ಹೃದಯ ಆರೋಗ್ಯವಾಗಿರಿಸಿಕೊಳ್ಳಲು ಸಲಹೆ

0

Gummata Nagari : Bijapur News

ಬಿಜಾಪುರ : ಒತ್ತಡದಿಂದ ಕೂಡಿದ ದಿನಗಳಲ್ಲಿ ಹೃದಯವನ್ನು ಆರೋಗ್ಯವಾಗಿರಿಸಿಕೊಳ್ಳುವುದು ಅತ್ಯಂತ ಮಹತ್ವದ ಜವಾಬ್ದಾರಿಯಾಗಿದೆ ಎಂದು ಎಎಸ್‌ಪಿ ಮಹಾವಿದ್ಯಾಲಯದ ಪ್ರಾಚಾರ್ಯ ವಿ.ಎಸ್.ಬಗಲಿ ಹೇಳಿದರು.

ನಗರದ ಎಎಸ್‌ಪಿ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎನ್‌ಸಿಡಿ ಘಟಕ ಹಾಗೂ ಭಾರತೀಯ ರೆಡಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಹೃದಯ ದಿನಾಚರಣೆ ಹಾಗೂ ಹೃದಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದಿನ ಒತ್ತಡಭರಿತ ದಿನಗಳಲ್ಲಿ ಅನೇಕರು ಖಿನ್ನತೆ, ಹೃದಯ ಸಮಸ್ಯೆಯಿಂದ ಬಳಲುವಂತಾಗಿದೆ, ಅತಿಯಾದ ಚಿಂತೆ, ಒತ್ತಡದಿಂದ ಕೂಡಿದ ಜೀವನಶೈಲಿ, ಆಹಾರ ಪದ್ಧತಿಯಲ್ಲಿ ಶಿಸ್ತು ಇಲ್ಲದಿರುವುದು ಹೀಗೆ ನಾನಾ ಕಾರಣಗಳಿಂದಾಗಿ ಹೃದಯ ರೋಗ ಸಮಸ್ಯೆ ಅತಿಯಾಗುತ್ತಿದೆ, ಈ ಹಿನ್ನೆಲೆಯಲ್ಲಿ ಒತ್ತಡ ದಿಂದ ದೂರವಿರಬೇಕು, ಮಾನಸಿಕವಾಗಿ ನೆಮ್ಮದಿಯಾಗಿರಬೇಕು, ವ್ಯಾಯಾಮ, ಯೋಗ, ಶಿಸ್ತುಬದ್ಧವಾದ ಆಹಾರ ಪದ್ಧತಿ ಮೈಗೂಡಿಸಿಕೊಂಡರೆ ಎಲ್ಲ ರೋಗಗಳಿಂದಲೂ ದೂರವಿರಬಹುದಾಗಿದೆ ಎಂದರು.

ಕಾರ್ಯಕ್ರಮದ ನಂತರ ಡಾ.ಬಿದರಿಯವರ ಅಶ್ವಿನಿ ಆಸ್ಪತ್ರೆಯಲ್ಲಿ ಉಚಿತವಾಗಿ ಹೃದಯ ರೋಗ ತಪಾಸಣೆ ನಡೆಯಿತು. ಹೃದಯರೋಗ ತಜ್ಞ ಡಾ.ಗೌತಮ ವಗ್ಗರ ಹಲವು ರೋಗಿಗಳು ಹೃದಯ ಪರೀಕ್ಷೆ ನಡೆಸಿದರು.

ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ಹಾಗೂ ಖ್ಯಾತ ವೈದ್ಯ ಡಾ.ಎಲ್.ಎಚ್. ಬಿದರಿ ಮಾತನಾಡಿದರು. ರೆಡ್‌ಕ್ರಾಸ್ ಉಪಾಧ್ಯಕ್ಷ ಪ್ರೊ.ಶರದ್ ರೂಡಗಿ, ಕಾರ್ಯದರ್ಶಿ ಎಸ್.ಜಿ.ಮುರನಾಳ, ಕೋಶಾಧ್ಯಕ್ಷ ಸೋಮನಾಥ ಜೇವೂರ ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.