ಕೃಷಿ ಮಸೂದೆ ರೈತ ಪರ ನಿರ್ಧಾರ

ಬಿಜಾಪುರದಲ್ಲಿ ಬಿಜೆಪಿಯಿಂದ ರೈತ ಜಾಗೃತಿ ಅಭಿಯಾನಕ್ಕೆ ಚಾಲನೆ

0

Gummata Nagari : Bijapur News

ಬಿಜಾಪುರ : ಬಿಜೆಪಿ ರೈತ ಮೋರ್ಚಾ ವತಿಯಿಂದ ನಗರದ ಮಹೇಶ್ವರಿ ಮಂಗಲ ಕಾರ್ಯಾಲದಲ್ಲಿ ರೈತ ಜಾಗೃತಿ ಅಭಿಯಾನಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ, ಹಲವು ಸಂಕಷ್ಟಗಳ ಮಧ್ಯೆ ಸಂಕಷ್ಟಗಳ ಜೊತೆ ಬಿಜೆಪಿ ಸರ್ಕಾರ ಹಲವಾರು ಸಾಧನೆ ಮಾಡಿದೆ. ಕೇಂದ್ರ & ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಕೃಷಿ ಸಂಬಂಧಿತ ಮಸೂದೆಗಳು ರೈತ ಪರ ನಿರ್ಧಾರಗಳಾಗಿವೆ ಎಂದು ಹೇಳಿದರು.

ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಮಾತನಾಡಿ, ಕೃಷಿ ಕ್ಷೇತ್ರದ ಸುಧಾರಣೆಯ ದಿಸೆಯಲ್ಲಿ ಕೇಂದ್ರ ಸರ್ಕಾರ ಅಂಗೀಕಾರ ಪಡೆದ ಮೂರು ಮಸೂದೆಗಳಿಂದ ರೈತರಿಗೆ ಸಿಗುವ ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ) ನಿಲ್ಲುವುದಿಲ್ಲ. ಈ ಮಸೂದೆಯು ರೈತರ ಪರವಾಗಿದೆ, ವಿರೋಧ ಪಕ್ಷಗಳು ರೈತರನ್ನು ದಿಕ್ಕು ತಪ್ಪಿಸುವ ಕೆಲಸದಲ್ಲಿ ನಿರತವಾಗಿದೆ, ಈ ಮಸೂದೆಗಳ ಅನ್ವಯ ರೈತರು ಎಪಿಎಂಸಿ ಮಂಡಿಯ ಹೊರತಾಗಿ ಕಡಿಮೆ ಸುಂಕ, ಹೆಚ್ಚುವರಿ ಸುಂಕ, ದಲ್ಲಾಳಿಗಳಿಗೆ ಕಮಿಷನ್ ನೀಡದೇಯೆ ತಮಗೆ ಬೇಕಾದವರಿಗೆ ಉತ್ಪನ್ನ ಮಾರಾಟ ಮಾಡಬಹುದು ಮತ್ತು ಆನ್‌ಲೈನ್ ಮೂಲಕವೂ ಮಾರಬಹುದಾಗಿದೆ, ಬಿಜೆಪಿಯಿಂದ ಗ್ರಾಮ ಮಟ್ಟದ ಸಭೆಗಳನ್ನು ಅಯೋಜಿಸಿ ಕೇಂದ್ರ, ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಮಸೂದೆಗಳ ನೈಜತೆ ಬಗ್ಗೆ ರೈತರಿಗೆ ತಿಳಿಸಲಾಗುವುದು ಎಂದು ಹೇಳಿದರು.

ಶಿವಪ್ರಸಾದ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿದರು. ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಪರಿಷತ್ ಸದಸ್ಯ ಅರುಣ ಶಹಾಪೂರ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ ಕವಟಗಿ, ವಿಜುಗೌಡ ಪಾಟೀಲ, ಜಿಲ್ಲಾ ಪ್ರ.ಕಾರ್ಯದರ್ಶಿ ಶಿವರುದ್ರ ಬಾಗಲಕೋಟ, ಬಸವರಾಜ ಬಿರಾದಾರ, ಮಲ್ಲಿಕಾರ್ಜುನ ಜೋಗೂರ, ಪ್ರಭುಗೌಡ ದೇಸಾಯಿ, ಲೋಕೇಶಗೌಡ, ಸಿದ್ದು ಬುಳ್ಳಾ, ರಮೇಶ ಶಾಪೇಟಿ, ಸಿದ್ದು ಪಾಟೀಲ, ಗಿರಿಶ ಪಾಟೀಲ, ಸುರೇಶ ಕುಲಕರ್ಣಿ ಇದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.