ರಸ್ತೆ ಅಪಘಾತ ಬಾಲಕ ಸಾವು

ಮುಗಿಲು ಮುಟ್ಟಿದ ತಾಯಿಯ ಆಕ್ರಂದನ

0

Gummata Nagari : Raichur News

ಮಾನ್ವಿ : ಕಪ್ಪಗಲ್ ಗ್ರಾಮದಲ್ಲಿ ಬಾಲಕ ರಸ್ತೆ ದಾಟುತ್ತಿರುವಾಗ ಯಮದೂತನಂತೆ ಬಂದ ಟಾಟಾ ಎಸಿ ವಾಹನ ಬಾಲಕನ ಮೇಲೆರಿದೆ ಇದರ ಪರಿಣಾಮ ಬಾಲಕ ಸ್ಥಳದಲ್ಲೆ ಮೃತಪಟ್ಟಿದ್ದು, ಮಗನನ್ನು ಕೆಳದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.

ಮೃತ ಬಾಲಕ ಕೃಷ್ಣ (12) ತಂದ ವೀರೇಶ ಮಾನ್ವಿ, ರಸ್ತೆ ಮೇಲೆ ಮೃತಪಟ್ಟು ಬಿದ್ದಿದ್ದ ಮಗನನ್ನು ಎತ್ತಿಕೊಂಡು ಎದೆಗಪ್ಪಿ ತಾಯಿ ರೋಧಿಸುತ್ತೀರುವ ಹೃದಯ ಕುಲುಕುವ ಘಟನೆ ಕಪಗಲ್ ರಾಜ್ಯ ಹೆದ್ದಾರಿಯಲ್ಲಿ ನಡೆಯಿತು. ಕೂಡಲೇ ಘಟನ ಸ್ಥಳಕ್ಕೆ ಆಗಮಿಸಿದ ಮಾನ್ವಿ ಪಿಎಸ್‌ಐ ಸಿದ್ರಾಮ ಬಿದರಾಣಿ ಅವರು ಮೃತ ಬಾಲಕನ ತಾಯಿಯನ್ನು ಸಮಾಧಾನ ಪಡಿಸಲು ಮುಂದಾದಗ ಬಾಲಕನ ತಾಯಿ ಪಿಎಸ್‌ಐ ಕಾಲಿಗೆ ಬಿದ್ದು ರೋಧಿಸಿದಳು ತನ್ನ ಮಗನನ್ನು ಕಳೆದುಕೊಂಡ ದುಖಃವನ್ನು ಬಿಕ್ಕಿ ಬಿಕ್ಕಿ ಅಸಹಾಯಕತೆಯಿಂದ ಹೇಳಿದಳು. ಪ್ರಕರಣ ಮಾನ್ವಿ ಪೊಲೀಸ್ ಠಾಣಾಯಲ್ಲಿ ದಾಖಲಾಗಿದೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.