ಅಂಚೆ ಕಚೇರಿಗೆ ನಿತ್ಯ ಅಲೆದಾಟ!

ಫಲಾನುಭವಿಗಳಿಗೆ ಸಮಯಕ್ಕೆ ಸಿಗದ ಮಾಸಾಶನ

0

Gummata Nagari : Kalaburgi News

ಚಿತ್ತಾಪುರ : ಸರಕಾರದಿಂದ ವೃದ್ಧರು ಹಾಗೂ ಅಂಗವಿಕಲರಿಗೆ ದೊರೆಯಬೇಕಾದ ಮಾಸಾಶನ ಹಣ ನಿಗದಿತ ಅವಧಿಯಲ್ಲಿ ಅರ್ಹ ಫಲಾನುಭವಿಗಳ ಕೈ ಸೇರದ ಕಾರಣ ತಮ್ಮ ಕೆಲಸ ಬಿಟ್ಟು ಪ್ರತಿನಿತ್ಯ ಚಿತ್ತಾಪುರ ಉಪ ಅಂಚೆ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಫಲಾನುಭವಿಗಳು ಹೇಳುತ್ತಿದ್ದಾರೆ.

ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಹಾಗೂ ಅಂಗವಿಕಲ ಪೋಷಣಾ ವೇತನ, ಇತರ ವೇತನಗಳು ಸರಿಯಾದ ಸಮಯಕ್ಕೆ ನಮಗೆ ದೊರೆತಿಲ್ಲ ಹಾಗೂ ನಮ್ಮ ಮನೆಗಳಿಗೂ ಸಹ ತಂದು ಕೊಡುತ್ತಿಲ್ಲ ಹೀಗಾಗಿ ಪಟ್ಟಣದ ಹಾಗೂ ತಾಲೂಕಿನ ಗ್ರಾಮಗಳ ವೃದ್ಧರೂ ಹಾಗೂ ಅಂಗವಿಕಲರು ದಿನನಿತ್ಯ ಅಂಚೆ ಕಛೇರಿ ಬಳಿ ಅಲೆದಾಡಿ ಅಲೆದಾಡಿ ಬೇಸತ್ತು ಹೋಗುತ್ತಿದ್ದಾರೆ.

ಸರಕಾರದ ವಿವಿಧ ಇಲಾಖೆಗಳು ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿಗೆ ತಲುಪಿಸಬೇಕಾದ ಪಿಂಚಣಿ ಹಣಕ್ಕಾಗಿ ತಿಂಗಳೆಲ್ಲ ಕಾಯುವ ಪರಿಸ್ಥಿತಿ ವೃದ್ಧರದಾಗಿದೆ. ಈ ಹಣದಲ್ಲೇ ಅವರ ಔಷಧಿಗಳು, ಇತ್ಯಾದಿ ಖರ್ಚು ವೆಚ್ಚಗಳನ್ನು ನಿಭಾಯಿಸಿಕೊಳ್ಳುವುದಲ್ಲದೇ ಇಷ್ಟಾದ್ರೂ ಹಣ ಬರುತ್ತದೆ ಎಂಬ ಕಾರಣಕ್ಕಾಗಿಯೇ ವೃದ್ಧರಿಗೆ ಅವರ ಮನೆಗಳಲ್ಲಿ ಇನ್ನೂ ಮಹತ್ವ ಉಳಿದಿದೆ.ಇಂತಹ ಸ್ಥಿತಿಯಲ್ಲಿ ಸಿಗುವ 500 ರೂಗಳಿಗಾಗಿ ತಿಂಗಳೆಲ್ಲ ಅಲೆಸುವ ಮುನ್ನ ಅಂಚೆ ಇಲಾಖೆ ಮತ್ತು ಇತರ ಸಂಬAದಪಟ್ಟ ಇಲಾಖೆಗಳು ಫಲಾನುಭವಿಗಳಿಗೆ ಸುಲಭವಾಗಿ ಹಣ ತಲುಪುವಂತೆ ಮಾಡಬೇಕೆನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.