ಎರಡು ಚಿರತೆ ಮರಿ ಪತ್ತೆ

0

Gummata Nagari : Bijapur News

ವಿಜಯಪುರ : ಕಬ್ಬಿನ  ಜಮೀನಿನಲ್ಲಿ ಎರಡು ಚಿರತೆ ಮರಿಗಳು ಪತ್ತೆಯಾಗಿವೆ.

ಪ್ರಶಾಂತ ದೇಸಾಯಿ ಎಂಬುವವರಿಗೆ ಸೇರಿದ ಬಬಲೇಶ್ವರ ತಾಲ್ಲೂಕಿನ ಜೈನಾಪುರ ಗ್ರಾಮದ ಬಳಿಯ ಕಬ್ಬಿನ ಜಮೀನೀನಲ್ಲಿ ಎರಡು ಚಿರತೆ ಮರಿಗಳು ಪತ್ತೆಯಾಗಿವೆ.

ಕಳೆದ ಕೆಲವು ತಿಂಗಳುಗಳ ಹಿಂದೆ ಇಲ್ಲಿ ಚಿರತೆಗಳು ಪ್ರತ್ಯಕ್ಷವಾಗಿದ್ದವು, ಮೇ ತಿಂಗಳಲ್ಲಿ ಇದೇ ಭಾಗದಲ್ಲಿ ಗಂಡು ಚಿರತೆ ಸೆರೆಯಾಗಿತ್ತು. ಅರಣ್ಯ‌ ಇಲಾಖೆ ಇರಿಸಿದ್ದ ಬೋನಿಗೆ  ಗಂಡು ಚಿರತೆ  ಬಿದ್ದಿತ್ತು, ಅದರ ಸಂಗಾತಿ‌ ಮರಿಗಳು ಎಂಬ ಸಂಶಯ ವ್ಯಕ್ತವಾಗಿದೆ. ಇನ್ನೂ  ತಾಯಿ ಚಿರತೆ ಪತ್ತೆಯಾಗಿಲ್ಲಾ.

ಎರಡೂ ಚಿರತೆ ಮರಿಗಳನ್ನು ರಕ್ಷಿಸಿದ ಪ್ರಶಾಂತ ದೇಸಾಯಿ ಮನೆಗೆ ಚಿರತೆ ಮರಿಗಳನ್ನು ತೆಗೆದುಕೊಂಡು ಹೋಗಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಎರಡು ಚಿರತೆ ಮರಿಗಳನ್ನು ಅರಣ್ಯ ಇಲಾಖೆ ವಾಚರ್ ಪ್ರಕಾಶ ಹಾಗೂ ಇತರ ಸಿಬ್ಬಂದಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ತಾಯಿ ಚಿರತೆ ಸೆರೆ ಹಿಡಿಯಲು ಅರಣ್ಯಧಿಕಾರಿಗಳ‌ ಚಿಂತನೆ ನಡೆಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.