ಗ್ರೇಸ್ ಅಂಕಗಳಿಗೆ ವಿವೇಕ್ ಇನ್ಫೋಟೆಕ್ ಆಗ್ರಹ

ದೋಷಪೂರಿತ ಸಿವಿಲ್ ಪೊಲೀಸ್ ಸಿಇಟಿ ಪ್ರಶ್ನೆಪತ್ರಿಕೆ : ೧೫ಕ್ಕೂ ಹೆಚ್ಚು ಪದಗಳು ಕಂಗ್ಲೀಷ್

0

ರಾಜ್ಯಾದ್ಯಂತ ಕಳೆದ ಭಾನುವಾರ ನಡೆದ ನಾಗರಿಕ ಪೊಲೀಸ್ ಸಿ.ಇ.ಟಿ. ಪರೀಕ್ಷೆಯಲ್ಲಿ ನೀಡಿರುವ ಪ್ರಶ್ನೆಪತ್ರಿಕೆ ದೋಷಪೂರಿತವಾಗಿದೆ ಎಂದು ಪ್ರತಿಷ್ಠಿತ ಐ.ಎ.ಎಸ್ ಮತ್ತು ಕೆ.ಎ.ಎಸ್ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವಾದ ವಿವೇಕ್ ಇನ್ಫೋಟೆಕ್ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಜಿ.ಮುರಳಿ ಆರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಪತ್ರಿಕೆಯ ಅವಾಂತರದ ಬಗ್ಗೆ ಸಾಕ್ಷ್ಯಾಧಾರ ಸಮೇತ ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕೋಲಾರ : ರಾಜ್ಯಾದ್ಯಂತ ಕಳೆದ ಭಾನುವಾರ ನಡೆದ ನಾಗರಿಕ ಪೊಲೀಸ್ ಸಿ.ಇ.ಟಿ. ಪರೀಕ್ಷೆಯಲ್ಲಿ ನೀಡಿರುವ ಪ್ರಶ್ನೆಪತ್ರಿಕೆ ದೋಷಪೂರಿತವಾಗಿದೆ ಎಂದು ಪ್ರತಿಷ್ಠಿತ ಐ.ಎ.ಎಸ್ ಮತ್ತು ಕೆ.ಎ.ಎಸ್ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವಾದ ವಿವೇಕ್ ಇನ್ಫೋಟೆಕ್ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಜಿ.ಮುರಳಿ ಆರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಪತ್ರಿಕೆಯ ಅವಾಂತರದ ಬಗ್ಗೆ ಸಾಕ್ಷ್ಯಾಧಾರ ಸಮೇತ ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸಿವಿಲ್ ಪೊಲೀಸ್ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಆಗಿರುವ ಪ್ರಮಾದಗಳು, ಬಳಕೆ ಮಾಡಬೇಕಾದ ಕನ್ನಡ ಪದಗಳು, ಇದು ಬಿಟ್ಟು ಕಂಗ್ಲೀಷ್‌ನಲ್ಲಿ ಪ್ರಶ್ನೆಗಳನ್ನು ಮುದ್ರಿಸಿದ್ದು, ಇದರಲ್ಲಿ ಕನ್ನಡದ ಕಗ್ಗೊಲೆಯಾಗಿದೆಯಲ್ಲದೆ, ಗ್ರಾಮೀಣ ಮತ್ತು ಕನ್ನಡ ಭಾಷಾ ಪರೀಕ್ಷಾರ್ಥಿಗಳಿಗೆ ಗೊಂದಲ ಹಾಗೂ ತೊಂದರೆ ಉಂಟಾಗಿದೆ ಎಂದು ತಿಳಿಸಿದರು.
೨೦೨೦ ಸೆಪ್ಟೆಂಬರ್ ೨೦ ರಂದು ರಾಜ್ಯದಾದ್ಯಂತ ನಾಗರೀಕ ಪೊಲೀಸ್ ಪೇದೆ ಪುರುಷ ಮತ್ತು ಮಹಿಳೆ ಸೇರಿದಂತೆ ಹೈದರಾಬಾದ್ ಕರ್ನಾಟಕ ಸೇರಿದಂತೆ, ಒಟ್ಟು ೨,೫೬೫ (ಹೈದರಾಬಾದ್ ಕರ್ನಾಟಕ ೫೫೮ ಉಳಿಕೆ ೨,೦೦೭) ಹುದ್ದೆಗಳಿಗೆ, ಲಕ್ಷಾಂತರ ಮಂದಿ ಅಭ್ಯರ್ಥಿಗಳು, ಪರೀಕ್ಷೆಯನ್ನು ಎದುರಿಸಿದ್ದು ಪ್ರಶ್ನೆಪತ್ರಿಕೆಯಲ್ಲಿ ಆಗಿರುವ ಪ್ರಮಾದಕ್ಕೆ ಆತಂಕದಲ್ಲಿದ್ದಾರೆ ಎಂದರು.
ಆಗಿರುವ ಪ್ರಮಾದದ ಬಗ್ಗೆ ತನಿಖೆ ನಡೆಸಿ ಈ ಪದಗಳ ಬಳಕೆಯ ಪ್ರಶ್ನೆಗಳಿಗೆ ಗ್ರೇಸ್ ಮಾರ್ಕ್ಸ್ಗಳನ್ನು ನೀಡಬೇಕೆಂದು ಹಾಗೂ ಮುಂದಿನ ಪರೀಕ್ಷೆಗಳಲ್ಲಿ, ಈ ರೀತಿಯ ಗೊಂದಲಗಳಿಗೆ ಅವಕಾಶ ಮಾಡಿಕೊಡಬಾರದೆಂದು, ಸಂಬAಧಿಸಿದ ಪೊಲೀಸ್ ಪರೀಕ್ಷಾ ಪ್ರಾಧಿಕಾರ ಹಾಗೂ ಸರ್ಕಾರವನ್ನು ಆಗ್ರಹಿಸಿದರು.
ಸಂಸ್ಥೆಯ ಉಪನ್ಯಾಸಕ ಎಸ್.ಆರ್.ರಾಕೇಶ್ ಮಾತನಾಡಿ, ಪರೀಕ್ಷೆಗಳಲ್ಲಿ ಆಯಾ ಭಾಷಾ ಪ್ರೌಢಿಮೆಯ ಅಭ್ಯರ್ಥಿಗಳು ತಮಗೆ ಅರ್ಥವಾಗುವ ಭಾಷೆಯಲ್ಲಿ ಪ್ರಶ್ನೆಗಳನ್ನು ಓದಿ ಉತ್ತರಿಸುತ್ತಿದ್ದರು. ಇದರಿಂದ ಯಾವುದೇ ತೊಂದರೆ ಇರುತ್ತಿರಲಿಲ್ಲ.
ಆದರೆ ಇತ್ತೀಚೆಗೆ ನಡೆಯುತ್ತಿರುವ ಪೊಲೀಸ್ ಮತ್ತು ಕೆ.ಪಿ.ಎಸ್.ಸಿ ಪ್ರಶ್ನೆಪತ್ರಿಕೆಗಳಲ್ಲಿ ಭಾಷಾ ಗೊಂದಲ ಮುಂದುವರಿಯುತ್ತಿದೆ. ರಾಜ್ಯ ಭಾಷೆಯ ಕನ್ನಡ ಇರುವಾಗ ಪ್ರಶ್ನೆಪತ್ರಿಕೆಗಳಲ್ಲಿ ಕನ್ನಡವನ್ನೇ ಸರಿಯಾಗಿ ಬಳಸಿದಿರುವುದು ಖಂಡನೀಯ ಎಂದರು.
ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಯಾರು ಮಾಡುವ ಪ್ರಶ್ನೆಪತ್ರಿಕೆ ಸಂಪುಟದಲ್ಲಿ ಗ್ರಾಮೀಣ, ಕನ್ನಡ ಮಾದ್ಯಮ, ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ಸ್ಪರ್ಧಾರ್ಥಿಗಳಿಗೆ ಕನ್ನಡ ಮತ್ತು ಆಂಗ್ಲ ಭಾಷೆಯ ಸಾಮರ್ಥ್ಯಕ್ಕೆ ಅನುಕೂಲವಾಗುವಂತೆ, ಕನ್ನಡ (ಅಚ್ಚ ಕನ್ನಡ ಭಾಷೆಯಲ್ಲಿ) ಮತ್ತು ಆಂಗ್ಲ (ಇಂಗ್ಲೀಷ್ ಭಾಷೆಯಲ್ಲಿ) ಅಕ್ಕ-ಪಕ್ಕದಲ್ಲಿ ಅಚ್ಚುಕಟ್ಟಾಗಿ ಮುದ್ರಿಸಿದ ಪ್ರಶ್ನಾವಳಿಗಳ ಪ್ರಶ್ನೆಪತ್ರಿಕೆಯನ್ನು ಪರೀಕ್ಷಾರ್ಥಿಗಳಿಗೆ ವಿತರಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇಂಗ್ಲೀಷ್ ಭಾಷೆಯ ಪದಗಳನ್ನು ಕನ್ನಡದಲ್ಲಿ ಬರೆಯುವ ಮೂಲಕ ಕನ್ನಡ ಮಾದ್ಯಮದವರಿಗೆ ಅನ್ಯಾಯವೆಸಗಲಾಗುತ್ತಿದೆ ಎಂದು ಆರೋಪಿಸಿದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎ.ಪ್ರಮೋದ್ ಕುಮಾರ್ ಮಾತನಾಡಿ, ೨೦೨೦ ಸೆಪ್ಟಂಬರ್ ೨೦ ರಂದು ರಾಜ್ಯಾಧ್ಯಂತ ನಡೆದ ಸಿವಿಲ್ (ನಾಗರೀಕ) ಪೊಲೀಸ್‌ನ ೧೦೦ ಅಂಕಗಳ ಪ್ರಶ್ನಾವಳಿಗಳಲ್ಲಿ ೧೫ ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕಂಗ್ಲೀಷ್ ಮಾಡಿದ ಪರಿಣಾಮ ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ಅಭ್ಯರ್ಥಿಗಳಿಗೆ ಅರ್ಥವಾಗದೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ತಿಳಿಸಿದರು.
ಇದೇ ಪರೀಕ್ಷೆಯಲ್ಲದೆ ರಾಜ್ಯ ಸರ್ಕಾರ ಆಗಾಗ್ಗೆ ನಡೆಸುವ ಎಸ್.ಡಿ.ಎ, ಎಫ್.ಡಿ.ಎ ಹಾಗೂ ಪೊಲೀಸ್ ಪರೀಕ್ಷೆಗಳು ಸೇರಿದಂತೆ, ಇತರೆ ರೀತಿಯ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳೂ ಸಹ ಕನ್ನಡ ಅಭಾಸದ, ಕಂಗ್ಲೀಷ್‌ನ, ಗೊಂದಲದ ಪದಬಳಕೆಯ ಪ್ರಶ್ನೆಗಳು ಹೆಚ್ಚಾಗುತ್ತಿದ್ದು, ಇದನ್ನೂ ಸಹ ಸರಿಪಡಿಸುವ ಕೆಲಸ ಸರ್ಕಾರ ಮಾಡಬೇಕಿದೆ ಎಂದು ಆಗ್ರಹಿಸಿದರು.
ಇಲ್ಲಿ ಆಗಿರುವ ಕನ್ನಡದ ಬದಲಾಗಿ ಕಂಗ್ಲೀಷ್ ಹೇರಿಕೆ ಹಾಗೂ ತಪ್ಪು ಉಚ್ಚಾರಣೆಯ ಪದಗಳಿಗೆ ಸಂಬAಧಿಸಿದ ಪ್ರಾಧಿಕಾರವು ಅಂಕಗಳನ್ನು ನೀಡಬೇಕೆಂದು, ಹಾಗೂ ಮುಂದೆ ಇಂತಹ ಪ್ರಮಾದಗಳು ಆಗದಂತೆ ತಜ್ಞ ಭಾಷಾಂತರ ಪರಿಣಿತರನ್ನು ಬಳಸಿಕೊಂಡು, ಪ್ರಶ್ನೆಪತ್ರಿಕೆಯನ್ನು ತಯಾರು ಮಾಡಬೇಕೆಂದು ಒತ್ತಾಯಿಸಿದರು.
ಪರೀಕ್ಷಾರ್ಥಿ ಜಿ.ಎಸ್.ಗೋಪಾಲಕೃಷ್ಣ ಮಾತನಾಡಿ, ನಾನು ಕೆ.ಜಿ.ಎಫ್ ಕೇಂದ್ರದಲ್ಲಿ ಪೊಲೀಸ್ ಸಿವಿಲ್ ಪರೀಕ್ಷೆಗೆ ಹಾಜರಾಗಿ ಪ್ರಶ್ನೆಪತ್ರಿಕೆ ನೋಡಿದಾಗ ಆರಂಭದಲ್ಲಿ ಅಘಾತವಾಯಿತು. ನಾನು ಕನ್ನಡ ಮಾದ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ್ದು ಅರ್ಥವಾಗದ ರೀತಿಯಲ್ಲಿ ಇಂಗ್ಲೀಷ್ ಪದಗಳನ್ನು ಯಥಾವತ್ತಾಗಿ ಕನ್ನಡದಲ್ಲಿ ಮುದ್ರಿಸಿದ್ದರು. ಈ ಪದಗಳು ಅರ್ಥವಾಗದೆ ಅನಿವಾರ್ಯವಾಗಿ ನೋವಿನಿಂದ ಕೈ ಬಿಡಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸ್ಪರ್ಧಾರ್ಥಿ ವಿ.ರಾಜ್‌ಕುಮಾರ್ ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.