ನಾಯಿ ಮರಿಗಳಿಗೆ ಹಾಲು ಕುಡಿಸುತ್ತಿರುವ ಹಂದಿ!

0

Gummata Nagari

ಜಗದೇವ ಎಸ್ ಕುಂಬಾರ

ಚಿತ್ತಾಪುರ : ಮನುಷ್ಯ ಸೇರಿದಂತೆ ಕೆಲ ಪ್ರಾಣಿಗಳನ್ನು ನಾನು ನನ್ನದು ಎಂಬ ಸ್ವಾರ್ಥವೇ ಹೆಚ್ಚು ಇರುವ ಸಂದರ್ಭದಲ್ಲಿ ತಾಲೂಕಿನ ಬಸವೇಶ್ವರ ಕಲ್ಯಾಣ ಮಂಟಪದ ಹತ್ತಿರ ಹಂದಿಯೊಂದು ನಾಯಿ ಮರಿಗಳಿಗೆ ಹಾಲು ಕುಡಿಸುವ ಮೂಲಕ ತಾಯಿ ಪ್ರೇಮ ಮರೆದಿದೆ. ಈ ದೃಶ್ಯ ನೋಡಿದ ಮೇಲೆ ಪ್ರಾಣಿಗಳಿಗಿರುವಷ್ಟು ಮಾನವೀಯತೆ ಮನುಷ್ಯನಲ್ಲಿ ಇಲ್ಲದಂತಾಯಿತೇ ಎಂದೆನಿಸಿತು.

ಸಾಮಾನ್ಯವಾಗಿ ನಾಯಿ ಹಾಗೂ ಹಂದಿ ಮಧ್ಯೆ ಹೆಚ್ಚು ಕಿತ್ತಾಟ ನಡೆಯುತ್ತಿರುತ್ತದೆ. ಆದರೆ ಇಲ್ಲಿ ಹಂದಿ ನಾಯಿ ಮರಿಗಳಿಗೆ ಹಾಲುಣಿಸುವ ಮೂಲಕ ಮಾನವೀಯತೆ ಮೆರೆದಿದೆ. ಸಮಾಜದಲ್ಲಿ ಪ್ರೀತಿ, ಪ್ರೇಮ, ವಿಶ್ವಾಸದಿಂದ ಬದುಕು ಸಾಧಿಸಬಹುದು ಎಂದು ಪ್ರಾಣಿಗಳು ತೋರಿಸಿಕೊಟ್ಟಿದೆ. ಎಂಥಾ ಕಷ್ಟವನ್ನು ಬಂದರು ಬದುಕಬೇಕು ಎನ್ನುವುದು ಕೇವಲ ಮಾನವನಿಗೆ ಮಾತ್ರ ಸೀಮಿತವಲ್ಲ ಪ್ರಾಣಿ ಪಕ್ಷಿಗಳಿಗೂ ಅನ್ವಯವಾಗುತ್ತೆ ಎನ್ನುವುದಕ್ಕೆ ಈ ದೃಶ್ಯವೇ ಸಾಕ್ಷಿಯಾಗಿದೆ.

ಪ್ರತಿನಿತ್ಯ ಈ ರೀತಿಯ ಹಲವು ಘಟನೆಗಳು ನಮ್ಮ ಸುತ್ತಮುತ್ತಲೂ ನಡೆಯುತ್ತಲಿರುತ್ತದೆ. ಕೆಲವೊಂದು ಘಟನೆಗಳು ಮಾತ್ರ ನಮಗೆ ಕಾಣಲು ಸಿಗುತ್ತದೆ. ಒಂದು ಕಾಲವಿತ್ತು ಆಗ ಮಾನವ ಪ್ರಾಣಿಗಳಂತೆ ಕಾಡುಗಳಲ್ಲಿ ಜೀವಿಸಿ ಗಡ್ಡೆ ಗೆಣಸುಗಳನ್ನು ತಿಂದು ಪ್ರಾಣಿಗಳ ಜೊತೆಯಲ್ಲೆ ಜೀವಿಸುತ್ತಿದ್ದಂತಹ ಕಾಲ.

ವರ್ಷಗಳು ಕಳೆದಂತೆ ಮಾನವ ಆಧುನೀಕರಣದ ಕಡೆಗೆ ಮುಖ ಮಾಡಿದ ಕೆಲವೊಮ್ಮೆ ಮಾನವೀಯ ಗುಣಗಳನ್ನು ಬೆಳೆಸಿಕೊಂಡ, ಕೆಲವೊಮ್ಮೆ ಎಲ್ಲವನ್ನೂ ಗಾಳಿಗೆ ತೂರಿ ತನಗೆ ಮನಬಂದತೆ ಜೀವನ ನಡೆಸಲು ತೊಡಗಿದೆ. ಮನುಷ್ಯನಿಗೆ ಯಾವಾಗ ತನ್ನ ಅಸ್ಥಿತ್ವದ ಬಗ್ಗೆ ಸರಿಯಾದ ಜ್ಞಾನ ಇಲ್ಲದೇ ಹೋಯಿತೋ ಆಗ ಮನುಷ್ಯ ಮೃಗಗಳಿಗಿಂತ ಕಡೆಯಾಗಿ ಹೋದ. ಈಗಲೂ ಕೂಡ ನಾವು ನೋಡುವುದಾದರೇ ಮನುಷ್ಯ ಸಾಮಾಜಿಕ ಜೀವಿ ಎನ್ನುವುದನ್ನು ಮರೆತು ಸಮಾಜದಿಂದ ದೂರ ಸರಿಯಲು ಪ್ರಯತ್ನಿಸಿ ತನ್ನ ಕುಟುಂಬ ಸಂಬಂಧ, ನೆರೆಕರೆಯವರೊಂದಿಗಿನ ಸಂಬಂಧ, ತಾನು ಜೀವಿಸುವ ಸಮಾಜದೊಂದಿಗಿನ ಸಂಬಂಧವನ್ನು ತೊರೆದು ಬಹುದೂರ ನಡೆಯಲು ಪ್ರಯತ್ನಿಸಿದ ಇದರಿಂದಾಗಿ ಪರಸ್ಪರ ಪ್ರೀತಿ, ಸ್ನೇಹ, ಶಾಂತಿ, ಅನುಕಂಪ ಎಲ್ಲವೂ ಕೂಡ ಅವನಲ್ಲಿ ಇಲ್ಲದಂತಾಯಿತು. ಆಧುನಿಕ ಶಿಕ್ಷಣವನ್ನು ಪಡೆದ ಮನುಷ್ಯ ಆಧುನಿಕತೆಗೆ ಮಾರು ಹೋಗಿ ಕುಟುಂಬ ಸಂಬಂಧದಿಂದ ದೂರ ಸರಿದ, ತನ್ನನ್ನು ಹೊತ್ತು ಹೆತ್ತವರನ್ನೇ ವೃದ್ದಾಶ್ರಕ್ಕೆ ಅಟ್ಟಲೂ ಕೂಡ ಮುಂದಾದ. ಇನ್ನೊಂದು ಕಡೆಯಲ್ಲಿ ನಾವು ಏನು ಪ್ರಾಣಿಗಳನ್ನು ಕಡೆಗಳಿಸುತ್ತೇವೆಯೋ ಅಂತಹ ಪ್ರಾಣಿಗಳೆ ಅದೇಷ್ಟೊ ಮಾನವ ಜೀವಗಳನ್ನು ರಕ್ಷಿಸಿದ ಉದಾಹರಣೆಗಳು ಬಹಳಷ್ಟು ಇದೆ. ಮತ್ತು ಅವುಗಳು ತನ್ನ ಕುಟುಂಬದೊAದಿಗೆ ಜೀವನ ನಡೆಸುವ ನಿದರ್ಶನಗಳು ಕೂಡ ನಾವು ಕಾಣಬಹುದಾಗಿದೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.