ಸಲ ಮನವಿ ಪತ್ರಗಳನ್ನು ಸಲ್ಲಿಸುತ್ತಾ ಮತ್ತು ಹೋರಾಟಗಳನ್ನು ಮಾಡುತ್ತಾ ಬಂದಿದ್ದು, ಕಾರಣ ಜನಸಂಖ್ಯೆಯ ವರದಿಗಳಿನುಸಾರವಾಗಿ ಒಳಮಿಸಲಾತಿಯನ್ನು ಜಾರಿಗೂಳಿಸುವಂತಾಗಬೇಕು ಪರಿಶಿಷ್ಠ ಜಾತಿಯಲ್ಲಿನ ಒಳಮಿಸಲಾತಿಯನ್ನು ಕಲ್ಪಿಸಲು ಆಯಾ ರಾಜ್ಯಗಳಿಗೆ ಅಧಿಕಾರವಿದೆ ಎಂದು ಸುಪ್ರಿಂಕೂರ್ಟ ಅಭಿಪ್ರಾಯಪಟ್ಟಿದ್ದು ಅದರಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ವರದಿ ನೀಡಬೇಕೆಂದು ಕೇಳಿಕೂಳ್ಳುತ್ತೆವೆ, ಬಿಜೆಪಿ ಸರ್ಕಾರ ಇದ್ದಾಗಲೇ ಸದಾಶಿವ ಆಯೋಗ ರಚಿಸಲಾಗಿದೆ, ಈಗ ನಡೆಯುತ್ತಿರುವ ಅಧಿವೇಶನದಲ್ಲಿ ಈ ವಿಷಯವಾಗಿ ಚರ್ಚಿಸಿ ಕೇಂದ್ರಕ್ಕೆ ಸೂಕ್ತ ವರದಿಯನ್ನು ಕಳಿಸಿಕೂಟ್ಟು ಅಯೋಗವು ಜಾರಿಗೂಳಿಸಬೇಕು ಎಂದು ಮಾದಿಗ ಸಮಾಜದ ಮುಖಂಡರು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂಧರ್ಭದಲ್ಲಿ ವೆಂಕಟೇಶ ದೊಡಮನಿ, ರಾಜು ಪೂಜಾರಿ, ಪ್ರಕಾಶ ದೊಡಮನಿ, ಉಮೇಶ ನಡುವಿನಮನಿ, ಮಂಜುನಾಥ ಬುದ್ನಿ, ಮುತ್ತು ಮಾದರ, ಶಶಿಧರ ಗಿರಿನಿವಾಸ, ಸಿದ್ದು ಹರಿಜನ, ಪ್ರಭು ಪಡಸಾಲಿ, ಮುತ್ತು ಮಾದರ, ಸುಭಾಸ ಮಾದರ, ಬಾಬು ಮಾದರ, ಶಿವರಾಜ ದೊಡಮನಿ, ಕುಮಾರ ಸಂಕನಾಳ ಸೇರಿದಂತೆ ಇತರರು ಇದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.