ಸತತ ಮಳೆಗೆ ಸಂಪೂರ್ಣ ನೆಲಕಚ್ಚಿದ ಕಬ್ಬು

ಕೈ ಬಂದು ಬಾಯಿಗೆ ಬರದಂತಾದ ಎರಡರಿಂದ ಮೂರು ಲಕ್ಷ ಬೆಲೆ ಫಸಲು

0

ರಾತ್ರಿಯಾಗುತ್ತಿದ್ದಂತೆಯೇ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಮೂರು ಎಕರೆಯಲ್ಲಿ ಬೆಳೆದ ಕಬ್ಬು ಸಂಪೂರ್ಣ ನೆಲಕಚ್ಚಿದೆ.

ದೇವರಹಿಪ್ಪರಗಿ: ರಾತ್ರಿಯಾಗುತ್ತಿದ್ದಂತೆಯೇ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಮೂರು ಎಕರೆಯಲ್ಲಿ ಬೆಳೆದ ಕಬ್ಬು ಸಂಪೂರ್ಣ ನೆಲಕಚ್ಚಿದೆ.
ಪಟ್ಟಣದಲ್ಲಿ ಭಾನುವಾರ ರಾತ್ರಿ ಸುರಿದ ಮಳೆಯಿಂದ ಬಾಗೇವಾಡಿ ರಸ್ತೆಯ ಮಹಾರುದ್ರ ಕಕ್ಕಳಮೇಲಿ ಹಾಗೂ ಪ್ರಭು ಕಕ್ಕಳಮೇಲಿ ಎಂಬುವವರಿಗೆ ಸೇರಿದ ಕಬ್ಬಿನ ಗದ್ದೆ ಗಾಳಿ ಮಳೆಗೆ ಇಡಾಗಿ ಕಬ್ಬು ನೆಲಕ್ಕೆ ಒರಗಿ ಹಾಳಾಗಿದಂತಾಗಿದೆ.
ಈ ಬಗ್ಗೆ ಜಮೀನಿನ ಮಾಲೀಕ ಮಹಾರುದ್ರ ಹೇಳುವಂತೆ ರಾತ್ರಿ ಬಿದ್ದ ಮಳೆ ಮತ್ತು ಗಾಳಿಯಿಂದ ಸಹೋದರನ ಒಂದೂವರೆ ಎಕರೆ ಹಾಗೂ ನನ್ನ ಒಂದೂವರೆ ಎಕರೆ ಕಬ್ಬು ಸಂಪೂರ್ಣ ನಾಶವಾಗಿದೆ.
ಈ ಬಾರಿ ಎರಡರಿಂದ ಮೂರು ಲಕ್ಷ ಬೆಲೆಯ ಫಸಲು ಕೈ ಬಂದು ಬಾಯಿಗೆ ಬರದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಮಳೆಯಿಂದ ಆದ ಹಾನಿಯ ಕುರಿತು ಸೋಮವಾರ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮಾಹಿತಿ ನೀಡಿ ಪರಿಹಾರಕ್ಕಾಗಿ ಮನವಿ ಸಲ್ಲಿಸುತ್ತಿದ್ದೇವೆ ಎಂದರು.
ಮನವಿ ಸ್ವೀಕರಿಸಿದ ತಹಶೀಲ್ದಾರ ವೈ.ಬಿ.ನಾಗಠಾಣ, ಈ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ಹಾಗೂ ವರದಿ ಸಲ್ಲಿಸಲಾಗುವುದು. ಈಗಾಗಲೇ ಮಳೆಯಿಂದ ಕಡ್ಲೇವಾಡ ಪಿ.ಸಿ.ಎಚ್ ಗ್ರಾಮದಲ್ಲಿಯೂ ಕಬ್ಬು ಬೆಳೆ ಹಾಳಾದ ಕುರಿತು ಮಾಹಿತಿಯಿದೆ. ಕೂಡಲೇ ಮಳೆಯಿಂದ ಪಟ್ಟಣ ಸೇರಿದಂತೆ ವಿವಿಧೆಡೆ ಹಾನಿ ಸಂಭವಿಸಿದ ಕುರಿತು ಭೇಟಿ ನೀಡಿ ವರದಿ ನೀಡುವಂತೆ ಗ್ರಾಮಲೆಕ್ಕಾಧಿಕಾರಿಗಳಿಗೆ ಸೂಚಿಸಲಾಗಿದೆ . ಯಾವುದೇ ಕಾರಣಕ್ಕೂ ಎದೆಗುಂದಬೇಡಿ ಎಂದು ರೈತರಿಗೆ ಅಭಯ ನೀಡಿದರು.

 

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.