20 ಕಡೆ ಸಿಸಿ ಕ್ಯಾಮೆರಾ ಅಳವಡಿಕೆ

0

Gummata Nagari : Bijapur News

ದೇವರಹಿಪ್ಪರಗಿ : ತಾಲೂಕು ಕೇಂದ್ರವಾಗಿರುವ ದೇವರಹಿಪ್ಪರಗಿ ಪಟ್ಟಣದ ಸುರಕ್ಷತೆ ಹಾಗೂ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡಲು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಇಲ್ಲಿನ ಸ್ಥಳಿಯ ಆಡಳಿತ ಮೂರು ಲಕ್ಷ ರೂ. ವೆಚ್ಚದಲ್ಲಿ ಸುಮಾರು 20 ಕಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ, ವಿನೂತನ ಕಾರ್ಯಕ್ಕೆ ನಾಂದಿ ಹಾಡಿದ್ದಾರೆ.

ಪಟ್ಟಣದಲ್ಲಿ 20 ಕಡೆ ಸಿಸಿ ಕ್ಯಾಮೆರಾ:

ಪಟ್ಟಣದ ಮದ್ಯ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ದಿನನಿತ್ಯ ನಡೆಯುವ ಚಟುವಟಿಕೆಗಳನ್ನು ಕುಳಿತಲ್ಲಿಯೇ ಗಮನಿಸಿ, ನಿರ್ವಹಿಸಲು ಪೊಲೀಸ್ ಇಲಾಖೆ ಮುಂದಾಗಿದ್ದು, ಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಠಾಣೆಯ ಪಿಎಸೈ ರವಿ ಯಡಣ್ಣವರ ಅವರ ಆಶಯದಂತೆ ಪಪಂ ಮುಖ್ಯಾಧಿಕಾರಿ ಎಲ್ ಡಿ ಮುಲ್ಲಾ ಸುಮಾರು ಮೂರು ಲಕ್ಷರೂ. ವೆಚ್ಚದಲ್ಲಿ ಪಟ್ಟಣದ ಸುಮಾರು 20 ಕಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ದಿನನಿತ್ಯದ ಚಟುವಟಿಕೆಗಳನ್ನು ಗಮನಿಸುತ್ತಿದ್ದಾರೆ. ಬಸ್ ನಿಲ್ದಾಣ, ಮೊಹರೆ ವೃತ್ತ, ಡಾ. ಅಂಬೇಡ್ಕರ ವೃತ್ತ, ಟಿಪ್ಪುಸುಲ್ತಾನ ವೃತ್ತ, ಬಝಾರ ಕರಿದೇವರ ದೇವಸ್ಥಾನದ ಹತ್ತಿರ ಸೇರಿದಂತೆ 20 ಕಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ತಾಲೂಕು ಕೇಂದ್ರವಾಗಿರುವ ದೇವರಹಿಪ್ಪರಗಿ ಪಟ್ಟಣ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಇಡೀ ಪಟ್ಟಣದ ತುಂಬೆಲ್ಲ ಸಿಸಿ ರಸ್ತೆಗಳನ್ನು ನಿರ್ಮಿಸಲಾಗಿದೆ. ಪ್ರಮುಖ ರಸ್ತೆಗಳ ಮೇಲೆ ವಿದ್ಯುತ್ ದೀಪದ ವ್ಯವಸ್ಥೆಯಾಗುತ್ತಿದ್ದು, ನೂತನ ಕಚೇರಿಗಳು ಸ್ಥಾಪನೆಯಾಗಲಿವೆ.ಸ್ಥಳಿಯ ಆಡಳಿತದ ಮೂಲಕ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ಅಕ್ರಮ ಚಟುವಟಿಕೆಗಳನ್ನು ತಡೆಯಲು ಸಹಕಾರಿಯಾಗಲಿದ್ದು, ಒಂದು ವರ್ಷದಲ್ಲಿ ಪಟ್ಟಣದ ಇಡೀ ಚಿತ್ರಣವೇ ಬದಲಾಗಲಿದೆ.                                                                                                                                                                                -ಸೋಮನಗೌಡ ಪಾಟೀಲ ಸಾಸನೂರ ಶಾಸಕ ದೇವರಹಿಪ್ಪರಗಿ ಮತಕ್ಷೇತ್ರ.

ಅಕ್ರಮ ಚಟುವಟಿಕೆಗಳನ್ನು ಮಟ್ಟ ಹಾಕಲು ಸಹಕಾರಿ:

ಆಧುನಿಕತೆ ಬೆಳೆದಂತೆ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಪಟ್ಟಣದಲ್ಲಿ ಯಾವುದೇ ರೀತಿಯ ಚಟುವಟಿಕೆಗಳು ನಡೆದರೂ ಪೊಲೀಸ್ ಇಲಾಖೆಗೆ ಮಾಹಿತಿ ಹೋಗುತ್ತದೆ. ಕಳ್ಳತನ, ದರೋಡೆ, ಅಕ್ರಮ ಸಾಗಾಣೆ, ಟ್ರಾಫೀಕ್ ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿಯಾಗಿದೆ. ಜಿಲ್ಲೆಯಲ್ಲಿಯೇ ಇದೊಂದು ವಿನೂತನ ಯೊಜನೆಯಾಗಿದ್ದು, ಪಟ್ಟಣದ ಪ್ರಗತಿಗೆ ಸಹಕಾರವಾಗಲಿದೆ. ಆಡಳಿತ ವ್ಯವಸ್ಥೆ ಸುಧಾರಿಸಲು ಉಪಯುಕ್ತವಾಗಲಿದೆ ಎಂಬುದು ಅಧಿಕಾರಿಗಳ ಅನಿಸಿಕೆಯಾಗಿದೆ.

ಪಟ್ಟಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಎಸ್ಪಿ ಮೆಚ್ಚುಗೆ:

ಇತ್ತಿಚೆಗೆ ಪೊಲೀಸ್ ಠಾಣೆಗೆ ಭೇಟಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ್ ಸಿಸಿ ಕ್ಯಾಮೆರಾಗಳ ಕಾರ್ಯ ಪರಿಶೀಲಿಸಿ, ಇಡೀ ಜಿಲ್ಲೆಯಲ್ಲಿಯೇ ಮಾದರಿಯಾಗಿದ್ದು ಪಟ್ಟಣದ ಪ್ರತಿಯೊಂದು ಬಡಾವಣೆಯಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಸಾರ್ವಜನಿಕರ ಸಂರಕ್ಷಣೆ ಜೊತೆಗೆ ಅಪರಾಧ ಪ್ರಕರಣಗಳ ಮಟ್ಟ ಹಾಕುವಲ್ಲಿ ಸಹಕಾರಿಯಾಗಲಿವೆ.ಇಲ್ಲಿನ ಸ್ಥಳಿಯ ಆಡಳಿರ ಪೊಲೀಸ್ ಸಿಬ್ಬಂಧಿ ಒಳ್ಳೆಯ ಕಾರ್ಯ ಮಾಡಿದ್ದಾರೆ. ಇದಕ್ಕೆಲ್ಲ ನಮ್ಮ ಇಲಾಖೆಯ ಸಹಕಾರವಿದೆ ಎಂದಿದ್ದಾರೆ.

ಪಟ್ಟಣದ ಪ್ರಗತಿಗಾಗಿ ಶಾಸಕರ ಮಾರ್ಗದರ್ಶನ ಹಾಗೂ ಎಲ್ಲ ಸದಸ್ಯರ ಸಹಕಾರದಿಂದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ಪ್ರತಿಯೊಂದು ಚಟುವಟಿಕೆಗಳ ಮೇಲೆ ನಿಗಾ ಇಡಬಹುದಾಗಿದೆ. ಪೊಲೀಸ್ ಇಲಾಖೆ ಇದರ ಮೇಲೆ ನಿಗಾ ಇಡಲಿದ್ದು, ಪ್ರತಿ ಚಟುವಟಿಕೆಗಳು ದಾಖಲಾಗಲಿವೆ. ಸಾರ್ವಜನಿಕರು ಸಹಕರಿಸಬೇಕು.                                                                                                                                                                                        -ಎಲ್ ಡಿ ಮುಲ್ಲಾ, ಮುಖ್ಯಾಧಿಕಾರಿ ಪಪಂ ದೇವರಹಿಪ್ಪರಗಿ
Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.