ವಾಹನ ಡಿಕ್ಕಿ: ಕುರಿಗಾಯಿ ಸೇರಿ 10 ಕುರಿ ಸಾವು

0

Gummata Nagari : Bijapur News

ಬಸವನಬಾಗೇವಾಡಿ : ಪಟ್ಟಣದ ಮುದ್ದೇಬಿಹಾಳ ರಸ್ತೆಯ ಬಸ್ ಡಿಪೋ ಹತ್ತಿರ ಬೊಲೆರೋ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕುರಿಗಾಯಿ ಮೃತಪಟ್ಟು, ಹತ್ತು ಕುರಿಗಳು ಸಾವನ್ನಪ್ಪಿದ ಘಟನೆ ನಡೆದಿದೆ.

ಗಭೀರ ಗಾಯಗೊಂಡಿದ್ದ ಬಳ್ಳಾವೂರಿನ ಕುರಿಗಾಯಿ ಚರಲಿಂಗ ಮಡಿವಾಳಪ್ಪ ಗುರುವಿನ (16) ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾನೆ. ಈತನ ಸಹೋದರ ನಿಂಗರಾಜ ಮಡಿವಾಳಪ್ಪಾ ಗುರುವಿನ (21) ಗಾಯಗೊಂಡಿದ್ದು ಚಿಕಿತ್ಸೆಗಾಗಿ ಬಿಜಾಪುರ ಆಸ್ಪತ್ರೆಗೆ ಕಳುಹಿಸಲಾಗಿದೆ.

ಕುರಿಗಾಯಿಗಳು ಕುರಿ ಮೇಯಿಸಿಕೊಂಡು ಬಸವನಬಾಗೇವಾಡಿಗೆ ಹೊರಟಿದ್ದರು ಬಸವನಬಾಗೇವಾಡಿಗೆ ಬರುತ್ತಿದ್ದ ಬೊಲೆರೋ ವಾಹನವು ಕುರಿಗಾಯಿಗಳಿಗೆ ಹಾಗೂ ಕುರಿಗಳಿಗೆ ಡಿಕ್ಕಿ ಹೊಡೆದಿದೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶಾಂತವೀರ ಸಿಪಿಐ ಸೋಮಶೇಖರ ಜುಟ್ಟಲ, ಪಿಎಸ್‌ಐ ಚಂದ್ರಶೇಖರ ಹೆರಕಲ್ಲ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಬಸವನಬಾಗೇವಾಡಿ ಪಟ್ಟಣದ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.