ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳ ಸಾಧನೆ

ರಾಣಿ ಚನ್ನಮ್ಮ ವಿವಿಯ ಡಬಲ್ ರ‍್ಯಾಂಕ್ ತನ್ನದಾಗಿಸಿಕೊಂಡ ಸಂಗಮೇಶ್ವರ ಶಿಕ್ಷಣ ಸಂಸ್ಥೆ"

0

Gummata nagari : vijaypur

ಚಡಚಣ: ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ನಡೆಸಿದ ಸಮಾಜ ಕಾರ್ಯ ಪದವಿ ವಿಭಾಗದ ಪರೀಕ್ಷೆಯಲ್ಲಿ ಪಟ್ಟಣದ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಕಲಾ, ವಾಣಿಜ್ಯ, ಬಿ.ಸಿ.ಎ, ಬಿ.ಎಸ್.ಡಬ್ಲ್ಯೂ ಮತ್ತು ಸ್ನಾತಕೋತ್ತರ (ಎಂ.ಕಾಮ್, ಎಮ್. ಎಸ್.ಡಬ್ಲ್ಯೂ) ಮಹಾವಿದ್ಯಾಲಯದ ಸಮಾಜ ಕಾರ್ಯ ಪದವಿ(BSW) ವಿಭಾಗದ ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ವಿವಿಯ ಪ್ರಥಮ ಹಾಗೂ ದ್ವಿತೀಯ ರ‍್ಯಾಂಕ್ ಪಡೆಯುವ ಮೂಲಕ ಡಬಲ್ ರ‍್ಯಾಂಕ್ ಮುಡಿಗೇರಿಸಿಕೊಂಡಿದೆ…

ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳ ಸಾಧನೆ

ಮಹಾವಿದ್ಯಾಲಯದ ಸಮಾಜ ಕಾರ್ಯ ಪದವಿ ವಿಭಾಗದ ವಿದ್ಯಾರ್ಥಿನೀಯರಾದ ಪ್ರಥಮ ರ‍್ಯಾಂಕ್ ಕುಮಾರಿ ಸ್ನೇಹಾ ಸಿಂಹಾಸನ ಹಾಗೂ ದ್ವಿತೀಯ ರ‍್ಯಾಂಕ್ ಕುಮಾರಿ ಪ್ರಿಯಾಂಕಾ ಮಲ್ಲಿಕಾರ್ಜುನ. ಧೋತ್ರೆ ಇವರು ವಿಶ್ವ ವಿದ್ಯಾಲಯಕ್ಕೆ ಪ್ರಥಮ ಹಾಗೂ ದ್ವಿತೀಯ ರ‍್ಯಾಂಕ್ ಪಡೆದುಕೊಂಡಿದ್ದಾರೆ…

ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳ ಸಾಧನೆ

ಇವರ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಚಾರ್ಯ ಡಾ. ಎಸ್. ಎಸ್ ಚೋರಗಿ, ವಿಭಾಗದ ಮುಖ್ಯಸ್ಥ ಪ್ರೋ. ಐ.ಎ ರೋಣದ, ಎಮ್.ಎಸ್.ಡಬ್ಲ್ಯೂ ಮುಖ್ಯಸ್ಥ ಪ್ರೋ. ಎಸ್.ಬಿ ಶಿರೋಳ, ಹಾಗೂ ವಿಭಾಗದ ಪ್ರಾಧ್ಯಾಪಕರಾದ ಪ್ರೋ. ಎನ್.ಎಮ್ ಬಿರಾದಾರ, ಪ್ರೋ. ಆರ್.ಎನ್ ನಡಿಗೇರಿ ಇವರು ಹರ್ಷ ವ್ಯಕ್ತಪಡಿಸಿ, ಸಂಸ್ಥೆಯ ಇತಿಹಾಸದಲ್ಲೆ ಪ್ರಥಮ ಬಾರಿಗೆ ವಿದ್ಯಾರ್ಥಿಗಳು ಡಬಲ್ ರ‍್ಯಾಂಕ್ ಪಡೆದು ಸಾಧನೆಗೈದಿದ್ದಾರೆ ಎಂದು ಶ್ಲಾಘಿಸಿದರು…

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.