ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

ತಹಸೀಲ್ದಾರ್ಗೆ ಜಾಂಬವ ಯುವ ಸೇನೆ ಮನವಿ

0

Gummata Nagari : Raichur News

ಮಾನ್ವಿ : ಪಟ್ಟಣದ ತಾಲೂಕ ಸಾರ್ವಜನಿಕ ಆಸ್ಪತ್ರೆ ರಸ್ತೆ ದುರಸ್ತಿ ಮತ್ತು 60 ಹಾಸಿಗೆಯ ತಾಯಿ ಮಕ್ಕಳ ಆಸ್ಪತ್ರೆ ಕಾಮಗಾರಿ ಪೂರ್ಣಗೊಂಡಿದ್ದು ಕೂಡಲೇ ಉದ್ಘಾಟಿಸಬೇಕು ಹಾಗೂ ಸತತ ಮಳೆಯಿಂದಾಗಿ ಭತ್ತ ಸೇರಿದಂತೆ ಇತರೆ ಬೆಳೆಗಳು ಹಾನಿಯಾಗಿದ್ದು ರೈತರಿಗೆ ಬೆಳೆ ಪರಿಹಾರ ನೀಡುವದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಾಂಬವ ಯುವ ಸೇನೆ ಜಿಲ್ಲಾಧ್ಯಕ್ಷ ಪರಶುರಾಮ ಬಾಗಲವಾಡ ನೇತೃತ್ವದಲ್ಲಿ ತಹಸೀಲ್ದಾರ್ ಶಂಶಾಲಂಗೆ ಮನವಿ ಸಲ್ಲಿಸಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಸಾರ್ವಜನಿಕ ಆಸ್ಪತ್ರೆವರೆಗಿನ ರಸ್ತೆ ತೀರ ಹದಗೆಟ್ಟಿದ್ದರಿಂದ ಈ ಮಾರ್ಗವಾಗಿ ಸಾರ್ವಜನಿಕರು ಆಸ್ಪತ್ರೆಗೆ ತೆರಳುವ ರೋಗಿಗಳು, ಗರ್ಭಿಣಿಯರು, ಮಕ್ಕಳು, ವೃದ್ಧರು ಹಾಗೂ ತುರ್ತು ಸೇವೆಯ ಆ್ಯಂಬುಲೆನ್ಸ್ ವಾಹನ, ಆಟೋಗಳು ತಗ್ಗು-ಗುಂಡಿಗಳನ್ನು ದಾಟಿ ಮಳೆ ನೀರಿನಲ್ಲಿ ಸಂಚರಿಸಲು ತೀವ್ರ ಕಷ್ಟಕರವಾಗಿದ್ದು, ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ 22 ಕೋಟಿ ರೂ. ವೆಚ್ಚದಲ್ಲಿ ಒಟ್ಟು 10 ಕಿ.ಮೀ ಆಸ್ತಿ ಡಾಂಬರೀಕರಣ ಚೀಕಲಪರ್ವಿ ಗ್ರಾಮದಿಂದ ವೆಂಕಟ ಸಾಯಿ ರೈಸ್ ಮಿಲ್ ವರೆಗೆ ಮಾಡಿದ್ದು, ಇನ್ನೂ ಉಳಿದ 2 ಕಿ.ಮ, ರಸ್ತೆ – ಆಸ್ಪತ್ರೆಯಿಂದ ಅಂಬೇಡ್ಕರ್ ವೃತ್ತದ (ಐಬಿ) ವರೆಗಿನ ರಸ್ತೆ ಕಾಮಗಾರಿಯನ್ನು ಕೈಬಿಡಲಾಗಿದೆ. ಕೂಡಲೇ ಈ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.

ಪಟ್ಟಣದಲ್ಲಿ 66 ಹಾಸಿಗೆಗಳ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಸಂಪೂರ್ಣ ಕೆಲಸ ಮುಗಿದು 6 ತಿಂಗಳಾದರೂ ಉದ್ಘಾಟನೆ ಮಾಡಿರುವುದಿಲ್ಲ. ಕಾರಣ ಸದರಿ ಆಸ್ಪತ್ರೆಯನ್ನು ಆದಷ್ಟು ಬೇಗನೆ ಪ್ರಾರಂಭಿಸಿ ತಾಲೂಕಿನ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.

ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಮತ್ತು ಕಾಲೋನಿಯ ಸಿಬ್ಬಂದಿ ಕುಟುಂಬಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಮಾನ್ವಿಯಿಂದ ಕಸ್ಬೆಕ್ಯಾಂಪ್ ವರೆಗಿನ ರಾಜ್ಯ ಹೆದ್ದಾರಿಯು ಹದಗೆಟ್ಟಿದ್ದು ಇದರಿಂದ ರಸ್ತೆ ಮೇಲೆ ತಗ್ಗು ಗುಂಡಿಗಳು ನಿರ್ಮಾಣಗೊಂಡು ಅಪಘಾತಗಳು ಸಂಭವಿಸುತ್ತಿದ್ದು ಕುಡಲೇ ರಸ್ತೆಗೆ ಡಾಂಬರೀಕರಣ ಮಾಡಬೇಕು. ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತೀರುವ ಮಳೆಯಿಂದಾಗಿ ಭತ್ತ, ಹತ್ತಿ ಬೆಳೆಗಳಯ ಹಾನಿಯಾಗಿದ್ದು ಕೂಡಲೇ ಸಮೀಕ್ಷೆ ನಡೆಸಿ ರೈತರಿಗೆ ಬೆಳೆ ಪರಿಹಾರ ನೀಡಬೇಕು, ಕಾತರಿಕಿ ಗ್ರಾಮದಿಂದ ದದ್ದಲ ಗ್ರಾಮದ ರಸ್ತೆ ಸಂಪೂರ್ಣ ವಾಗಿ ಹದಗೆಟ್ಟಿದ್ದು ಗ್ರಾಮಸ್ಥರ ಸಂಚಾರಕ್ಕೆ ಬಾರಿ ತೊಂದರೆಯಾಗುತ್ತಿದೆ ಕೂಡಲೇ ರಸ್ತೆ ಅಭಿವೃದ್ಧಿ ಮಾಡಬೇಕು, ಚೀಮ್ಲಾಪೂರ ಕ್ರಾಸ್ ನಿಂದ ಗ್ರಾಮದವರೆಗೆ ರಸ್ತೆ ದುರಸ್ತಿ ಮಾಡಿಬೇಕು. ತಾಲೂಕಿನ ಎಲ್ಲಾ ಜಾತಿ ಜನಾಂಗದವರ ಅಂತ್ಯಸಂಸ್ಕಾರಕ್ಕೆ ರುದ್ರಭೂಮಿ ಮಂಜೂರು ಮಾಡಬೇಕು ಈ ಎಲ್ಲಾ ಬೇಡಿಕೆಗಳನ್ನು ಒಂದು ತಿಂಗಳೊಳಗಾಗಿ ಈಡೇರಿಸದಿದ್ದರೆ ಮಾನ್ಯ ತಸೀಲ್ದಾರ್ ಕಛೇರಿಯಿಂದ ರಾಯಚೂರು ಜಿಲ್ಲಾಧಿಕಾರಿ ಕಛೇರಿಯವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗುತ್ತದೆ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರ.ಕಾರ್ಯಾದರ್ಶಿ ಹನುಮಂತ ಜೆ ಸಿರವಾರ, ತಾಲೂಕಾಧ್ಯಕ್ಷ ಬಸವರಾಜ ಅಮರಾವತಿ, ಸಂಘಟನಾ ಕಾರ್ಯಾದರ್ಶಿ ಸಿಮೋನ್ ದೊಡ್ಡಮನಿ, ಜಿಲ್ಲಾ ಖಜಾಂಚಿ ಸುನೀಲ್ ಕುಮಾರ್, ತಾ.ಖಜಾಂಚಿ ಪ್ರದೀಪ್ ಕುಮಾರ, ನಗರ ಘಟಕಾಧ್ಯರಾದ ಪ್ರವೀಣಕುಮಾರ್, ಡಿ.ಶಾಂತಪ್ಪ ಇದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.