ತಹಶೀಲ್ದಾರ್ ಅಮಾನತ್ತಿಗೆ ಆಗ್ರಹ

ಲೈಂಗಿಕ ಕಿರುಕುಳ ಆರೋಪ

0

Gummata Nagari : Raichur News

ಮಾನ್ವಿ : ಪಟ್ಟಣದ ತಹಸೀಲ್ ಕಾರ್ಯಾಲಯದಲ್ಲಿ ಶಿರಸ್ತೇದಾರರಿಗೆ ಲೈಂಗಿಕ ಕಿರುಕುಳ ನೀಡಿದ ತಹಸೀಲ್ದಾರ ಅಮರೇಶ ಬಿರಾದಾರ ವಿರುದ್ಧ ಪ್ರಕರಣ ದಾಖಲಿಸಿ ಅಮಾನತ್ತುಗೊಳಿಸಿ ಕಾನೂನು ಕ್ರಮ ಜರುಗಿಸಲು ದಲಿತ ಸಂಘರ್ಷ ಸಮಿತಿ ಭೀಮ ಬಣ ಜಿಲ್ಲಾ ಘಟಕ ಪದಾಧಿಕಾರಿಗಳು ಶಿರೇಸ್ತೆದಾರರ ಮೂಲಕ ಜಿಲ್ಲಾಧಿಕಾರಿಗೆ ನೀಡಿರುವ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಪಟ್ಟಣದ ತಹಸೀಲ್ದಾರರ ಕಾರ್ಯಾಲಯದಲ್ಲಿ ಶಿರಸ್ತೇದಾರರೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಪ್ರಕರಣ ದಾಖಲಿಸುವಂತೆ ದಿನಾಂಕ: 23-09-2020 ರಂದು ಬೆಳಿಗ್ಗೆಯಿಂದ ರಾತ್ರಿವರೆಗೂ ಮಾನ್ವಿ ಪೊಲೀಸ್ ಠಾಣೆಯಲ್ಲಿ ಕುಳಿತುಕೊಂಡರು ಜಿಲ್ಲಾಧಿಕಾರಿಯವರ ಪರವಾನಿಗೆ ಇಲ್ಲದೆ ಪ್ರಕರಣ ದಾಖಲಿಸಲು ಆಗುವುದಿಲ್ಲ ಎಂದು ಹೇಳುವ ಮೂಲಕ ಒಂದು ದಿನ ಕಳೆದಿದೆ. ಈಗಾಗಲೇ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯು ಜಿಲ್ಲಾಧಿಕಾರಿಗಳಿಗೆ ದೂರು ಮತ್ತು ಕಿರುಕುಳ ನೀಡಿದ ಬಗ್ಗೆ ಸಿ.ಡಿ ನೀಡಿದ್ದು ಇರುತ್ತದೆ. ಅದರಂತೆ ಜಿಲ್ಲಾಧಿಕಾರಿಯವರು ಕೂಡ ತನಿಖೆಗೆ ಆದೇಶ ಮಾಡಿದ್ದಾರೆ. ಈ ತನಿಖೆಯು ಪಾರದರ್ಶಕವಾಗಿ ನಡೆಯಬೇಕಾದರೆ ತಹಸೀಲ್ದಾರ ಅಮರೇಶ ಬಿರಾದಾರವರನ್ನು ಅಮಾನತ್ತುಗೊಳಿಸಿ ಅವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದರೆ ಮಾತ್ರ ತನಿಖೆಯು ಪಾರದರ್ಶಕವಾಗಿ ನಡೆಯುತ್ತದೆ. ಇಲ್ಲದೆ ಇದ್ದಲ್ಲಿ ಅಧಿಕಾರದ ದುರುಪಯೋಗ ಮಾಡಿಕೊಳ್ಳುವ ಮೂಲಕ ದಲಿತ ಮಹಿಳೆಗೆ ಅನ್ಯಾಯ ಮಾಡಿದಂತಾಗುತ್ತದೆ.

ಯಾವುದೇ ಮಹಿಳೆಯರು ಸುಖಾಸುಮ್ಮನೆ ಒಬ್ಬರ ಮೇಲೆ ಲೈಂಗಿಕ ದೌರ್ಜನ್ಯದ ಅಥವಾ ಕಿರುಕುಳ ನೀಡಿದ್ದಾರೆ ಎಂಬ ಗಂಭೀರ ಸ್ವರೂಪದ ಆರೋಪ ಮಾಡಿ ಈ ಬಗ್ಗೆ ಪೊಲೀಸ್ ದೂರು ನೀಡಲು ಮುಂದಾಗಿರುವುದನ್ನು ಜಿಲ್ಲಾಧಿಕಾರಿಯವರು ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಧಿಕಾರದಲ್ಲಿರುವ ಒಬ್ಬ ಮಹಿಳೆ ದಿನಪೂರ್ತಿ ಪೊಲೀಸ್ ಠಾಣೆಯಲ್ಲಿ ಕುಳಿತುಕೊಂಡರೂ ದೂರು ದಾಖಲಿಸದೇ ಇರುವುದರಿಂದ ಸಾಮಾನ್ಯ ಮಹಿಳೆಯರ ಪರಿಸ್ಥಿತಿ ಏನು ಎಂಬುದು ಜನರ ಆರೋಪವಾಗಿದೆ.

ಆದ್ದರಿಂದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ತಹಸೀಲ್ದಾರ ಅಮರೇಶ ಬಿರಾದಾರ ವಿರುದ್ಧ ತಕ್ಷಣ ಪೊಲೀಸ್ ಪ್ರಕರಣ ದಾಖಲಿಸಿ ಮತ್ತು ತಕ್ಷಣ ಅಮಾನತ್ತುಗೊಳಿಸಿ ಕೂಡಲೇ ಪ್ರಕರಣವನ್ನು ಸಂಪೂರ್ಣ ತನಿಖೆ ಮಾಡಬೇಕು ಮತ್ತು ಕಿರುಕುಳಕ್ಕೆ ಒಳಗಾದ ಮಹಿಳೆಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದರಲ್ಲಿ ನಿರ್ಲಕ್ಷ್ಯ ತೋರಿದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ಎಚ್.ಹನುಮಂತ ಸೀಕಲ್, ಹಿರಿಯ ಮುಖಂಡ ನರಸಪ್ಪ ಜೂಕೂರು, ಕಾರ್ಯಾಧ್ಯಕ್ಷ ಸಾಬಣ್ಣ ಕಪಗಲ್, ಹನುಮಂತ್ರಾಯ ಕಪಗಲ್ ವಕೀಲರು, ಕಾಶಿನಾಥ ಕುರ್ಡಿ, ಜಿ. ಹನುಮಂತ ಉದ್ಬಾಳ್, ದತ್ತಾತ್ರೇಯ ಕೊಟ್ನೆಕಲ್ ವಕೀಲರು, ಬಸವರಾಜ್ ಪೋತ್ನಾಳ್, ತಾಯಣ್ಣ ಕಪಗಲ್, ನರಸಿಂಹ ಸೀಕಲ್, ಶ್ರೀನಿವಾಸ ನಂದಿಹಾಳ್ ಭೀಮಣ್ಣ ಕೆ.ಗುಡದಿನ್ನಿ, ಯಲ್ಲಪ್ಪ ವಕೀಲರು, ಯಲ್ಲಪ್ಪ ಉಟಕನೂರು ಸೇರಿದಂತೆ ಅನೇಕರು ಇದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.