ತಹಸೀಲ್ ಕಚೇರಿಯಲ್ಲಿ ಕೊಳೆಯುತ್ತಿವೆ ಕಿಟ್ಗಳು!

0

Gummata Nagari : Kalaburgi News

ಚಿತ್ತಾಪುರ : ಕೋವಿಡ್ -19 ಸಮಯದಲ್ಲಿ ನಿರ್ಗತಿಕರಿಗೆ ಬಡ ಕುಟುಂಬಗಳಿಗೆ ಓರಿಯಂಟ್ ಸಿಮೆಂಟ್ ಕಂಪನಿವರು ತಹಸೀಲ್ದಾರ್ ಉಮಾಕಾಂತ್ ಹಳ್ಳೆ ಅವರಿಗೆ 500 ಆಹಾರ ಕಿಟ್ ವಿತರಣೆ ಮಾಡಲು ನೀಡಿದರು. ಆದರೆ ತಹಸೀಲ್ದಾರ್ ಅವರ ನಿರ್ಲಕ್ಷತನದಿಂದ ನಿರ್ಗತಿಕರಿಗೆ ಬಡ ಕುಟುಂಬದವರಿಗೆ ತಲುಪಬೇಕಾದ ಕಿಟ್ ಗಳು 6 ತಿಂಗಳು ಕಳೆದರೂ ಸಹ ತಹಸೀಲ್ ಕಾರ್ಯಾಲಯದಲ್ಲಿ ಇನ್ನೂ ಕೊಳೆಯುತ್ತಿವೆ.

ಒಂದು ಕಿಟ್ 16ಕೆ.ಜಿ ತೂಕದ ಆಹಾರ ಕಿಟ್ ನಲ್ಲಿ 5ಕಿಲೋ ಅಕ್ಕಿ (ಸೋನಾ ಮಸೂರಿ), 5ಕಿಲೋ ಗೋಧಿ ಹಿಟ್ಟು, 2ಕಿಲೋ ತೊಗರಿಬೇಳೆ, 2ಕಿಲೋ ಸಕ್ಕರೆ, 50ಗ್ರಾಂ ಸಾಸುವೆ, 50ಗ್ರಾಂ ಜೀರಿಗೆ, 100ಗ್ರಾಂ ಅರಸಿನ ಪುಡಿ, 100ಗ್ರಾಂ ಕಾರಪುಡಿ, 1 ಡೆಟಾಲ್ ಸಾಬೂನ್, 1 ಸ್ಯಾನಿಟೈಸರ್, ಈ ಕಿಟ್ ನಲ್ಲಿ ಈ ಎಲ್ಲಾ ಸಾಮಾನುಗಳನ್ನು ಬಡವರಿಗೆ ನೀಡಿದೆ ತಹಸೀಲ್ ಕಾರ್ಯಾಲಯದಲ್ಲಿ ಇನ್ನೂ ಯಾಕೆ ಇಟ್ಟಿದ್ದಾರೆ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.