ಜಾಗೃತಿ ವಹಿಸಲು ಮನವಿ

ಪ್ರವಾಹ ಪೀಡಿತ ಪ್ರದೇಶಕ್ಕೆ ಡಿಸಿ ಭೇಟಿ, ಪರಿಶೀಲನೆ

0

Gummata Nagari : Bijapur News

ದೇವಣಗಾಂವ : ಪ್ರವಾಹ ಪೀಡಿತ ತಾರಾಪುರ, ಬ್ಯಾಡಗಿಹಾಳ, ದೇವಣಗಾಂವ ಸಮೀಪದ ಸೊನ್ನ ಬ್ಯಾರೇಜ್ ಗೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದು ಸೊನ್ನ ಬ್ಯಾರೇಜ್‌ನಲ್ಲಿ 6ಲಕ್ಷ 30 ಸಾವೊರ ಕ್ಯೂಸೆಕ್ಸ ನೀರು ಹರಿಯುತ್ತಿದೆ ಇನ್ನೂ 2-3 ದಿನದಲ್ಲಿ ನೀರಿನ ಪ್ರಮಾಣ ಕಡಿಮೆ ಆಗುವ ಸಾಧ್ಯೆತೆ ಇದೆ ಆದ್ದರಿಂದ ಸೊನ್ನ ಬ್ಯಾರೇಜ್ ನಿಂದ ಮುಳುಗಡೆಯಗುವ ತಾರಾಪೂರ, ತಾವರಖೇಡ, ಬ್ಯಾಡಗಿಹಾಳ ಗ್ರಾಮಸ್ಥರು ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು, ಕಾಳಜಿ ಕೇಂದ್ರಕ್ಕೆ, ಸುರಕ್ಷಿತ ಸ್ಥಳಕ್ಕೆ ತೆರಳಬೇಕು, ಜಾಗೃತದಿಂದ ಇರಬೇಕೆಂದು ಮನವಿ ಮಾಡಿಕೊಂಡರು. ಅಲ್ಲದೇ ಪ್ರವಾಹ ಇಳಿದ ಒಂದು ತಿಂಗಳ ಒಳಗಗಿ ಈ ಮೂರು ಗ್ರಾಮಗಳ ಕುಟುಂಬಗಳ ಸಮಸ್ಯೆಗೆ ಪರಿಹಾರ ಕಂಡುಕೊಂಡು ಖಂಡಿತವಾಗಿಯೂ ಒಂದು ತಿಂಗಳಲ್ಲಿ ಸ್ಥಳಾಂತರ ಮಾಡಿಸುವದಗಿ ಭರವಸೆ ನೀಡಿದರು.

ಜಿಪಂ ಸಿಓ ಗೊವಿಂದ ರೆಡ್ಡಿ, ಎಸ್ಪಿ ಅನುಪಮ ಅಗರವಾಲ್, ಎಸಿ ರಾಹುಲ್ ಸಿಂಧೆ, ತಹಶಿಲ್ದಾರ ಸಂಜೀವಕುಮಾರ ದಾಸರ, ಉಪತಶಿಲ್ದಾರ ಕಾಶಿನಾಥ ಅವರಾದಿ, ಗ್ರಾಮಲೆಕ್ಕಾಧಿಕಾರಿ ಎಸ್.ಸಿ.ಕಾಂಬಳೆ ಇದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.