ಅನಧಿಕೃತ ನೀರು ಸರಬರಾಜು ಘಟಕಗಳ ಮೇಲೆ ದಾಳಿ, ಜಪ್ತಿ

0

Gummata Nagari : Kalaburgi News

ಕಲಬುರಗಿ : ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿ ಡಾ. ಶಿವಶರಣಪ್ಪಾ ಎಂ.ಡಿ ಭೂಸನೂರ ಹಾಗೂ ಸಿಬ್ಬಂದಿನ್ನೊಳಗೊಂಡ ತಂಡವು ಕಲಬುರಗಿ ನಗರದಲ್ಲಿ ಅನಧೀಕೃತವಾಗಿ ಸರಬರಾಜು ಮಾಡುತ್ತಿರುವ ನಾಲ್ಕು ನೀರಿನ ಘಟಕಗಳಿಗೆ ಅನಿರೀಕ್ಷಿತವಾಗಿ ದಾಳಿ ನಡೆಸಿ ಜಪ್ತಿ ಮಾಡಲಾಯಿತು.

ಅಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಮತ್ತು 2011ರ ಅಡಿ ಜಿಲ್ಲೆಯಲ್ಲಿ ಪರವಾನಗಿ ಮತ್ತು ನೋಂದಣಿ ಮಾಡಿಕೊಳ್ಳದೇ ಅನಧಿಕೃತವಾಗಿ ನಡೆಸುತ್ತಿರುವ ನೀರಿನ ಘಟಕಗಳು ಮತ್ತು ಸರಬರಾಜು ಮಾಡುತ್ತಿರುವ ವಾಹನಗಳು ಸ್ವಯಂ ಪ್ರೇರಿತರಾಗಿ ನೀರಿನ ಘಟಕಗಳನ್ನು ಮುಚ್ಚಬೇಕು. ಅನಧಿಕೃತವಾಗಿ ಘಟಕಗಳನ್ನು ನಡೆಸುತ್ತಿರುವುದು ಕಂಡು ಬಂದಲ್ಲಿ ಅಂತಹ ಘಟಕಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

ಐ.ಎಸ್.ಐ. ಪರವಾನಿಗೆ ಪಡೆದ ಘಟಕಗಳು ಒಂದು ವಾರದೊಳಗಾಗಿ ಎಲ್ಲಾ ಹಳೆಯ ಕ್ಯಾನ್‌ಗಳನ್ನು ಬದಲಿಸಿ ಹೊಸ ಕ್ಯಾನ್‌ಗಳನ್ನು ಉಪಯೋಗಿಸಬೇಕು. ಐ.ಎಸ್.ಐ., ಬಿ.ಎಸ್.ಐ. ದಿಂದ ಪಡೆದ ಪರವಾನಿಗೆ ಸಂಖ್ಯೆ ಮತ್ತು FSSAI ಪರವಾನಿಗೆ ಸಂಖ್ಯೆ ಹಾಗೂ ಚಿಹ್ನೆ ಹೊಂದಿದ ಹಾಗೂ Date of Manufacture, Best Before ಮತ್ತು ಸೀಲ್ಡ್ (Sealed Cover) ಮಾಡಿದ ಕ್ಯಾನ್‌ಗಳನ್ನು ಮಾತ್ರ ಸರಬರಾಜು ಮಾಡಬೇಕು. ನೀರು ಸರಬರಾಜು ಮಾಡುವ ವಾಹನಗಳು FSSAI ಪರವಾನಿಗೆ/ನೋಂದಣಿ ಮಾಡಿಸಿಕೊಳ್ಳಬೇಕು. ಇದಕ್ಕೆ ತಪ್ಪಿದಲ್ಲಿ ಅಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ-2006 ಮತ್ತು 2011 ರ ನಿಯಮದಡಿ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.