ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ 175ಕಿ.ಮೀ ಹೊಸ ಲೈನ್ ನಿರ್ಮಾಣ: ಎಂ.ಬಿ.ಪಾಟೀಲ್

0

Gummata Nagari : Bijapur News

ವಿಜಯಪುರ : ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಹೆಸ್ಕಾಂ ಬಬಲೇಶ್ವರ ಉಪವಿಭಾಗ ವ್ಯಾಪ್ತಿಯಲ್ಲಿ, ಸಮರ್ಪಕ ವಿದ್ಯುತ್ ಪೂರೈಕೆ ನಿಟ್ಟಿನಲ್ಲಿ 7 ಕೋಟಿ 33 ಲಕ್ಷ ರೂ. ವೆಚ್ಚದಲ್ಲಿ 174.34 ಕಿ.ಮೀ ಹೊಸ 11ಕೆ.ವಿ ಲೈನ್ ನಿರ್ಮಿಸುವ 28 ಕಾಮಗಾರಿಗಳನ್ನು ಆರಂಭಿಸಲಾಗಿದೆ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು ಬಬಲೇಶ್ವರ ವಿಧಾನಸಭಾ ಕ್ಷೇತ್ರವು ಸಂಪೂರ್ಣ ನೀರಾವರಿಗೆ ಒಳಪಟ್ಟಿದ್ದು, ನೀರಿನ ಬಳಕೆಗಾಗಿ ವಿದ್ಯುತ್ ಅವಲಂಬನೆ ರೈತರಿಗೆ ಅನಿವಾರ್ಯವಾಗಿದೆ. ಕೇಲವು ಫೀಡರ್‌ಗಳು ಓವರ್ ಲೋಡ್ ಕಾರಣದಿಂದಾಗಿ ಮತ್ತು ವಿದ್ಯುತ್ ಉತ್ಪಾದನೆ ಕೊರತೆಯ ಕಾರಣ ಸಮರ್ಪಕ ವಿದ್ಯುತ್ ಪೂರೈಕೆಯಲ್ಲಿ ತೊಂದರೆ ಉಂಟಾಗುತ್ತಿದೆ. ಇದರಿಂದ ಮೇಲಿಂದ ಮೇಲೆ ಲೈನ್ ಟ್ರಿಪ್ ಆಗುವುದು, ಲೋ ಓಲ್ಟೆಜ್‌ನಿಂದ ಪಂಪ್ ಸೆಟ್‌ಗಳಿಗೆ ತೊಂದರೆ ಆಗುತ್ತಿದ್ದು, ಆದ್ದರಿಂದ ಓವರ್ ಲೋಡ್ ಫೀಡರ್ ಭಾರ ಕಡಿಮೆ ಮಾಡುವ ಉದ್ದೇಶದಿಂದ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಬಬಲೇಶ್ವರ ಭಾಗದ ಬಬಲೇಶ್ವರ, ಮಮದಾಪುರ, ದೇವರಗೆಣ್ಣೂರ, ಶಿರಬೂರ, ತೊರವಿ, ತೊದಲಬಾಗಿ, ಬಿದರಿ, ರೋಣಿಹಾಳ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯಲ್ಲಿ ಐಪಿ ಫೀಡರ್‌ಗಳ ವ್ಯವಸ್ಥೆ ಸುಧಾರಣೆ ಕ್ರಮವಾಗಿ ಹೊಸದಾಗಿ ಫೀಡರ್‌ಗಳು ಹಾಗೂ ಲಿಂಕ್ ಲೈನ್‌ಗಳನ್ನು ನಿರ್ಮಿಸುವುದು, ಸೇರಿದಂತೆ 28 ಹೊಸ ಕಾಮಗಾರಿಗಳನ್ನು ಆರಂಭಿಸಲಾಗಿದ್ದು, ಮುಂದಿನ ಒಂದು ವರ್ಷದಲ್ಲಿ ಈ ಕಾಮಗಾರಿಗಳು ಪೂರ್ಣಗೊಳ್ಳುವುದು. ಇದರಿಂದ ಈ ಎಲ್ಲ ಫೀಡರ್‌ಗಳ ವ್ಯಾಪ್ತಿಯಲ್ಲಿ ರೈತರಿಗೆ ಯಾವುದೇ ಅಡಚಣೆಗಳಿಲ್ಲದೆ ಗುಣಮಟ್ಟದ ವಿದ್ಯುತ್ ಪೂರೈಕೆ ಒದಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಬಬಲೇಶ್ವರ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ ಓವರ್‌ಲೋಡ್ ಫೀಡರ್ ಸುಧಾರಣೆಗಾಗಿ ಬಬಲೇಶ್ವರ-ಕಾಖಂಡಕಿ 12ಕಿ.ಮೀ ಲಿಂಕ್‌ಲೈನ್ ನಿರ್ಮಿಸಲು ರೂ.48.20ಲಕ್ಷ, ಬಬಲೇಶ್ವರ-ನಿಡೋಣಿ 8.5ಕಿ.ಮೀ ಲೈನ್ ನಿರ್ಮಿಸಲು ರೂ.36.01ಲಕ್ಷ, ಬಬಲೇಶ್ವರ-ತಿಗಣಿಬಿದರಿ ಐಪಿ ಫೀಡರ್ 9ಕಿ.ಮೀ ಲೈನ್ ನಿರ್ಮಿಸಲು ರೂ.36.5ಲಕ್ಷ, ಬಬಲೇಶ್ವರ-ಹೊಕ್ಕುಂಡಿ 12ಕಿ.ಮೀ ಐಪಿ ಫೀಡರ್ ಲೈನ್ ರೂ.41.58ಲಕ್ಷ, ಬಬಲೇಶ್ವರ-ಅರ್ಜುಣಗಿ 8ಕಿ.ಮೀ ಹೊಸ ಲೈನ್ ನಿರ್ಮಿಸಲು ರೂ.33.1ಲಕ್ಷ, ಬಬಲೇಶ್ವರ-ಸಂಗಾಪುರ ಎಸ್.ಎಚ್ ಫೀಡರ್ ಒತ್ತಡ ಕಡಿಮೆ ಮಾಡಲು ಹೊಸ ಕಂಬಾಗಿ ವಿದ್ಯುತ್ ಕೇಂದ್ರದಿಂದ ರೂ.24.53 ವೆಚ್ಚದಲ್ಲಿ 6ಕಿ.ಮೀ ಲೈನ್ ನಿರ್ಮಿಸುವುದು. ಅದೇ ರೀತಿ ಕಂಬಾಗಿ-ಶೇಗುಣಶಿ 7ಕಿ.ಮೀ ಲೈನ್ ನಿರ್ಮಿಸಲು ರೂ.28.72ಲಕ್ಷ ಮತ್ತು ಇದೇ ಮಾರ್ಗದಲ್ಲಿ 8.5ಕಿ.ಮೀ ಹೊಸಲೈನ್ ನಿರ್ಮಿಸಲು 36.70ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು.

ಮಮದಾಪುರ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ, ಮಮದಾಪುರ-ಹೊಸಹಂಗರಗಿ 9ಕಿ.ಮೀ ಲಿಂಕ್ ಲೈನ್ ನಿರ್ಮಿಸಲು ರೂ.36ಲಕ್ಷ, ಮಮದಾಪುರ-ಕಾರಜೋಳ 5ಕಿ.ಮೀ ಲಿಂಕ್‌ಲೈನ್ ನಿರ್ಮಿಸಲು ರೂ.17.77ಲಕ್ಷ, ಕಾರಜೋಳ ಐಪಿ ಫೀಡರ್ ಒತ್ತಡ ಕಡಿಮೆ ಮಾಡಲು ರೋಣಿಹಾಳದಿಂದ 44.54ಲಕ್ಷ ವೆಚ್ಚದಲ್ಲಿ 8ಕಿ.ಮೀ ಹೊಸ ಲೈನ್ ನಿರ್ಮಿಸಲಾಗುವುದು. ಮಮದಾಪುರ-ಬೆಳ್ಳುಬ್ಬಿ ಫೀಡರ್ ಒತ್ತಡ ಕಡಿಮೆ ಮಾಡಲು ಶಿರಬೂರದಿಂದ 5ಕಿ.ಮೀ ರೂ.18.77ಲಕ್ಷ, ಶಿರಬೂರ-ಜೈನಾಪುರ 4.5ಕಿ.ಮೀ ಲೈನ್ ನಿರ್ಮಿಸಲು ರೂ.18ಲಕ್ಷ, ಮಮದಾಪುರ-ಕಂಬಾಗಿ ಫೀಡರ್ ಭಾರ ಕಡಿಮೆ ಮಾಡಲು 0.1ಕಿ.ಮೀ 1ಲಕ್ಷ, ಕಂಬಾಗಿ ಎನ್.ಜೆ.ವಾಯ್ ಫೀಡರ್ ಪ್ರತ್ಯೇಕ ಗೊಳೀಸಲು 0.15ಕಿ.ಮೀ ಲೈನ್ ಅಳವಡೀಸಲು 1.16ಲಕ್ಷ, ಗುಣದಾಳ ಐಪಿ ಫೀಡರ್ ಭಾರ ಕಡಿಮೆ ಮಾಡಲು ಕಂಬಾಗಿಯಿಂದ 3.45ಕಿ.ಮೀ ಹೊಸಲೈನ್ ಅಳವಡಿಸಲು 14.83ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು.

ಶಿರಬೂರ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ, ಶಿರಬೂರ-ಜಂಬಗಿ ಫೀಡರ್ ಒತ್ತಡ ಕಡಿಮೆ ಮಾಡಲು ಶಿರಬೂರನಿಂದ 7ಕಿ.ಮೀ ಡಬಲ್ ಸರ್ಕೂ್ಯಟ್ ಲೈನ್ ನಿರ್ಮಿಸಲು ರೂ.46ಲಕ್ಷ, ಶಿರಬೂರ-ಚಿಕ್ಕಗಲಗಲಿ ಡಬಲ್ ಸರ್ಕೂ್ಯಟ್ 6.9ಕಿ.ಮೀ ಲೈನ್ ನಿರ್ಮಿಸಲು ರೂ.46ಲಕ್ಷ, ಶಿರಬೂರ-ಸುತಗುಂಡಿ 3ಕಿ.ಮೀ ಲೈನ್ ನಿರ್ಮಿಸಲು ರೂ.12ಲಕ್ಷ, ಶಿರಬೂರ-ಹೊಸೂರ 4ಕಿ.ಮೀ ಲೈನ್ ನಿರ್ಮಿಸಲು ಲೈನ್ 16.37ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು.

ದೇವರಗೆಣ್ಣೂರ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ, ಕಂಬಾಗಿ-ಹಣಮಸಾಗರ 3.54ಕಿ.ಮೀ ಲೈನ್ ನಿರ್ಮಿಸಲು 14.ಲಕ್ಷ, ತೊರವಿ-ಅತಾಲಟ್ಟಿ 8.5ಕಿ.ಮೀ ಲೈನ್ ನಿರ್ಮಿಸಲು ರೂ.34.5ಲಕ್ಷ, ಕಂಬಾಗಿಯಿಂದ ಬೋಳಚಿಕ್ಕಲಕಿ ಮತ್ತು ನಂದ್ಯಾಳ ವರೆಗೆ 11ಕಿಮೀ ಡಬಲ್ ಸರ್ಕೂ್ಯಟ್ ಲೈನ್ ನಿರ್ಮಿಸಲು ರೂ.38.76ಲಕ್ಷ ಮತ್ತು ತೊದಲಬಾಗಿ ಕಾತ್ರಾಳ ಫೀಡರ್ ಒತ್ತಡ ಕಡಿಮೆ ಮಾಡಲು ಹೊಸಕಂಬಾಗಿ ಹೊಸ ವಿದ್ಯುತ್ ಕೇಂದ್ರದಿಂದ ಪಟೇಲ್ ವಸ್ತಿ, ವಾಣಿ ವಸ್ತಿ ವರೆಗೆ 20ಕಿ.ಮೀ ಲೈನ್ ನಿರ್ಮಿಸಲು ರೂ.70.56ಲಕ್ಷ ರೂ.ವೆಚ್ಚದ ಒಟ್ಟು 28 ನೂತನ ಕಾಮಗಾರಿಗಳಿಗೆ ಹೆಸ್ಕಾಂ ತಾಂತ್ರಿಕ ಅನುಮೋದನೆ ಪಡೆಯಲಾಗಿದೆ.

ಈಗಾಗಲೇ ಮೇಲಿನ ಈ ಕಾಮಗಾರಿಗಳಲ್ಲಿ ಕೆಲವು ಮುಕ್ತಾಯ ಹಂತದಲ್ಲಿದ್ದು, ಉಳಿದ ಕಾಮಗಾರಿಗಳು ಆರಂಭದ ಹಂತದಲ್ಲಿವೆ. ಈ ಎಲ್ಲ ಕಾಮಗಾರಿಗಳು ಒಂದು ವರ್ಷದಲ್ಲಿ ಪೂರ್ಣಗೊಳ್ಳುವುದರಿಂದ ಬಬಲೇಶ್ವರ ಹಾಗೂ ಮಮದಾಪುರ ಹೋಬಳಿಗಳ ರೈತರಿಗೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು ಅನುಕೂಲವಾಗುತ್ತದೆ ಎಂದು ಎಂ.ಬಿ.ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.